ಮಂಜು ಪಾವಗಡ ಪೋಷಕರ ಬಳಿ ಮದುವೆ ಬಗ್ಗೆ ಮಾತನಾಡಿದ್ದೇನೆ ಎಂದು, ಎಲ್ಲ ಸತ್ಯ ತಿಳಿಸಿದ ದಿವ್ಯ. ಸಿಹಿ ಸುದ್ದಿ ಕೊಡುತ್ತಾರಾ??
ಮಂಜು ಪಾವಗಡ ಪೋಷಕರ ಬಳಿ ಮದುವೆ ಬಗ್ಗೆ ಮಾತನಾಡಿದ್ದೇನೆ ಎಂದು, ಎಲ್ಲ ಸತ್ಯ ತಿಳಿಸಿದ ದಿವ್ಯ. ಸಿಹಿ ಸುದ್ದಿ ಕೊಡುತ್ತಾರಾ??
ನಮಸ್ಕಾರ ಸ್ನೇಹಿತರೇ ಕೊನೆಗೂ ಬಿಗ್ ಬಾಸ್ ಸೀಸನ್ -8 ಮುಗಿದಿದೆ. ಈ ಸೀಸನ್ ನ ವಿಜೇತರಾಗಿ ಮಜಾಭಾರತ ಖ್ಯಾತಿಯ ಮಂಜು ಪಾವಗಡ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಇನ್ನು ರನ್ನರ್ ಅಪ್ ಆಗಿ ಅರವಿಂದ್ ಕೆ.ಪಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಟಾಪ್ ಐದರಲ್ಲಿ ಸ್ಥಾನ ಪಡೆದಿದ್ದ ವೈಷ್ಣವಿ ಗೌಡ, ದಿವ್ಯಾ ಉರುಡುಗ ಮತ್ತು ಪ್ರಶಾಂತ್ ಸಂಬರ್ಗಿಯವರಿಗೂ ಸಹ ಈ ಭಾರಿ ಬಿಗ್ ಬಾಸ್ ನಗದು ರೂಪದ ಬಹುಮಾನ ನೀಡಿದ್ದಾರೆ.
ಇನ್ನು ನಿನ್ನೆ ಫಿನಾಲೆ ವೇಳೆ ಸ್ಪರ್ಧಿ ದಿವ್ಯಾ ಸುರೇಶ್ ಹೇಳಿದ ಒಂದು ಮಾತು ಬಿಗ್ ಬಾಸ್ ಮನೆಯ ಎಲ್ಲಾ ಸದಸ್ಯರಿಗೆ ಸಣ್ಣ ಪ್ರಮಾಣದ ಶಾಕ್ ನೀಡಿತು. ಬನ್ನಿ ಅದೇನು ಎಂದು ನೋಡೋಣ. ಈ ಸೀಸನ್ ಆರಂಭವಾದಾಗಿನಿಂದ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ ನಡುವೆ ಹಾಗೂ ದಿವ್ಯಾ ಸುರೇಶ್ ಜೋಡಿಗಳ ಮಧ್ಯೆ ಹೆಚ್ಚು ಲವ್ವಿ – ಡವ್ವಿ ನಡೆಯುತ್ತಿತ್ತು. ಬಿಗ್ ಬಾಸ್ ಮನೆಯಲ್ಲಿ ಈ ಬಗ್ಗೆ ಜೋರು ಚರ್ಚೆಗಳು, ವಿವಾದಗಳು, ಕೆಲವೊಮ್ಮೆ ಸ್ಪರ್ಧಿಗಳ ಮಧ್ಯೆ ಮನಸ್ತಾಪಗಳು ಆದವು. ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಸಹ ದಿವ್ಯಾ ಸುರೇಶ್ ಹಾಗೂ ಮಂಜು ಅವರ ರಿಲೇಶನ್ ಶಿಪ್ ಗಳ ಬಗ್ಗೆ ಜೋರಾಗಿ ಚರ್ಚೆಗಳು ನಡೆದವು.
ಈ ನಡುವೆ ನಿನ್ನೆ ನಿರೂಪಕ ಕಿಚ್ಚ ಸುದೀಪ್ , ಈ ಸೀಸನ್ ಮುಗಿದ ನಂತರ ಮಂಜು ಮೊದಲು ಮದುವೆಯಾಗಾತ್ತಾರಾ ಅಥವಾ ಅರವಿಂದ್ ಮೊದಲು ಮದುವೆಯಾಗುತ್ತಾರಾ ಎಂಬ ಪ್ರಶ್ನೆಗೆ ದಿವ್ಯಾ ಸುರೇಶ್ ಕೊಟ್ಟ ಉತ್ತರ ಎಲ್ಲರ ಹುಬ್ಬೇರಿಸಿತು. ನಾನು ಈಗಾಗಲೇ ಮಂಜು ಮದುವೆ ಬಗ್ಗೆ ಅವರ ತಂದೆ-ತಾಯಿ ಜೊತೆ ಮಾತನಾಡಿದ್ದೇನೆ ಎಂದರು. ಎಲ್ಲರೂ ಹೋ ಎಂದು ಕಿರುಚಿದಾಗ, ಇಲ್ಲ ನಾನು ಮಂಜುಗೆ ಮದುವೆ ಮಾಡಿ ಎಂದು ಮಾತನಾಡಿದ್ದೇನೆ ಹೊರತು, ಮಂಜುರನ್ನ ನನಗೆ ಮದುವೆ ಮಾಡಿಕೊಡಿ ಎಂದು ಹೇಳಿಲ್ಲ ಎಂದ ತಕ್ಷಣ ಎಲ್ಲರೂ ಸಮಾಧಾನರಾದರು. ಬಿಗಬಾಸ್ ಸೀಸನ್ – 9 ರನ್ನು ಇದೇ ಅಕ್ಟೋಬರ್ 9 ರಿಂದ ಪ್ರಸಾರವಾಗಬಹುದು ಎಂದು ಮೂಲಗಳು ತಿಳಿಸಿವೆ. ಈ ಭಾರಿ ಕಲರ್ಸ್ ಸೂಪರ್ ಚಾನೆಲ್ ಬದಲು ಓಟಿಟಿ ಮೂಲಕ ಸಹ ಬಿಗ್ ಬಾಸ್ ಪ್ರಸಾರವಾಗುತ್ತದೆ ಎಂಬ ಸುದ್ದಿ ಇದೆ. ಆದರೇ ಅದು ಎಷ್ಟು ಸತ್ಯ ಎಂಬುದು ವಿಷಯ ಖಚಿತವಾದ ನಂತರವೇ ತಿಳಿಯಲಿದೆ.