ಇಂದಿರಾ ಗಾಂಧಿಯವರು ಅಭಿನಯ ಶಾರದೆ ಜಯಂತಿ ಅಮ್ಮನವರಿಗೆ ಏನು ಮಾಡಿದ್ದರು ಗೊತ್ತಾ?? ಯಾರಿಗೂ ತಿಳಿಯದ ಪರದೆ ಹಿಂದಿನ ಕಥೆ.

ನಮಸ್ಕಾರ ಸ್ನೇಹಿತರೇ ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗ ಮೇರು ನಟಿಯೊಬ್ಬರನ್ನು ಕಳೆದುಕೊಂಡಿತು. ಹೌದು ಸ್ನೇಹಿತರೆ ಬಹುಭಾಷೆಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡು ತಮ್ಮ ನಟನಾ ಪ್ರಾವೀಣ್ಯತೆಯನ್ನು ಚಿತ್ರ ಜಗತ್ತಿಗೆ ಪರಿಚಯಿಸುವ ಮೂಲಕ ನಾನೇನ್ ಎಂಬುದನ್ನು ತೋರಿಸಿಕೊಟ್ಟ ಅಂತಹ ನಟಿ ಅಭಿನಯ ಶಾರದೆ ಬಿರುದಾಂಕಿತೆ ಜಯಂತಿ ಅಮ್ಮನವರು.

ಕನ್ನಡ ಚಿತ್ರರಂಗ ಸೇರಿದಂತೆ ಬೇರೆಲ್ಲಾ ಭಾಷೆಗಳಲ್ಲಿ ಸೇರಿ ಒಟ್ಟು ಐನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿ ದಂತಹ ಶ್ರೇಯಾಂಕ ಜಯಂತಿ ಅಮ್ಮನವರಿಗೆ ಸಲ್ಲುತ್ತದೆ. ಕೇವಲ ಇಷ್ಟು ಮಾತ್ರವಲ್ಲದೆ ಅಂದಿನ ಪುರುಷಪ್ರಧಾನ ಚಿತ್ರರಂಗದಲ್ಲಿ ಬಿಕಿನಿ ತೊಡುವ ಮೂಲಕ ಗ್ಲಾಮರಸ್ ಪಾತ್ರಗಳಲ್ಲಿ ಕೂಡ ನಟಿಸಬಲ್ಲೆ ಎಂಬುದಾಗಿ ಜಯಂತಿಯವರು ಅಂದಿನ ಕಾಲದಲ್ಲಿ ತೋರಿಸಿದ್ದರು. ತಮ್ಮ ನಟನೆಯ ಮೂಲಕ ಕೇವಲ ಕನ್ನಡಿಗರನ್ನು ಮಾತ್ರವಲ್ಲದೆ ದೇಶದಾದ್ಯಂತ ಗಣ್ಯರ ಮನೆ ಗೆದ್ದಂತಹ ಅಪರೂಪದ ಕಲಾವಿದೆ ಜಯಂತಿಯವರು. ಎಂತಹದೇ ಪಾತ್ರ ನೀಡಲಿ ಅದನ್ನು ಸುಲಲಿತವಾಗಿ ನಿರ್ವಹಿಸಬಲ್ಲ ಅಂತಹ ಚಾಕಚಕ್ಯತೆ ಜಯಂತಿ ಅವರಿಗಿತ್ತು.

ಇದಕ್ಕಾಗಿ ಅವರು ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದರು. ಅವರು ಯಾವತ್ತೂ ಪ್ರಶಸ್ತಿಯ ಹಿಂದೆ ಬೀಳಲಿಲ್ಲ, ಅವರ ನಟನೆ ನೋಡಿ ಪ್ರಶಸ್ತಿಗಳು ಅವರ ಹಿಂದೆ ಬಿದ್ದವು. ಇನ್ನು ಭಾರತ ದೇಶದ ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿದ್ದಂತಹ ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಒಮ್ಮೆ ಜಯಂತಿ ಅವರಿಗೆ ಏನು ಮಾಡಿದರು ಗೊತ್ತ ಬನ್ನಿ ಹೇಳುತ್ತೇವೆ. ಹೌದು ಸ್ನೇಹಿತರೆ ಒಮ್ಮೆ ಜಯಂತಿಯವರು ರಾಷ್ಟ್ರ ಪ್ರಶಸ್ತಿ ಗೆದ್ದ ಸಂದರ್ಭದಲ್ಲಿ ರಾಷ್ಟ್ರಪತಿಗಳಿಂದ ಪ್ರಶಸ್ತಿಯನ್ನು ತೆಗೆದುಕೊಂಡು ಜಯಂತಿ ಅವರು ಕೆಳಗಿಳಿದು ಕೊಂಡು ಬರಬೇಕಾದರೆ ಪ್ರಧಾನಿಯಾದ ಅಂತಹ ಇಂದಿರಾ ಗಾಂಧಿಯವರು ಜಯಂತಿ ಅವರನ್ನು ಕರೆದು ಅವರೊಂದಿಗೆ ಫೋಟೋ ಕೇಳಿ ಪಡೆದು ಕೊಂಡಿದ್ದರಂತೆ. ಇದನ್ನು ತಮ್ಮ ಕೊನೆಗಾಲದವರೆಗೂ ಕೂಡ ಜಯಂತಿ ಅಮ್ಮನವರು ಹೆಮ್ಮೆಯಿಂದ ಹೇಳಿ ಕೊಳ್ಳುತ್ತಿದ್ದರಂತೆ. ಭಾರತದ ಉಕ್ಕಿನ ಮಹಿಳೆಯ ಮನ ಗೆದ್ದಂತಹ ಅಭಿನಯ ಶಾರದೆ ಎಂದೆ ಹೇಳಬಹುದು ನಮ್ಮ ಜಯಂತಿಯ ಅಮ್ಮನವರನ್ನು.

Post Author: Ravi Yadav