ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಇಡೀ ವಿಶ್ವದಲ್ಲಿ ಹೆಸರು ಮಾಡಿರುವ ಭಾರತ ಕ್ರಿಕೆಟ್ ತಂಡದ ಆಟಗಾರರು ಓದಿರುವುದು ಎಷ್ಟು ಗೊತ್ತೇ?? ಇಷ್ಟು ಕಡಿಮೇನಾ??

3

ನಮಸ್ಕಾರ ಸ್ನೇಹಿತರೇ ಭಾರತದಲ್ಲಿ ಕ್ರಿಕೇಟ್ ಮೇನಿಯಾವೇ ಹಂಗಿದೆ. ಭಾರತೀಯ ಕ್ರಿಕೇಟ್ ನಲ್ಲಿ ಹೆಸರು ಚಾಪಿಸಿದರೇ ಸಾಕು, ಅಭಿಮಾನಿಗಳು ದಂಡಿಗಟ್ಟಲೇ ಆಟಗಾರರನ್ನ ಫಾಲೋ ಮಾಡಲು ಶುರು ಮಾಡುತ್ತಾರೆ. ಆಟಗಾರರ ಸಾಮಾಜಿಕ ಜಾಲತಾಣಗಳ ಅಕೌಂಟ್ ಗಳು, ಅವರ ಹುಟ್ಟಿದ ಊರು, ಮನೆ, ಅವರ ಗೆಳತಿಯರು, ಅವರ ಎಜುಕೇಶನ್ ಕ್ವಾಲಿಫಿಕೇಶನ್ ಹೀಗೆ ಎಲ್ಲವನ್ನು ಹುಡುಕಲು ಶುರು ಮಾಡುತ್ತಾರೆ. ಭಾರತದ ಕ್ರಿಕೇಟ್ ನಲ್ಲಿ ಅತ್ಯುತ್ತಮ ಸಾಧನೆಗೈದ ಕೆಲವು ಆಟಗಾರರ ಎಜುಕೇಶನಲ್ ಕ್ವಾಲಿಫಿಕೇಶನ್ ಏನು ಎಂಬುದನ್ನ ತಿಳಿಸುತ್ತೇವೆ ಬನ್ನಿ.

ಸಚಿನ್ ತೆಂಡೂಲ್ಕರ್ – ಮಾಸ್ಟರ್ ಬ್ಲಾಸ್ಟರ್ ಎಂದೇ ಪ್ರಖ್ಯಾತರಾದ ಸಚಿನ್ ತೆಂಡೂಲ್ಕರ್ ಭಾರತೀಯ ಕ್ರಿಕೇಟ್ ನ ದೇವರು ಎಂದು ಹೆಸರು ಪಡೆದವರು. ಹದಿನಾರನೇ ವಯಸ್ಸಿಗೆ ಕ್ರಿಕೇಟ್ ಗೆ ಪದಾರ್ಪಣೆ ಮಾಡಿದ ಇವರೂ ಓದಿದ್ದು ಕೇವಲ ಹತ್ತನೇ ತರಗತಿ ಮಾತ್ರ.

ರಾಹುಲ್ ದ್ರಾವಿಡ್ – ದಿ ವಾಲ್ ಎಂದೇ ಪ್ರಸಿದ್ದರಾದ ರಾಹುಲ್ ದ್ರಾವಿಡ್ ಕ್ರಿಕೇಟ್ ರಂಗದಲ್ಲಿ ಸವ್ಯಸಾಚಿ ಎಂದು ಹೆಸರು ಪಡೆದವರು. ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಪದವಿ ಪಡೆದು, ಎಂ.ಬಿ.ಎ ಗೆ ಅಡ್ಮಿಶನ್ ಮಾಡಿಸಿದ್ದರು. ಭಾರತೀಯ ತಂಡಕ್ಕೆ ಸೇರಿದ ಕಾರಣ, ಓದಿಗೆ ಅರ್ಧಕ್ಕೆ ತಿಲಾಂಜಲಿ ಹಾಡಿದರು.

ಅನಿಲ್ ಕುಂಬ್ಳೆ – ವಿಶ್ವ ಕ್ರಿಕೇಟ್ ನಲ್ಲಿ ಅತಿ ಹೆಚ್ಚು ವಿಕೇಟ್ ಪಡೆದ ಕನ್ನಡಿಗ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಓದಿದ್ದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜ್ ನಲ್ಲಿ.ಇವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರ.

ಜಾವಗಲ್ ಶ್ರೀನಾಥ್ – ಜಾವಗಲ್ ಎಕ್ಸ್ ಪ್ರೆಸ್ ಖ್ಯಾತಿಯ ಶ್ರೀನಾಥ್ ಸಹ ಇಂಜಿನಿಯರಿಂಗ್ ಪದವೀಧರರು. ಮೈಸೂರಿನ ಜೆ.ಸಿ.ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದರು.

ವಿರೇಂದ್ರ ಸೆಹ್ವಾಗ್ – ಡ್ಯಾಶಿಂಗ್ ಓಪನರ್ , ಮುಜಾಫಗಢ್ ದ ವಿರೇಂದ್ರ ಸೆಹ್ವಾಗ್ ಸಹ ದೆಹಲಿಯ ಜಾಮೀಯಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ.

ವಿರಾಟ್ ಕೊಹ್ಲಿ – ಭಾರತೀಯ ಕ್ರಿಕೇಟ್ ತಂಡದ ನಾಯಕ ವಿರಾಟ್ ಕೋಹ್ಲಿ ಇವರು ಪಿಯುಸಿ ಮಾಡಿದ್ದಾರೆ. ಅಂತರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಕಾರಣ ಓದನ್ನ ಅರ್ಧದಕ್ಕೆ ನಿಲ್ಲಿಸಬೇಕಾಯಿತು.

ಎಂ.ಎಸ್.ಧೋನಿ – ಭಾರತೀಯ ಕ್ರಿಕೇಟ್ ತಂಡದ ಯಶಸ್ವಿ ನಾಯಕ ಎಂ.ಎಸ್.ಧೋನಿ ಕ್ರಿಕೇಟ್ ಆಡುವಕ್ಕಿಂತ ಮುಂಚೆ ರೈಲ್ವೆಯಲ್ಲಿ ಟಿಕೇಟ್ ಕಲೆಕ್ಟರ್ ಆದವರು. ಅವರು ಓದಿದ್ದು ರಾಂಚಿಯಲ್ಲಿ. 12 ನೇ ತರಗತಿ ತನಕ ಓದಿದ ಧೋನಿ ಮುಂದೆ, ದೂರಶಿಕ್ಷಣದಲ್ಲಿ ಪದವಿ ಪೂರೈಸಿದರು.