ಕನ್ನಡದಲ್ಲಿ ನಟಿಯರಾಯಾಗಿ ಪಾದಾರ್ಪಣೆ ಮಾಡಿ, ಇತರ ಭಾಷೆಗಳಲ್ಲಿ ಟಾಪ್ ಸ್ಟಾರ್ ನಟಿಯಾದವರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಚಿತ್ರರಂಗ ಎನ್ನುವುದು ಹರಿಯುವ ನೀರಿದ್ದಂತೆ. ಕಾಲಕಾಲಕ್ಕೆ ತಕ್ಕಂತೆ ಬದಲಾವಣೆಗಳು ಆಗುವುದು ನಿಶ್ಚಿತ. ಇನ್ನು ಈ ಹಿಂದಿನ ಹಲವಾರು ಬಾರಿ ಬೇರೆ ಭಾಷೆಗಳಿಂದ ಕನ್ನಡ ಚಿತ್ರರಂಗಕ್ಕೆ ಬಂದು ನಮ್ಮ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯರಾಗಿ ಮೆರೆದಂತಹ ಹಾಗೂ ನೆಲೆಕಂಡುಕೊಂಡಿರುವಂತಹ ನಟಿಯರ ಕುರಿತಂತೆ ನಾವು ನಿಮಗೆ ತಿಳಿಸಿದ್ದೇವೆ ಹಾಗೂ ನಿಮಗೆ ಕೂಡ ಗೊತ್ತಿದೆ. ಇಂದು ನಾವು ಹೇಳಹೊರಟಿರುವ ವಿಷಯವೇನೆಂದರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿ ಬೇರೆ ಭಾಷೆಯಲ್ಲಿ ಸೂಪರ್ಸ್ಟಾರ್ ನಟಿಯರಾಗಿ ಮಿಂಚಿದಂತಹ ನಟಿಯರ ಕುರಿತಂತೆ ಹೇಳಲು ಹೊರಟಿದ್ದೇವೆ. ಬನ್ನಿ ಈ ಸಾಲಿನಲ್ಲಿ ಯಾರ್ಯಾರು ಇದ್ದಾರೆ ಎಂಬುದನ್ನು ನಾವು ತಿಳಿದುಕೊಳ್ಳೋಣ.

ರಾಕುಲ್ ಪ್ರೀತ್ ಸಿಂಗ್ ಬಾಲಿವುಡ್ ಹಾಗೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಈಗಾಗಲೇ ಬಹು ಬೇಡಿಕೆಯನ್ನು ಸೃಷ್ಟಿಸಿಕೊಂಡಿರುವ ಸ್ಟಾರ್ ನಟಿ ಎಂದರೆ ಅದು ರಾಕುಲ್ ಪ್ರೀತ್ ಸಿಂಗ್. ಆದರೆ ನಿಮಗೆ ಒಂದು ವಿಷಯ ಗೊತ್ತಾ ಸ್ನೇಹಿತರೆ ರಾಕುಲ್ ಪ್ರೀತ್ ಸಿಂಗ್ ರವರು ಮೊದಲು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ನವರಸ ನಾಯಕ ಜಗ್ಗೇಶ್ ರವರ ಪುತ್ರ ಗುರು ನಟನೆಯ ಗಿಲ್ಲಿ ಚಿತ್ರದ ಮೂಲಕ. ಗಿಲ್ಲಿ ಚಿತ್ರದ ಮೂಲಕ ಚಿತ್ರ ಲೋಕಕ್ಕೆ ಪಾದಾರ್ಪಣೆ ಮಾಡುವ ಮೂಲಕ ರಾಕುಲ್ ಪ್ರೀತ್ ಸಿಂಗ್ ರವರು ಚಿತ್ರಲೋಕಕ್ಕೆ ಪರಿಚಿತರಾಗುತ್ತಾರೆ. ಈಗಂತೂ ಅವರು ಭಾರತದ ಖ್ಯಾತ ನಟಿಯರಲ್ಲಿ ಒಬ್ಬರಾಗಿದ್ದಾರೆ.

ನಿತ್ಯ ಮೆನನ್ ನಿತ್ಯ ಮೆನನ್ ರವರನ್ನು ನೋಡುವ ಪ್ರತಿಯೊಬ್ಬರು ಹೇಳುವುದು ನೀವು ಮಲಯಾಳಂನವರು ಅಲ್ವಾ ಎಂದು. ಆದರೆ ನಿಜವಾಗಿಯೂ ನಿತ್ಯಮೆನನ್ ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿಯೇ. ತಿನ್ನುವವರು ಚಿತ್ರ ಲೋಕಕ್ಕೆ ಪಾದಾರ್ಪಣೆ ಮಾಡಿದ್ದು ಕೂಡ ಕನ್ನಡ ಚಿತ್ರವಾದ seven-o-clock ಚಿತ್ರದ ಮೂಲಕ. ಇವರು ಕೂಡ ಈಗ ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಆಗೊಮ್ಮೆ ಈಗೊಮ್ಮೆ ಕನ್ನಡ ಚಿತ್ರಗಳಲ್ಲಿ ಕೂಡ ನಟಿಸುತ್ತಿದ್ದಾರೆ.

ಸೌಂದರ್ಯ ಅತ್ಯಂತ ಚಿಕ್ಕ ವಯಸ್ಸಿಗೆ ಅತ್ಯಂತ ದೊಡ್ಡ ಮಟ್ಟದ ಯಶಸ್ಸನ್ನು ಪಡೆದು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದಂತಹ ನಟಿ ಸೌಂದರ್ಯ. ಇವರು ಕೂಡ ಕನ್ನಡದ ಮೂಲದವರಾಗಿದ್ದು ಚಿತ್ರಲೋಕಕ್ಕೆ ಪಾದಾರ್ಪಣೆ ಮಾಡಿದ್ದು ನನ್ನ ತಂಗಿ ಕನ್ನಡ ಚಿತ್ರದ ಮೂಲಕ. ಇದಾದ ನಂತರ ಇವರು ಕನ್ನಡ ತಮಿಳು ತೆಲುಗು ಹಿಂದಿ ಮಲಯಾಳಂ ಪಂಚ ಭಾಷೆಗಳಲ್ಲಿ ಬೇಡಿಕೆ ನಟಿಯಾಗಿ ಕಾಣಿಸಿಕೊಂಡಿದ್ದರು.

ಛಾಯಾ ಸಿಂಗ್ ನಟಿ ಛಾಯಾ ಸಿಂಗ್ ರವರ ಕುರಿತಂತೆ ನಿಮಗೆಲ್ಲ ಗೊತ್ತೇ ಇದೆ. ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಬಹುಬೇಡಿಕೆಯ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು. ಇವರು ಕೂಡ ಮುನ್ನುಡಿಯನ್ನು ಆ ಕನ್ನಡ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇನ್ನು ಇವರು ಕನ್ನಡ ತಮಿಳು ತೆಲುಗು ಮಲಯಾಳಂ ಭೋಜಪುರಿ ಹೀಗೆ ಹಲವಾರು ಭಾಷೆಗಳಲ್ಲಿ ನಡೆಸಿದ್ದಾರೆ.

ಜಯಲಲಿತಾ ಜಯಲಲಿತ ಕೇವಲ ನಟಿಯಾಗಿ ಮಾತ್ರವಲ್ಲದೆ ಇಡೀ ತಮಿಳುನಾಡು ರಾಜ್ಯಕ್ಕೆ ಅಮ್ಮ ಎಂದೇ ಖ್ಯಾತರಾಗಿದ್ದರು. ಇವರು ಮೊದಲು ನಟಿಯಾಗಿ ದೇಶದಾದ್ಯಂತ ಯಶಸ್ವಿಯಾಗಿ ಕಾಣಿಸಿಕೊಂಡವರು. ಇನ್ನು ಇವರು ಕೂಡ ತಮ್ಮ ಚಿತ್ರ ಜೀವನವನ್ನು ಪ್ರಾರಂಭಿಸಿದ್ದು ಚಿನ್ನದ ಗೊಂಬೆ ಯನ್ನುವ ಕನ್ನಡ ಚಿತ್ರದ ಮೂಲಕ.

ದೀಪಿಕಾ ಪಡುಕೋಣೆ ಈಗಾಗಲೇ ಬಾಲಿವುಡ್ ಹಾಗೂ ಹಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ದೇಶದ ನಂಬರ್ ಒನ್ ನಟಿ ಎಂದೇ ಖ್ಯಾತರಾಗಿರುವ ದೀಪಿಕಾ ಪಡುಕೋಣೆ ಅವರು ಕೂಡ ಕನ್ನಡದ ಸೌಂದರ್ಯ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದು. ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ನಾಯಕನಟನಾಗಿ ಹಾಗೂ ಇಂದ್ರಜಿತ್ ಲಂಕೇಶ್ ರವರು ನಿರ್ದೇಶಕನಾಗಿ ಕಾಣಿಸಿಕೊಂಡಿದ್ದರು. ಇಂದು ಚಿತ್ರಲೋಕದಲ್ಲಿ ದೀಪಿಕಾ ಪಡುಕೋಣೆ ಅವರು ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿ ಯಾಗಿದ್ದಾರೆ.

Post Author: Ravi Yadav