ಪುನೀತ್ ರಾಜ್ ಕುಮಾರ್ ಫೈಟ್ ನೋಡಿ ಅಲ್ಲು ಅರ್ಜುನ್ ಏನು ಹೇಳಿದ್ದಾರೆ ಗೊತ್ತಾ ?? ಅಪ್ಪು ಯಾಕೆ ಎಲ್ಲಾ ಸುದ್ದಿಯಲ್ಲಿ ಇದನ್ನೇ ಹೇಳುತ್ತಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ಅದರಲ್ಲೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಹಸ ದೃಶ್ಯಗಳು ಹಾಗೂ ಡ್ಯಾನ್ಸಿಗೆ ಹೆಸರಾದವರು ಮುಖ್ಯವಾಗಿ ಇಬ್ಬರು ನಟರು ತೆಲುಗು ಚಿತ್ರರಂಗದಿಂದ ಅಲ್ಲು ಅರ್ಜುನ್ ಹಾಗೂ ಕನ್ನಡ ಚಿತ್ರರಂಗದಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು. ಇತ್ತೀಚಿನ ದಿನಗಳಲ್ಲಿ ಇವರಿಬ್ಬರಲ್ಲಿ ಯಾರು ಅತ್ಯುತ್ತಮ ಡ್ಯಾನ್ಸರ್ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ ಅಲ್ಲುಅರ್ಜುನ್ ರವರ ಇತ್ತೀಚಿನ ಸೂಪರ್ ಹಿಟ್ ಚಿತ್ರ ಅಲಾ ವೈಕುಂಠಪುರಮುಲೋ ಚಿತ್ರದ ಬುಟ್ಟ ಬೊಮ್ಮ ಸಾಂಗ್ ನಂತೆಯೇ ಯುವರತ್ನ ಚಿತ್ರದ ಊರಿಗೊಬ್ಬ ರಾಜ ಸಾಂಗ್ ಕೂಡ ಇತ್ತು.

ಹೀಗಾಗಿ ಇವರಿಬ್ಬರ ಡ್ಯಾನ್ಸ್ ಕುರಿತಂತೆ ಸಾಕಷ್ಟು ಚರ್ಚೆ ನಡೆಯುತ್ತಲೇ ಇರುತ್ತದೆ. ಇನ್ನು ಈ ಕುರಿತಂತೆ ಅಲ್ಲು ಅರ್ಜುನ್ ರವರು ಹೇಳುವುದೇನೆಂದರೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಂತೆ ಡ್ಯಾನ್ಸ್ ಹಾಗೂ ಸಾಹಸ ದೃಶ್ಯಗಳನ್ನು ಮಾಡಲು ಸಾಧ್ಯವೇ ಇಲ್ಲ ನಾನು ಅವರಿಂದಲೇ ಸ್ಫೂರ್ತಿಯನ್ನು ಪಡೆದುಕೊಂಡು ಕಲಿತಿರುವುದು ಎಂದು ಹೇಳುತ್ತಾರೆ. ಇನ್ನು ಇದೇ ವಿಷಯವಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಕೇಳಿದರೆ ನಾನು ಅಲ್ಲುಅರ್ಜುನ್ ರವರು ಒಳ್ಳೆಯ ಸ್ನೇಹಿತರು. ಅವರ ಡ್ಯಾನ್ಸಿಂಗ್ ಸ್ಟೈಲ್ ನನಗೆ ತುಂಬಾ ಇಷ್ಟ ಅವರನ್ನು ಆರ್ಯ ಚಿತ್ರದಿಂದಲೂ ನಾನು ಫಾಲೋ ಮಾಡುತ್ತಿದ್ದೇನೆ ಎಂದು ಹೇಳುತ್ತಾರೆ.

ಇನ್ನು ಇವರಿಬ್ಬರು ಪ್ರತಿಬಾರಿ ಜೊತೆಯಾಗಿ ಸಿಕ್ಕಿದಾಗಲೆಲ್ಲ ಅಲ್ಲು ಅರ್ಜುನ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪರಸ್ಪರ ನೀವು ಡ್ಯಾನ್ಸಿಂಗ್ ನಲ್ಲಿ ಚೆನ್ನಾಗಿ ಮಾಡುತ್ತೀರಿ ಸಾಹಸ ದೃಶ್ಯಗಳನ್ನು ಕೂಡ ಚೆನ್ನಾಗಿ ಮಾಡುತ್ತೀರಿ ಎಂಬುದಾಗಿ ಪರಸ್ಪರ ಹೇಳಿಕೊಳ್ಳುತ್ತಿರುತ್ತಾರಂತೆ. ಹೌದಲ್ವಾ ಸ್ನೇಹಿತರೆ ಇಡೀ ಭಾರತೀಯ ಚಿತ್ರರಂಗದಲ್ಲಿ ವಿಭಿನ್ನ ಶೈಲಿಯ ಡ್ಯಾನ್ಸ್ ಹಾಗೂ ಸಾಹಸ ದೃಶ್ಯಗಳನ್ನು ಮಾಡುವಂತಹ ವಿಭಿನ್ನ ಕಲಾವಿದರು ಇವರಿಬ್ಬರು. ನೀವು ಕೂಡ ಈ ಮಾತನ್ನು ಒಪ್ಪುವುದಾದರೆ ಕಾಮೆಂಟ್ ಬಾಕ್ಸ್ನಲ್ಲಿ ಹೌದು ಎಂದು ಕಾಮೆಂಟ್ ಮಾಡಿ.

Post Author: Ravi Yadav