ಬಿಗ್ ನ್ಯೂಸ್: ಅರವಿಂದ್ ಹಾಗೂ ದಿವ್ಯ ರವರ ನಿಶ್ಚಿತಾರ್ಥದ ಕುರಿತು ದಿವ್ಯ ಹಾಗೂ ಅರವಿಂದ್ ಮನೆಯವರು ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಬಿಗ್ ಬಾಸ್ ಕೆಲವರ ಪಾಲಿಗೆ ಸಾಕಷ್ಟು ವಿಶೇಷ ವಾಗಿರಬಹುದು ಯಾಕೆಂದರೆ ಇಲ್ಲಿ ಕೇವಲ ಆಟವಾಡಿ ಗೆಲ್ಲಲು ಮಾತ್ರ ಬರುವುದಿಲ್ಲ ಬದಲಾಗಿ ಜೀವನ ಸಂಗಾತಿಗಳನ್ನು ಕೂಡ ಇಲ್ಲಿ ಆಯ್ಕೆ ಮಾಡುತ್ತಾರೆ ಎಂಬುದು ಸಾಬೀತಾಗಿದೆ. ಹೌದು ಸ್ನೇಹಿತರೆ ಈ ಹಿಂದೆ ಬಿಗ್ ಬಾಸ್ ನಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ರವರು ಕೂಡ ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆಯಾಗಿರುವುದು ನಾವು ನೋಡಿದ್ದೇವೆ. ಈಗ ಇದೇ ಸಾಲಿಗೆ ಅರವಿಂದ ಕೆಪಿ ಹಾಗೂ ದಿವ್ಯ ಉರುಡುಗ ರವರು ಕೂಡ ಸೇರುವ ಎಲ್ಲಾ ಮುನ್ಸೂಚನೆಗಳು ಕಾಣುತ್ತಿವೆ.

ಹೌದು ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 8 ಅದ್ದೂರಿಯಿಂದ ಪ್ರಾರಂಭವಾಗಿ ಪ್ರೇಕ್ಷಕರು ಮೆಚ್ಚುವಂತಹ ಸ್ಪರ್ಧಿಗಳನ್ನು ಕೂಡ ಕಂಡಿತು. ಮಂಜು ಪಾವಗಡ ರವರ ಮತ್ತು ಪ್ರಶಾಂತ್ ಸಂಬರ್ಗಿ ಹಾಗೂ ಚಕ್ರವರ್ತಿ ಚಂದ್ರಚುಡ್ ರವರ ಮಾತಿನ ಚಾಣಕ್ಯ ಶುಭಾ ಪೂಂಜಾ ರವರ ಮುಗ್ಧತೆ. ಎಲ್ಲರಿಗಿಂತ ಹೆಚ್ಚಾಗಿ ಅರವಿಂದ್ ಹಾಗೂ ದಿವ್ಯ ರವರ ಕುರಿತಂತೆ ಈ ಬಾರಿಯ ಬಿಗ್ ಬಾಸ್ ನಲ್ಲಿ ಸಾಕಷ್ಟು ಚರ್ಚೆಗಳು ಹಾಗೂ ಅಭಿಮಾನಿಗಳು ಕಾಣಿಸಿಕೊಂಡಿದ್ದರು. ಹೌದು ಸ್ನೇಹಿತರೆ ಇವರಿಬ್ಬರಿಗೂ ಪರಿಚಯವಿಲ್ಲದೆ ಬಿಗ್ ಬಾಸ್ ಮನೆ ಒಳಗಡೆ ಬಂದ ನಂತರ ಪರಿಚಯವಾಗಿ ಪರಿಚಯ ಸ್ನೇಹಕ್ಕೆ ತಿರುಗಿ ಈಗ ಆ ಸ್ನೇಹ ಸ್ನೇಹಕ್ಕೂ ಮೀರಿದ ಸಂಬಂಧವಾಗಿ ಮಾರ್ಪಟ್ಟಿದೆ. ಹೌದು ಸ್ನೇಹಿತರೆ ಕೇವಲ ಟಾಸ್ಕ್ ಗಳಲ್ಲಿ ಮಾತ್ರವಲ್ಲದೆ ಟಾಸ್ಕ್ ಗೂ ಹೊರತುಪಡಿಸಿ ಇವರಿಬ್ಬರು ಬಿಗ್ ಬಾಸ್ ಮನೆಯಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು.

ಒಬ್ಬರನ್ನೊಬ್ಬರು ಯಾವುದೇ ವಿಷಯದಲ್ಲಿ ಬಿಟ್ಟುಕೊಡುತ್ತಿರಲಿಲ್ಲ. ಇನ್ನು ಒಮ್ಮೆಯಂತೂ ತಂದೆಯವರು ಕೊಟ್ಟಿದ್ದ ಉಂಗುರವನ್ನು ದಿವ್ಯ ರವರು ನೀವು ನನ್ನ ಜೀವನದಲ್ಲಿ ಸ್ಪೆಷಲ್ ಎಂದು ಅರವಿಂದ್ ರವರ ಬೆರಳಿಗೆ ತೊಡಿಸಿದ್ದರು. ನಂತರ ಅರವಿಂದ್ ರವರು ಕೂಡ ಉಂಗುರವನ್ನು ಬಹಳಷ್ಟು ಜೋಪಾನವಾಗಿ ನೋಡಿಕೊಳ್ಳುತ್ತಿದ್ದರು. ಇದರಿಂದಾಗಿ ಬಿಗ್ ಬಾಸ್ ಮನೆಯಲ್ಲಿ ಇವರಿಬ್ಬರ ನಡುವೆ ಇರುವುದು ಸ್ನೇಹ ಅಲ್ಲ ಸ್ನೇಹಕ್ಕೂ ಮೀರಿದ ಪ್ರೀತಿಯೆಂಬುದು ಸಾಬೀತಾಗಿತ್ತು.

ಬಿಗ್ ಬಾಸ್ ನಲ್ಲಿ ಒಂದು ಕ್ಷಣ ಕೂಡ ಒಬ್ಬರನ್ನೊಬ್ಬರು ಬಿಟ್ಟು ಇರುತ್ತಿರಲಿಲ್ಲ. ಹೀಗಾಗಿ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಇವರಿಬ್ಬರು ಮದುವೆಯಾಗಬಹುದೇ ಎಂಬುದಾಗಿ ಸುದ್ದಿಗಳು ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇನ್ನು ಈ ಕುರಿತಂತೆ ಅರವಿಂದ್ ಹಾಗೂ ದಿವ್ಯ ರವರಲ್ಲಿ ಕೇಳಿದಾಗಲೆಲ್ಲ ನಾವು ಒಬ್ಬರನ್ನೊಬ್ಬರು ತುಂಬಾ ಇಷ್ಟಪಡುತ್ತೇವೆ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ನೋಡಬೇಕಾಗಿದೆ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಹೇಳುತ್ತಿದ್ದರು.

ಆದರೆ ಈಗ ಈ ಕುರಿತಂತೆ ನಮ್ಮೆಲ್ಲರಿಗೂ ಸಂಪೂರ್ಣವಾಗಿ ಅನುಮಾನ ಕಡಿಮೆಯಾಗುವಂತಹ ವಿಷಯವೊಂದು ಹೊರಬಿದ್ದಿದೆ. ಹೌದು ಸ್ನೇಹಿತರೆ ಬಿಗ್ ಬಾಸ್ ಕನ್ನಡ ಸೀಸನ್ ಫಿನಾಲೆಯಲ್ಲಿ ಅರವಿಂದ ಅವರು ಎರಡನೇ ಸ್ಥಾನ ಹಾಗೂ ದಿವ್ಯ ರವರು ಮೂರನೇ ಸ್ಥಾನ ಬಂದಮೇಲೆ ಇವರಿಬ್ಬರ ಅಭಿಮಾನಿಗಳು ಈಗಾಗಲೇ ಇವರಿಬ್ಬರ ಮದುವೆಗಾಗಿ ಕಾಯುತ್ತಿದ್ದಾರೆ. ಇತ್ತಕಡೆ ಸುದ್ದಿಮಾಧ್ಯಮಗಳಲ್ಲಿ ಕೂಡ ಇವರಿಬ್ಬರ ಮದುವೆ ಕುರಿತಂತೆ ಊಹಾಪೋಹಗಳು ಸುದ್ದಿಗಳು ಸಾಕಷ್ಟು ಹರಿದಾಡುತ್ತಿವೆ. ಇತ್ತ ಒಂದು ಹೊಸ ಸುದ್ದಿ ಕೇಳಿಬರುತ್ತಿದೆ.

ಹೌದು ಸ್ನೇಹಿತರೆ ಅರವಿಂದ್ ರವರ ತಂದೆ-ತಾಯಿಗಳಾದಂತಹ ಪ್ರಭಾಕರ್ ಉಪಾಧ್ಯ ಹಾಗೂ ಉಷಾ ಪ್ರಭಾಕರ್ ಅವರು ದಿವ್ಯ ರವರ ತಂದೆ ಮಂಜುನಾಥ್ ರವರ ಬಳಿ ಈ ಕುರಿತಂತೆ ಮಾತನಾಡಿದ್ದು ಸದ್ಯದಲ್ಲೇ ಎಂಗೇಜ್ಮೆಂಟ್ ಗೆ ಕೂಡ ತಯಾರಿ ನಡೆಸಲು ಮಾತುಕತೆ ನಡೆಸಿದ್ದಾರೆ ಎಂದು ಸುದ್ದಿಯೊಂದು ಕೇಳಿಬರುತ್ತಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಅತಿಶೀಘ್ರದಲ್ಲೇ ಬಿಗ್ ಬಾಸ್ ನ ಸೂಪರ್ ಹಿಟ್ ಜೋಡಿಗಳ ಆದಂತಹ ಅರವಿಂದ್ ಹಾಗೂ ದಿವ್ಯ ರವರ ಮದುವೆ ಸದ್ಯದಲ್ಲೇ ನಡೆಯಲಿದೆ. ಇವರಿಬ್ಬರ ಮದುವೆಯನ್ನು ನೋಡಲು ಕಾತರರಾಗಿರುವ ಅದೆಷ್ಟು ಅಭಿಮಾನಿಗಳಿಗೆ ಈ ಸುದ್ದಿ ನಿಜವಾದರೆ ಸಂತೋಷವಾಗುವುದು ಖಂಡಿತ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.