ಒಲಿಂಪಿಕ್ಸ್ ನಲ್ಲಿ ಭಾರತಕ್ಕಾಗಿ ಚಿನ್ನದ ಪದಕವನ್ನು ಗೆದ್ದಿರುವ ನೀರಜ್ ಚೋಪ್ರಾ ರವರಿಗೆ ಸಿಕ್ಕಿರುವ ಬಹುಮಾನಗಳು ಯಾವ್ಯಾವು ಗೊತ್ತಾ??

ಒಲಿಂಪಿಕ್ಸ್ ನಲ್ಲಿ ಭಾರತಕ್ಕಾಗಿ ಚಿನ್ನದ ಪದಕವನ್ನು ಗೆದ್ದಿರುವ ನೀರಜ್ ಚೋಪ್ರಾ ರವರಿಗೆ ಸಿಕ್ಕಿರುವ ಬಹುಮಾನಗಳು ಯಾವ್ಯಾವು ಗೊತ್ತಾ??

ನಮಸ್ಕಾರ ಸ್ನೇಹಿತರೇ ಮೊದಲ ಬಾರಿಗೆ ಭಾರತದಲ್ಲಿ ಒಲಿಂಪಿಕ್ಸ್ ಕುರಿತಂತೆ ಭಾರತೀಯರೆಲ್ಲರೂ ಈ ಬಾರಿ ಸಾಕಷ್ಟು ವಿಶೇಷವಾದ ಆಸಕ್ತಿಯನ್ನು ಹೊಂದಿದ್ದರು. ಕ್ರಿಕೆಟ್ ಗಿಂತಲೂ ಹೆಚ್ಚಾಗಿ ಭಾರತದ ಒಲಿಂಪಿಕ್ಸ್ ಅನ್ನು ನೋಡಲು ದೂರದರ್ಶನವನ್ನು ಆನ್ ಮಾಡುತ್ತಿದ್ದರು. ನಿನ್ನೆಯಷ್ಟೇ ಭಾರತದ ಇತಿಹಾಸದಲ್ಲಿ ಸುವರ್ಣ ಅಕ್ಷರದಿಂದ ಬರೆದಿಡುವಂತಹ ಸಾಧನೆ ನಡೆದಿದೆ. ಹೌದು ಸ್ನೇಹಿತರೆ ಹರಿಯಾಣ ಮೂಲದ ನೀರಜ್ ಚೋಪ್ರಾ ರವರು ಟೋಕಿಯೋ ಒಲಿಂಪಿಕ್ 2020 ರಲ್ಲಿ ಜಾವೆಲಿನ್ ಎಸೆತದ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದು ಭಾರತ ದೇಶದ ಹೆಸರನ್ನು ಒಲಿಂಪಿಕ್ಸ್ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುವಂತೆ ಮಾಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್ ನ ಪ್ರಾರಂಭದಿಂದಲೂ ಕೂಡ ನೀರಜ್ ಚೋಪ್ರಾ ರವರು ಭಾರತಕ್ಕೆ ಸ್ವರ್ಣಪದಕವನ್ನು ಗೆಲ್ಲುವ ಭರವಸೆಯನ್ನು ನೀಡಿದ್ದರು. ಅಂದುಕೊಂಡಂತೆ ಭಾರತಕ್ಕೆ ಅಥ್ಲೆಟಿಕ್ ನಲ್ಲಿ ಮೊದಲ ಹಾಗೂ ವೈಯಕ್ತಿಕವಾಗಿ ಎರಡನೆಯ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ಏನು ಇಷ್ಟೊಂದು ದೊಡ್ಡ ಸಾಧನೆ ಮಾಡಿರುವ ನೀರಜ್ ಚೋಪ್ರಾ ರವರಿಗೆ ಸಿಕ್ಕಿರುವ ಬಹುಮಾನಗಳು ಏನು ಗೊತ್ತೇ ಸ್ನೇಹಿತರೆ. ಬನ್ನಿ ನಿಮಗೆ ನಾವು ಹೇಳುತ್ತೇವೆ.

ಹೌದು ಸ್ನೇಹಿತರೆ ನೀರಜ್ ಚೋಪ್ರಾ ರವರಿಗೆ ಹರಿಯಾಣ ಸರ್ಕಾರದ 6 ಕೋಟಿ ನಗದು ಬಹುಮಾನ, ಹಾಗೂ ಏ ದರ್ಜೆಯ ಸರಕಾರಿ ಕೆಲಸ, ಜಮೀನು ಖರೀದಿಸುವ ಆಸಕ್ತಿಯಿದ್ದಲ್ಲಿ 50% ರಿಯಾಯಿತಿ. ಮಾತ್ರವಲ್ಲದೆ ಪಂಜಾಬ್ ಸರ್ಕಾರದಿಂದಲೂ ಕೂಡ 2 ಕೋಟಿ ರೂಪಾಯಿ ನಗದು ಬಹುಮಾನ ನೀಡುವ ಭರವಸೆ ನೀಡಲಾಗಿದೆ. ಇನ್ನು ಮಹೇಂದ್ರ ಸಿಂಗ್ ಧೋನಿಯವರ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಒಂದು ಕೋಟಿ ರೂಪಾಯಿ ಬಹುಮಾನ. ವಿಶ್ವದಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಭಾರತೀಯ ಕ್ರಿಕೆಟ್ ಸಂಸ್ಥೆಯಾಗಿರುವ ಬಿಸಿಸಿಐನಿಂದ ಒಂದು ಕೋಟಿ ರೂಪಾಯಿ ಬಹುಮಾನ ಘೋಷಣೆ. ಇನ್ನು ಕಾರು ನಿರ್ಮಾಣ ಸಂಸ್ಥೆಯಾಗಿರುವ ಮಹಿಂದ್ರ ಕಂಪನಿಯಿಂದ SUV ೭೦೦ ಕಾರ್ ಉಡುಗೊರೆಯಾಗಿ ಸಿಗಲಿದೆ. ವಿಮಾನ ಸಂಸ್ಥೆಯಾಗಿರುವ ಇಂಡಿಗೋ ಸಂಸ್ಥೆಯಿಂದ ಒಂದು ವರ್ಷ ಉಚಿತ ಪ್ರಯಾಣವನ್ನು ಕೂಡ ಘೋಷಿಸಲಾಗಿದೆ. ನೀರಜ್ ಚೋಪ್ರಾ ರವರು ಭಾರತಕ್ಕೆ ಬಂದ ಮೇಲಷ್ಟೇ ಯಾವೆಲ್ಲ ಬಹುಮಾನ ದೊರೆಯಲಿದೆ ಎಂಬುದು ಗೊತ್ತಾಗಲಿದೆ.