ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕನ್ನಡದ ಸ್ಟಾರ್ ನಟರು ತಿರಸ್ಕಾರ ಮಾಡಿದಂತಹ ಟಾಪ್ ಚಿತ್ರಗಳು ಯಾವ್ಯಾವು ಗೊತ್ತೇ?? ಎಲ್ಲಾ ದಾಖಲೆ ಸೃಷ್ಟಿಸಿದ ಚಿತ್ರಗಳೇ.

9

ನಮಸ್ಕಾರ ಸ್ನೇಹಿತರೇ ನಾವು ಇಂದು ಹೇಳ ಹೊರಟಿರುವ ವಿಷಯದಲ್ಲಿ ಒಂದು ವಿಷಯ ನಿಮಗೆ ಕಂಡಿತ ನಿಮ್ಮ ಜೀವನದಲ್ಲಿ ಕೂಡ ನಡೆದಿರುತ್ತದೆ. ನಿಮಗೆ ಸಿಕ್ಕ ಅವಕಾಶ ನೀವು ಬೇಡ ಎಂದು ಬೇರೆಯವರು ಅದನ್ನು ಪಡೆದುಕೊಂಡು ಯಶಸ್ವಿಯಾಗಿರುವುದು. ಹೌದು ಸ್ನೇಹಿತರೆ ನಾವು ಇಂದು ಹೇಳುತ್ತಿರುವ ವಿಷಯದಲ್ಲಿ ಸ್ಟಾರ್ ನಟರು ತಮಗೆ ಬಂದಿರುವ ಅವಕಾಶವನ್ನು ಅಥವಾ ಚಿತ್ರದ ಪಾತ್ರವನ್ನು ತಿರಸ್ಕರಿಸಿ ನಂತರ ಆ ಪಾತ್ರವನ್ನು ಬೇರೆ ನಟರು ಮಾಡಿ ಅದರಲ್ಲಿ ಯಶಸ್ವಿಯಾಗಿರುವುದನ್ನು ನಾವು ಇಂದು ಹೇಳಲು ಹೊರಟಿದ್ದೇವೆ.

ಮೊದಲಿಗೆ ಹಾಲು ಜೇನು. ಹೌದು ಸ್ನೇಹಿತರೆ ಹಾಲು ಜೇನು ಚಿತ್ರದಲ್ಲಿ ಮೊದಲಿಗೆ ಅನಂತನಾಗ್ ರವರನ್ನು ನಾಯಕನಟನಾಗಿ ಆಯ್ಕೆ ಮಾಡಲಾಗಿತ್ತು ಆದರೆ ಅವರ ಡೇಟ್ ಇಲ್ಲದಿದ್ದ ಕಾರಣ ಆ ಚಿತ್ರದಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸಲು ಅಣ್ಣಾವ್ರ ಬಳಿ ಕೇಳಿ ಅವರು ನಟಿಸಿದ ಮೇಲೆ ಆ ಚಿತ್ರ ಸೂಪರ್ ಹಿಟ್ ಆಗಿತ್ತು.

ಎರಡನೆಯದಾಗಿ ಯಶ್ ನಟನೆಯ ಡ್ರಾಮಾ. ಹೌದು ಸ್ನೇಹಿತರೆ ಈ ಚಿತ್ರದಲ್ಲಿ ನಾಯಕ ನಟನಾಗಿ ಲೂಸ್ ಮಾದ ಯೋಗಿ ನಟಿಸಬೇಕಾಗಿತ್ತು ಆದರೆ ಅವರು ಸಿದ್ಲಿಂಗು ಹಾಗೂ ಹುಡುಗರು ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದ ರಿಂದ ಈ ಚಿತ್ರವನ್ನು ರಾಕಿಂಗ್ ಸ್ಟಾರ್ ಯಶ್ ಮಾಡಿದರು. ಈ ಚಿತ್ರ ಕೂಡ ಬಾಕ್ಸಾಫೀಸ್ ನಲ್ಲಿ ಸಾಕಷ್ಟು ಯಶಸ್ಸನ್ನು ಗಳಿಸಿತು.

ಮೂರನೆಯದಾಗಿ ಲೂಸಿಯಾ. ಹೌದು ಸ್ನೇಹಿತರೆ ಪವನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಂತಹ ಲೂಸಿಯಾ ಚಿತ್ರದಲ್ಲಿ ದಿಗಂತ್ ರವರು ಮೊದಲಿಗೆ ನಟಿಸಬೇಕಾಗಿತ್ತು. ಆದರೆ ಕಾರಣಾಂತರಗಳಿಂದಾಗಿ ದಿಗಂತ ಅವರು ಈ ಚಿತ್ರವನ್ನು ಮಾಡಲಾಗಲಿಲ್ಲ. ನಂತರ ಈ ಚಿತ್ರದಲ್ಲಿ ನೀನಾಸಂ ಸತೀಶ್ ಅವರು ನಟಿಸಿ ಈ ಚಿತ್ರ ಕೂಡ ಯಶಸ್ಸನ್ನು ಗಳಿಸಿತು.

ನಾಲ್ಕನೆಯದಾಗಿ ರಂಗಿತರಂಗ ಚಿತ್ರ. ಹೌದು ಸ್ನೇಹಿತರೆ ಬಾಹುಬಲಿಗೆ ಪೈಪೋಟಿ ನೀಡಿದಂತಹ ಕನ್ನಡದ ಹೆಮ್ಮೆ ಸಿನಿಮಾ ರಂಗಿತರಂಗ ಕ್ಕೆ ಮೊದಲು ರಕ್ಷಿತ್ ಶೆಟ್ಟಿ ಅವರು ಆಯ್ಕೆಯಾಗಿದ್ದರು. ನಂತರದ ದಿನಗಳಲ್ಲಿ ಅವರಿಗೆ ವಾಸ್ತು ಪ್ರಕಾರ ಹಾಗೂ ಕಿರಿಕ್ ಪಾರ್ಟಿ ಚಿತ್ರದ ಚಿತ್ರೀಕರಣಕ್ಕಾಗಿ ರಂಗಿತರಂಗ ಚಿತ್ರವನ್ನು ಕೈಬಿಡಬೇಕಾಯಿತು. ನಂತರ ಈ ಚಿತ್ರದಲ್ಲಿ ನಿರುಪ್ ಭಂಡಾರಿ ಅವರು ನಾಯಕನಟನಾಗಿ ನಟಿಸಿದರು.

ಐದನೇ ದಾಗಿ ಅಮೇರಿಕಾ ಅಮೇರಿಕಾ. ಹೌದು ಸ್ನೇಹಿತರೆ ಅಮೆರಿಕ ಅಮೆರಿಕ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆ ಮಾಡಬೇಕಾಗಿತ್ತು. ಆದರೆ ಅವರು ಹೊಸಬರು ಎನ್ನುವ ಕಾರಣದಿಂದಾಗಿ ಅವರನ್ನು ಚಿತ್ರದಿಂದ ಕೈಬಿಡಲಾಯಿತು. ನಂತರ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಮುತ್ತಪ್ಪ ರೈ ಚಿತ್ರದಲ್ಲಿ ಕೂಡ ಸುದೀಪ್ ರವರು ನಟಿಸಬೇಕಾಗಿತ್ತು. ಇದು ಕೂಡ ಕೋಟಿಗೊಬ್ಬ 2 ಚಿತ್ರದ ಚಿತ್ರೀಕರಣದಿಂದಾಗಿ ನಡೆಯಲಿಲ್ಲ.

ಇನ್ನು ಮುಂದೆ ಹೇಳುವುದಾದರೆ ಕಿಚ್ಚ ಸುದೀಪ್ ನಟನೆಯ ಸೂಪರ್ ಹಿಟ್ ಚಿತ್ರ ಹುಚ್ಚ ಚಿತ್ರದಲ್ಲಿ ಸುದೀಪ್ ರವರು ಮೊದಲ ಆಯ್ಕೆ ಆಗಿರಲಿಲ್ಲ. ಈ ಚಿತ್ರವನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕರುನಾಡ ಚಕ್ರವರ್ತಿ ಶಿವಣ್ಣನವರು ಕೈಬಿಟ್ಟಿದ್ದರು ನಂತರದ ದಿನಗಳಲ್ಲಿ ಕಿಚ್ಚ ಸುದೀಪ್ ರವರಿಗೆ ಚಿತ್ರದ ಅವಕಾಶ ದೊರೆಯಿತು. ಇನ್ನು ಈಗ ಪ್ಯಾನ್ ಇಂಡಿಯಾ ಚಿತ್ರವಾಗಿ ಸದ್ದು ಮಾಡುತ್ತಿರುವ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರಕ್ಕೆ ದರ್ಶನ್ ರವರನ್ನು ವಿಲನ್ ಪಾತ್ರಕ್ಕೆ ತಯಾರಿ ನಡೆದಿತ್ತು.

ಇನ್ನು ಸೂರಿ ನಿರ್ದೇಶನದ ಕೆಂಡಸಂಪಿಗೆ ಚಿತ್ರಕ್ಕೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮೊದಲ ಆಯ್ಕೆಯಾಗಿದ್ದರು ಆದರೆ ಡೇಟ್ಸ್ ಗಳು ಸಿಗದ ಕಾರಣ ಅವರು ನಟಿಸಲು ಸಾಧ್ಯವಾಗಲಿಲ್ಲ. ಇನ್ನು ಈ ಚಿತ್ರದ ಬಗ್ಗೆ ಕೇಳಿದರೆ ನೀವು ಆಶ್ಚರ್ಯ ಪಡೋದು ಖಂಡಿತ. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದ all-time ಸೂಪರ್ ಹಿಟ್ ಚಿತ್ರ ಮುಂಗಾರು ಮಳೆಯಲ್ಲಿ ನಟಿಸಿದ್ದು ಗೋಲ್ಡನ್ ಸ್ಟಾರ್ ಗಣೇಶ್. ಆದರೆ ಈ ಅವಕಾಶ ಮೊದಲಿಗೆ ಬಂದಿದ್ದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ. ನಂತರ ಅವರು ನಿರಾಕರಿಸಿದ ಮೇಲೆ ಅದು ಬಂದಿದ್ದು ರಾಘವೇಂದ್ರ ರಾಜಕುಮಾರ್ ರವರಿಗೆ.

ಅವರು ಕೂಡ ನಿರಾಕರಿಸಿದ ಮೇಲೆ ಅದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಪಾಲಿಗೆ ಗೋಲ್ಡನ್ ಅವಕಾಶವಾಗಿ ಬಂದಿತ್ತು. ಇನ್ನು ಬಾಲಿವುಡ್ ನ ಸೂಪರ್ ಹಿಟ್ ಚಿತ್ರ ಭಜರಂಗಿ ಭಾಯಿಜಾನ್ ಕೂಡ ಸಲ್ಮಾನ್ ಖಾನ್ ರವರ ಬದಲು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಟಿಸಬೇಕಾಗಿತ್ತು. ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿರಾಕರಿಸಿದ ನಂತರ ಇದು ಬಾಲಿವುಡ್ನ ಮೆಗಾಸ್ಟಾರ್ ಆದಂತಹ ಸಲ್ಮಾನ್ ಖಾನ್ ರವರು ನಟಿಸಿ ಇದು ಬಾಕ್ಸಾಫೀಸಲ್ಲಿ ಸೂಪರ್ ಹಿಟ್ ಚಿತ್ರವಾಗಿ ಮಿಂಚಿತ್ತು. ಇನ್ನು ಕೆಲ ಗಾಳಿಸುದ್ದಿ ಪ್ರಕಾರ ಕನ್ನಡ ಚಿತ್ರರಂಗದ all-time ಇಂಡಸ್ಟ್ರಿ ಚಿತ್ರ ಜೋಗಿ ಚಿತ್ರದ ಮೊದಲ ಆಯ್ಕೆ ಶಿವಣ್ಣ ಆಗಿರಲಿಲ್ಲ ಬದಲಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಆಗಿದ್ದರಂತೆ.