ಪಕ್ಕಾ ದಕ್ಷಿಣ ಭಾರತದ ಶೈಲಿಯಲ್ಲಿ ನೀವೆಂದು ತಿಂದಿರದ ಸಾಗು ಮಾಡುವುದು ಹೇಗೆ ಗೊತ್ತೇ?? ಇಷ್ಟು ರುಚಿಯಾದದ್ದು ನೀವೆಂದು ತಿಂದಿರುವುದಿಲ್ಲ.
ಪಕ್ಕಾ ದಕ್ಷಿಣ ಭಾರತದ ಶೈಲಿಯಲ್ಲಿ ನೀವೆಂದು ತಿಂದಿರದ ಸಾಗು ಮಾಡುವುದು ಹೇಗೆ ಗೊತ್ತೇ?? ಇಷ್ಟು ರುಚಿಯಾದದ್ದು ನೀವೆಂದು ತಿಂದಿರುವುದಿಲ್ಲ.
ನಮಸ್ಕಾರ ಸ್ನೇಹಿತರೇ ಇಂದು ನೀವೆಂದು ತಿಂದಿರದ ರೀತಿಯ ಸಾಗು ವಿನ ಬಗ್ಗೆ ತಿಳಿದುಕೊಳ್ಳೋಣ. ಇದು ಯಾವ ರೀತಿ ಸಾಕು ಎಂದು ಯೋಚಿಸುತ್ತಿದ್ದೀರಾ ಅದುವೆ ಸೀಮೆ ಬದನೆಕಾಯಿ ಸಾಗು. ನೀವು ಇಷ್ಟು ದಿನ ತಿಂದ ಸಾಗು ಗೂ ಇವತ್ತು ಇಲ್ಲಿ ನೋಡುತ್ತಿರುವ ಸಾಗುವ ಬಹಳಷ್ಟು ವ್ಯತ್ಯಾಸವಿದೆ. ರುಚಿಯಂತೂ ಬಹಳ ಅದ್ಭುತ ಹಾಗೂ ಆರೋಗ್ಯಕರ. ಸ್ನೇಹಿತರೆ ಈ ಸಾಗು ವಿಗೆ ಬೇಕಾಗುವ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳೋಣ.
ಮೊದಲಿಗೆ ಈ ಸಾಗು ತಯಾರು ಮಾಡಲು ಸೀಮೆಬದನೆಕಾಯಿ 1/2 ಕೆಜಿ. ಈ ಸೀಮೆಬದನೆಕಾಯಿ ಸಿಪ್ಪೆಯನ್ನು ತೆಗೆದು ಸಣ್ಣ ಸಣ್ಣ ತುಂಡುಗಳಾಗಿ ಮಾಡಿಕೊಳ್ಳಬೇಕು. ಕಡಲೆ ಬೇಳೆ ಅರ್ಧ ಕಪ್, ತೆಂಗಿನಕಾಯಿ ತುರಿ ಅರ್ಧ ಕಪ್, ಈರುಳ್ಳಿ 2, ಟೊಮೆಟೋ ಹಣ್ಣು 2, ಕೊತ್ತಂಬರಿ ಸೊಪ್ಪು ಒಂದು ಹಿಡಿ, ಗಸಗಸೆ 1 ಟೇಬಲ್ ಸ್ಪೂನ್, ಧನಿಯಾ ಕಾಳು 1 ಟೇಬಲ್ ಸ್ಪೂನ್, ಶುಂಠಿ 1 ಇಂಚು, ಬೆಳ್ಳುಳ್ಳಿ 1 ಗೆಡ್ಡೆ, ಬೆಲ್ಲ 1 ಟೀಸ್ಪೂನ್ ಅಳತೆ, ಚಕ್ಕೆ 1 ಇಂಚು, ಲವಂಗ 4, ಏಲಕ್ಕಿ ಕಾಯಿ 4 ಮತ್ತು ಹಸಿಮೆಣಸಿನಕಾಯಿ 10 ಮತ್ತು ಹುರಿಗಡಲೆ 1 ಟೇಬಲ್ ಸ್ಪೂನ್, ಅರಿಸಿನದಪುಡಿ ಅರ್ಧ ಟೀ ಸ್ಪೂನ್, ಸಾಸಿವೆ ಒಗ್ಗರಣೆಗೆ, ಎಣ್ಣೆ 2 ಟೇಬಲ್ ಸ್ಪೂನ್, ಕರಿಬೇವಿನ ಸೊಪ್ಪು ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು ಈ ಪದಾರ್ಥಗಳು ಸೀಮೆಬದನೆಕಾಯಿ ಸಾಗು ಮಾಡಲು ಬೇಕಾಗುವ ಅತ್ಯಗತ್ಯ ಪದಾರ್ಥಗಳು.
ನಂತರ ಈ ಪದಾರ್ಥಗಳನ್ನು ಉಪಯೋಗಿಸಿಕೊಂಡು ಸೀಮೆಬದನೆಕಾಯಿ ಸಾಗು ಮಾಡುವ ಬಗ್ಗೆ ತಿಳಿದುಕೊಳ್ಳೋಣ. ಮೊದಲಿಗೆ ನಾವು ತೆಗೆದುಕೊಂಡ ಅರ್ಧ ಕಪ್ ಅಳತೆಯ ಕಡಲೆ ಬೇಳೆ, ಒಂದು ಕುಕ್ಕರಿಗೆ ಸೇರಿಸಿಕೊಂಡು ನಂತರ ಈಗಾಗಲೇ ಹಚ್ಚಿಕೊಂಡ ಸೀಮೆ ಬದನೆಕಾಯಿಯನ್ನು ಬೇರೆಸಿಕೊಳ್ಳಬೇಕು. ನಂತರ ಅದಕ್ಕೆ ಒಂದು ಕಪ್ ನೀರನ್ನು ಸೇರಿಸಿಕೊಂಡು ಸ್ವಲ್ಪ ಉಪ್ಪನ್ನು ಬೆರೆಸಿಕೊಳ್ಳಬೇಕು. ಈಗ ಕುಕ್ಕರ್ ಅನ್ನು ಸ್ಟೌವ್ ಮೇಲೆ ಇಟ್ಟು ಎರಡು ವಿಸಿಲ್ ಹಾಕಿಸಿಕೊಳ್ಳಬೇಕು. ನಂತರ ಸಾಗುವಿಗೆ ಬೇಕಾದ ಮಸಾಲ ಪದಾರ್ಥವನ್ನು ತಯಾರು ಮಾಡಿಕೊಳ್ಳೋಣ.
ಮೊದಲಿಗೆ ಒಂದು ಮಿಕ್ಸಿ ಜಾರನು ತೆಗೆದುಕೊಂಡು ಅದಕ್ಕೆ ಹಸಿಮೆಣಸಿನಕಾಯಿ, ಏಲಕ್ಕಿ ಕಾಯಿ, ಲವಂಗ, ಚಕ್ಕೆ, ಸೇರಿಸಿಕೊಳ್ಳಬೇಕು. ನಂತರ ಧನಿಯಾ ಕಾಳು, ಗಸಗಸೆ, ಶುಂಠಿ, ಬೆಳ್ಳುಳ್ಳಿ, ಹುರಿಗಡಲೆ, ನಂತರ ಈರುಳ್ಳಿ ಯನು ಸ್ಪಲ್ಪ ಸೇರಿಸಿಕೊಳ್ಳಬೇಕು. ಟೊಮೋಟೊ ಸ್ವಲ್ಪ, ತೆಂಗಿನತುರಿ ಯನ್ನೂ ಮಿಕ್ಸಿ ಜಾರಿಗೆ ಹಾಕಿಕೊಳ್ಳಬೇಕು. ಜೊತೆಗೆ ಸ್ವಲ್ಪ ಕೊತ್ತಂಬರಿ ಯನ್ನು ಹಾಕಿಕೊಳ್ಳಬೇಕು. ಈ ಪದಾರ್ಥಗಳನ್ನು ಚೆನ್ನಾಗಿ ರುಬಿ ಕೊಳ್ಳಬೇಕಾಗುತ್ತದೆ. ನಂತರ ಸ್ವಲ್ಪ ಒಗ್ಗರಣೆ ಮಾಡಿಕೊಳ್ಳಬೇಕಾಗುತ್ತದೆ.
ಬಾಂಡಲಿ ಯನ್ನು ಗ್ಯಾಸ್ ಸ್ಟವ್ ಮೇಲೆ ಇಟ್ಟು ಬಿಸಿ ಮಾಡಿಕೊಳ್ಳಬೇಕು. ನಂತರ ಅದಕ್ಕೆ 2 ಟೇಬಲ್ ಸ್ಪೂನ್ ಎಣ್ಣೆ ಹಾಕಿಕೊಳ್ಳಬೇಕು. ಎಣ್ಣೆ ಬಿಸಿಯಾದ ನಂತರ ಸಾಸುವೆ ಹಾಕಿಕೊಳ್ಳಬೇಕು. ಅದಕ್ಕೆ ಸ್ವಲ್ಪ ಕರಿಬೇವಿನ ಸೊಪ್ಪನ್ನು ಸೇರಿಸಿಕೊಳ್ಳಬೇಕು. ಜೊತೆಗೆ ಈರುಳ್ಳಿಯನ್ನು ಕೂಡ ಹಾಕಿಕೊಂಡು ಈರುಳ್ಳಿ ಕೆಂಪಗಾಗುವವರೆಗೂ ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಸ್ವಲ್ಪ ಟಮೋಟೋ ಹಣ್ಣನ್ನು ಸೇರಿಸಿಕೊಳ್ಳಬೇಕು.
ಇದಾದ ನಂತರ ಈಗಾಗಲೇ ರೆಡಿಯಾಗಿರುವ ಮಸಾಲವನ್ನು ಇದಕ್ಕೆ ಸೇರಿಸಿಕೊಳ್ಳಬೇಕು. ನಂತರ ಮಸಾಲ ಪದಾರ್ಥವನ್ನು ಐದು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಬೇಕು. ನಂತರ ಬಾಂಡ್ಲಿ ಗೆ ಅರಿಶಿಣದ ಪುಡಿ ಮತ್ತು ಬೆಲ್ಲ ಹಾಗೂ ಉಪ್ಪನ್ನು ಸೇರಿಸಿ ಕೊಳ್ಳಬೇಕಾಗುತ್ತದೆ ಮತ್ತು ಈಗಾಗಲೇ ಚೆನ್ನಾಗಿ ಬೆಂದಿರುವ ಬೇಳೆ ಹಾಗೂ ಬದನೆಕಾಯಿಯನ್ನು ಈ ಮಿಶ್ರಣಕ್ಕೆ ಸೇರಿಸಿ ಕೊಳ್ಳಬೇಕಾಗುತ್ತದೆ. ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಈ ಮಿಶ್ರಣಕ್ಕೆ ಅರ್ಧ ಗ್ಲಾಸ್ ನೀರನ್ನು ಸೇರಿಸಿಕೊಳ್ಳಬೇಕು. ನಂತರ 5 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಚೆನ್ನಾಗಿ ಕಲಿಸಿಕೊಳ್ಳಬೇಕು. ಈ ರೀತಿ ಮಾಡಿದರೆ ನಿಮಗೆ ರುಚಿಯಾದ ಮತ್ತು ಶುಚಿಯಾದ ಸೀಮೆಬದನೆಕಾಯಿ ಸಾಗು ಸವಿಯಲು ಸಿದ್ಧವಾಗಿರುತ್ತದೆ.