ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮಂಜು ಪಾವಗಡ ರವರು ಗೆದ್ದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಅರವಿಂದ್ ದಿವ್ಯ ಫ್ಯಾನ್ಸ್ ಹೇಳಿದ್ದೇನು ಗೊತ್ತಾ?? ನಿಜಕ್ಕೂ ಷಾಕಿಂಗ್.

9

ನಮಸ್ಕಾರ ಸ್ನೇಹಿತರೇ ಅಂತು ಇಂತು ಕಿರುತೆರೆಯಲ್ಲಿ ಎಲ್ಲಾ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದ ಕನ್ನಡದ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಬಿಗ್ ಬಾಸ್ ಗೆ ತೆರೆ ಬಿದ್ದಿದೆ. ಮಂಜು ಪಾವಗಡ ರವರು ವಿನ್ನರ್ ಎಂಬುದು ಕೂಡ ಘೋಷಣೆಯಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ನಿರೂಪಣೆಯಿಂದ ಪ್ರಾರಂಭವಾದಂತಹ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 8 ಕ್ರಮೇಣ ಮನರಂಜನೆಯಿಂದ ಸಾಗಿತ್ತು. ಆದರೆ ಮಧ್ಯದಲ್ಲಿ ಲಾಕ್ಡೌನ್ ಕಾರಣದಿಂದಾಗಿ ಸ್ಥಗಿತಗೊಂಡಿತ್ತು.

ಎಲ್ಲ ಮುಗಿದೇ ಹೋಗಿತ್ತು ಎನ್ನುವಷ್ಟರಲ್ಲಿ ಮತ್ತೊಮ್ಮೆ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ನ ಮೂಲಕ ಕಿರುತೆರೆಗೆ ಕಂಬ್ಯಾಕ್ ಮಾಡಿ ಮತ್ತೊಮ್ಮೆ ಪ್ರೇಕ್ಷಕರ ಮನರಂಜಿಸಲು ಪ್ರಾರಂಭಿಸಿತು. ಇನ್ನು ಈ ಬಾರಿಯ ಬಿಗ್ ಬಾಸ್ ಅನ್ನು ಗೆಲ್ಲಲು ಬಹಳಷ್ಟು ಪೈಪೋಟಿ ಇತ್ತು. ಟಾಪ್ 5 ಅಭ್ಯರ್ಥಿಗಳಾಗಿ ಮಂಜು ಪಾವಗಡ ಅರವಿಂದ ಕೆಪಿ ದಿವ್ಯ ವೈಷ್ಣವಿ ಗೌಡ ಹಾಗೂ ಪ್ರಶಾಂತ್ ಸಂಬರ್ಗಿ ಅವರು ಆಯ್ಕೆಯಾಗಿದ್ದರು. ಇವರಲ್ಲಿ ವಿಜೇತರನ್ನು ಆಯ್ಕೆ ಮಾಡಲು ಸಾಕಷ್ಟು ಕಷ್ಟವಾಗಿತ್ತು ಮಾತ್ರವಲ್ಲದೆ ವೋಟ್ನಲ್ಲಿ ಕೂಡ ಸಾಕಷ್ಟು ಕಾಂಪಿಟೇಶನ್ ಇತ್ತು.

ಇನ್ನು ಈಗ ಫಲಿತಾಂಶ ಬಂದಿದ್ದು ಪ್ರಶಾಂತ್ ಸಂಬರ್ಗಿ 5ನೇ ಸ್ಥಾನದಲ್ಲಿ ನಾಲ್ಕನೇ ಸ್ಥಾನದಲ್ಲಿ ವೈಷ್ಣವಿ ಗೌಡ ಮೂರನೇ ಸ್ಥಾನದಲ್ಲಿ ದಿವ್ಯ ಎರಡನೇ ಸ್ಥಾನದಲ್ಲಿ ಅರವಿಂದ್ ಹಾಗೂ ಮೊದಲನೇ ಸ್ಥಾನದಲ್ಲಿ ಮಂಜುನಾಥ್ ಪಾವಗಡ ಅವರು ಬಂದಿದ್ದಾರೆ. ಇನ್ನು ಈ ಕುರಿತಂತೆ ಅರವಿಂದ್ ಹಾಗೂ ದಿವ್ಯಾ ರವರ ಅಭಿಮಾನಿಗಳಾದ ಅರವಿಯ ಅಭಿಮಾನಿಗಳು ಏನು ಅಂದಿದ್ದಾರೆ ಗೊತ್ತಾ. ಹೌದು ಸ್ನೇಹಿತರೆ ಈ ಕುರಿತಂತೆ ಅರವಿಯ ಅಭಿಮಾನಿಗಳು ನಿಜವಾದ ವಿನ್ನರ್ ಅರವಿಂದ ಕೆಪಿ. ನೀವು ಬಿಗ್ ಬಾಸ್ ನಲ್ಲಿ ಎರಡನೇ ಸ್ಥಾನ ಬಂದಿರಬಹುದು ಆದರೆ ನಮಗೆ ನೀವೇ ವಿನ್ನರ್ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದರಿಂದ ಮಂಜು ಪಾವಗಡ ರವರು ಗೆದ್ದಿರುವುದು ಅವರಿಗೆ ಸಂತೋಷವಾಗಿಲ್ಲ ಎಂಬುದು ಸ್ಪಷ್ಟವಾಗಿ ವ್ಯಕ್ತವಾಗುತ್ತದೆ‌.