ಹಸಿ ಈರುಳ್ಳಿ ದೂರ ಉಳಿಯಬೇಡಿ, ಯಾಕೆಂದರೆ ಈ ವಿಷಯ ತಿಳಿದ್ರೆ ಓಪನ್ ಚಾಲೆಂಜ್ ಮಾಡ್ತೇವೆ ಇಂದೇ ತಿನ್ನೋಕೆ ಶುರು ಮಾಡ್ತೀರಾ

ನಮಸ್ಕಾರ ಸ್ನೇಹಿತರೇ ಹಸಿ ಈರುಳ್ಳಿ ಸ್ವಲ್ಪ ವಾಸನೆ ಬರತ್ತೆ ಅಂತ ತಿನ್ನೋದನ್ನ ಬಿಟ್ಟಿದ್ದೀರಾ !? ಹಾಗಾದರೆ ನೀವು ಬಹುದೊಡ್ಡ ಪ್ರಯೋಜನದಿಂದ ವಂಚಿತರಾಗಿದ್ದೀರಿ ಎಂದೇ ಅರ್ಥ. ಯಾಕೆ ಅಂತೀರಾ! ಹಸಿ ಈರುಳ್ಳಿಯಲ್ಲಿ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಹಸಿ ಈರುಳ್ಳಿಯನ್ನು ಊಟದ ಸಮಯದಲ್ಲಿ ತಿನ್ನಬಹುದು ಅಥವಾ ಸಲಾಡ್ ಗಳ ರೂಪದಲ್ಲಿಯೂ ತಿನ್ನಬಹುದು. ಇದರಿಂದ ಇದರ ವಾಸನೆ ಅಷ್ಟು ಅಸಹನೀಯ ಎನಿಸುವುದಿಲ್ಲ.

ಹಸಿ ಈರುಳ್ಳಿ ತಿನ್ನುವುದು ಎಲ್ಲರಿಗೂ ಅಷ್ಟು ಇಷ್ಟವಲ್ಲ, ಆದರೆ ಕೆಲವರಿಗೆ ತುಂಬಾನೇ ಇಷ್ಟ. ಈರುಳ್ಳಿಯಲ್ಲಿ ಕ್ಯಾಲ್ಸಿಯಂ, ಸೋಡಿಯಂ, ಫೋಲೆಟ್ಸ್, ವಿಟಮಿನ್ ಗಳು, ಮೆಗ್ನೀಷಿಯಂ ಮೊದಲಾದ ಪೋಷಕಾಂಶಗಳು ಹೇರಳವಾಗಿವೆ. ಈರುಳ್ಳಿಯಲ್ಲಿರುವ ಫ್ಲೇವನಾಯ್ಡ್‌ಗಳು ಮತ್ತು ಥಿಯೋಸಲ್ಫಿನೇಟ್‌ಗಳಿಂದಾಗಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ರಕ್ತದ ಹರಿವು ಸುಲಭವಾಗುತ್ತದೆ. ಹಾಗಾಗಿ ಯಾವುದೇ ಹೃದ್ರೋಗ ಅಥವಾ ಪಾರ್ಶ್ವವಾಯು ಸಮಸ್ಯೆ ನಮ್ಮನ್ನು ಕಾಡುವುದಿಲ್ಲ.

ಈರುಳ್ಳಿಯಲ್ಲಿ 25.3ಮಿಗ್ರಾಂ ಕ್ಯಾಲ್ಸಿಯಂ ಇದ್ದು, ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹಾಗಾಗಿ ಹಸಿ ಈರುಳ್ಳಿಯನ್ನು ಸಲಾಡ್ ನಲ್ಲಿ ಸೇರಿಸಿ ಸೇವಿಸಿ. ಈರುಳ್ಳಿ ಕ್ಯಾನ್ಸರ್ ವಿರೋದಿಯೂ ಹೌದು ಎಂದು ಸಂಶೋಧನೆಗಳು ಹೇಳುತ್ತವೆ. ಜರ್ನಲ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಈರುಳ್ಳಿ ಸ್ನಾಯುಗಳ ಸೆಳೆತವನ್ನು ಕೂಡ ನಿವಾರಿಸುತ್ತದೆ. ಅಸ್ತಮಾ ರೋಗಿಗಳ ಉಸಿರಾಟಕ್ಕೆ ಸಹಾಯವಾಗುತ್ತದೆ ಹಸಿ ಈರುಳ್ಳಿ. ಇನ್ನು ಈರುಳ್ಳಿ ಅಲರ್ಜಿ ನಿವಾರಕವಾಗಿಯೂ ಕೂಡ ಸಹಾಯಕವಾಗಿದೆ. ಹಸಿ ಈರುಳ್ಳಿ ದೇಹದ ಒಳಭಾಗದ ಆರೋಗ್ಯವನ್ನು ಮಾತ್ರದಲ್ಲ ದೇಹದ ತ್ವಚೆಯ ರಕ್ಷಣೆಗೂ ಕೂಡ ಸಹಾಯಕವಾಗುತ್ತದೆ. ಕೂದಲಿಗೂ ಕೂಡ ಹಸಿ ಈರುಳ್ಳಿ ರಸ ಹಚ್ಚುವುದರಿಂದ ಸಮೃದ್ಧವಾದ ಕೂದಲು ನಿಮ್ಮದಾಗಬಹುದು. ಮೊಡವೆಗಳ ಕಲೆಗಳನ್ನು ತೆಗೆಯಲೂ ಕೂಡ ಈರುಳ್ಳಿ ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತದೆ.