ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಟಿ20 ವಿಶ್ವಕಪ್ ಗೆ ಸ್ಟಾರ್ ವೇಗಿ ಜಹೀರ್ ಖಾನ್ ಪ್ರಕಟಿಸಿದ ತಂಡದಲ್ಲಿ ಸ್ಥಾನ ಪಡೆದ ಆಟಗಾರರು ಯಾರು ಗೊತ್ತಾ??

4

ನಮಸ್ಕಾರ ಸ್ನೇಹಿತರೇ ವಿಶ್ವ ಟಿ20 ಕಪ್ ಇನ್ನೇನು ಕೆಲವೇ ತಿಂಗಳಲ್ಲಿ ಆರಂಭವಾಗಲಿದೆ. ಅದಕ್ಕೆ ಪೂರ್ವಭಾವಿ ಸಿದ್ದತೆ ಎಂಬಂತೆ ಸೆಪ್ಟೆಂಬರ್ 19 ರಿಂದ ಐಪಿಎಲ್ ನ ಮುಂದುವರಿದ ಚರಣ ನಡೆಯಲಿದೆ. ಈ ಸರಣಿಗೆಂದೇ ಭಾರತದ ಮಾಜಿ ಆಟಗಾರ , ಏಡಗೈ ಸ್ಟಾರ್ ವೇಗಿ ಜಹೀರ್ ಖಾನ್ ಒಂದು ತಂಡವನ್ನು ಪ್ರಕಟಿಸಿದ್ದು, ಇದು ಬಲಿಷ್ಠ ತಂಡವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಬನ್ನಿ ಆ ತಂಡ ಹೇಗಿದೆ ಎಂದು ತಿಳಿದುಕೊಳ್ಳೋಣ.

ಜಹೀರ್ ಖಾನ್ ಪ್ರಕಟಿಸಿದ ತಂಡದಲ್ಲಿ ಐವರು ತಜ್ಞ ಬ್ಯಾಟ್ಸಮನ್ ಗಳು, ಮೂವರು ಆಲ್ ರೌಂಡರ್ ಗಳು, ಒಬ್ಬ ತಜ್ಞ ಸ್ಪಿನ್ನರ್, ಒಬ್ಬ ಏಡಗೈ ವೇಗದ ಬೌಲರ್ ಮತ್ತೊಬ್ಬ ಬಲಗೈ ವೇಗದ ಬೌಲರ್ ಸ್ಥಾನ ಪಡೆದಿದ್ದಾರೆ. ಆರಂಭಿಕರಾಗಿ ಜಹೀರ್ ಖಾನ್ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ರನ್ನ ಆರಿಸಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಆಡದಿದ್ದರೇ ಮಾತ್ರ ವಿರಾಟ್ ಕೋಹ್ಲಿ ಇನ್ನಿಂಗ್ಸ್ ಆರಿಸಬೇಕು ಎಂದು ಹೇಳಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ನಾಯಕ ಕೋಹ್ಲಿ, ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯ ಕುಮಾರ್ ಯಾದವ್, ಐದನೇ ಕ್ರಮಾಂಕದಲ್ಲಿ ರಿಷಭ್ ಪಂತ್, ಆರನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ, ಏಳನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ, ಎಂಟನೇ ಕ್ರಮಾಂಕದಲ್ಲಿ ಜಸಪ್ರಿತ್ ಬುಮ್ರಾ, ಒಂಬತ್ತನೇ ಕ್ರಮಾಂಕದಲ್ಲಿ ನಟರಾಜನ್, ಹತ್ತನೇ ಕ್ರಮಾಂಕದಲ್ಲಿ ವರುಣ್ ಚಕ್ರವರ್ತಿ, ಕೊನೆಯದಾಗಿ ಯುಜವೇಂದ್ರ ಚಾಹಲ್ ಬರಬೇಕು ಎಂದಿದ್ದಾರೆ.

ಮಿಸ್ಟರಿ ಸ್ಪಿನ್ನರ್ ಆಗಿ ವಾಷಿಂಗ್ಟನ್ ಬದಲು ವರುಣ್ ಚಕ್ರವರ್ತಿ ಆಡಬೇಕು ಎಂದು ತಿಳಿಸಿದ್ದಾರೆ. ಸ್ಪಿನ್ ವಿಭಾಗವನ್ನು ಚಾಹಲ್ ಮುನ್ನಡೆಸಿದರೇ, ಬ್ಯಾಕ್ ಅಪ್ ಆಗಿ ರಾಹುಲ್ ಚಾಹರ್ ಇರಬೇಕು ಎಂದಿದ್ದಾರೆ. ಡೆತ್ ಒವರ್ ಸ್ಪೆಷಲಿಸ್ಟ್ ಗಳಾದ ನಟರಾಜನ್ ಹಾಗೂ ಜಸಪ್ರಿತ್ ಬುಮ್ರಾ ಜೋಡಿಗೆ ಮೊದಲ ಅವಕಾಶ ಕೊಡಬೇಕು ಎಂದು ಹೇಳಿದ್ದಾರೆ.

ಜಹೀರ್ ಖಾನ್ ಆಯ್ಕೆ ಮಾಡಿದ ತಂಡ ಇಂತಿದೆ – ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ, ನಟರಾಜನ್,ಜಸಪ್ರಿತ್ ಬುಮ್ರಾ, ಯುಜವೇಂದ್ರ ಚಾಹಲ್.