ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಹೆಚ್ಚೆಚ್ಚು ಸಾಧ್ಯವಾದಷ್ಟು ಅಡುಗೆಯಲ್ಲಿ ಬೀನ್ಸ್ ಇರಬೇಕು, ಯಾಕೆ ಗೊತ್ತೇ?? ಅದರ ಲಾಭಗಳೇನು ತಿಳಿದುಕೊಳ್ಳಿ.

2

ನಮಸ್ಕಾರ ಸ್ನೇಹಿತರೇ ತರಕಾರಿಯಲ್ಲಿ ಬೀನ್ಸ್ ಒಂದು ಉತ್ತಮ ಜೀವಸತ್ವಗಳನ್ನು ಹೊಂದಿರುವ ತರಕಾರಿಯಾಗಿದೆ. ಹಾಗಾಗಿ ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ದಿನನಿತ್ಯದ ಅಡುಗೆ ಪದಾರ್ಥಗಳಲ್ಲಿ ಬೀನ್ಸ್ ನ್ನು ಬಳಸುವುದು ಸಾಮಾನ್ಯ. ಅಲ್ಲದೇ ಬೀನ್ಸ್ ಸುಲಭವಾಗಿ ಎಲ್ಲಾ ಋತುವಿನಲ್ಲಿಯೂ ಮಾರುಕಟ್ಟೆಯಲ್ಲಿ ಸಿಕ್ಕೇ ಸಿಗುತ್ತದೆ. ಹಾಗಾಗಿ ಯಾವುದೇ ಸಮಯದಲ್ಲೂ ಕೂಡ ಬೀನ್ಸ್ ಬಳಸಿ ಅಡುಗೆ ಮಾಡಬಹುದು.

ಸ್ನೇಹಿತರೆ, ಬೀನ್ಸ್ ನಲ್ಲಿ ವಿಟಮಿನ್ ಎ, ವಿಟಮಿನ್ ಕೆ ಹಾಗೂ ವಿಟಮಿನ್ ಸಿ ಜೀವಸತ್ವಗಳು, ದೇಹಕ್ಕೆ ಅಗತ್ಯವಾದಷ್ಟು ಕ್ಯಾಲೋರಿ, ಒಳ್ಳೆಯ ಕೊಬ್ಬು, ಕಾರ್ಬೋಹೈಡ್ರೇಟ್, ಪ್ರೋಟಿನ್ ಮೊದಲಾದ ಜೀವಸತ್ವಗಳು ಹೇರಳವಾಗಿವೆ. ಅಲ್ಲದೇ ನಾರಿನಾಂಶ ಇರುವ ತರಕಾರಿ ಇದಾಗಿದ್ದು, ಫೊಲಿಕ್ ಆಸಿಡ್ ನ್ನು ಕೂಡ ಹೊಂದಿದೆ. ಹಾಗಾಗಿ ಆರೋಗ್ಯಕ್ಕೆ ಬೀನ್ಸ್ ಸೇವನೆ ಅತ್ಯಗತ್ಯ ಅಂತನೇ ಹೇಳಬಹುದು. ಕ್ಯಾನ್ಸರ್ ಸಮಸ್ಯೆ ಇರುವವರು ಬೀನ್ಸ್ ಸೇವಿಸುವುದು ಉತ್ತಮ. ಇದರಿಂದ ಕ್ಯಾನ್ಸರ್ ನಿಯಮಿತವಾಗಿ ನಿಯಂತ್ರಿಸಬಹುದು. ಇನ್ನು ಮಕ್ಕಳ ಮೆದುಳಿನ ಆರೋಗ್ಯಕ್ಕೂ ಕೂಡ ಬೀನ್ಸ್ ಅಷ್ಟೇ ಉತ್ತಮ. ಬೀನ್ಸ್ ಅಡುಗೆ ಯಲ್ಲಿ ಬಳಸುವುದರಿಂದ, ಇನ್ನು ಕೆಲವು ಊಹೆಗೆ ಮೀರಿದ ಆರೋಗ್ಯದ ಲಾಭಗಳು ಲಭ್ಯವಾಗುತ್ತವೆ.

ಮೊದಲೇ ಹೇಳಿದ ಹಾಗೆ ಬೀನ್ಸ್ ನಲ್ಲಿ ಪೋಲಿಕ್ ಆಸಿಡ್ ಅಂಶವಿದೆ ಹಾಗಾಗಿ ಗರ್ಭಿಣಿ ಮಹಿಳೆಯರು ತಪ್ಪದೇ ಬೀನ್ಸ್ ನ್ನು ಸೇವಿಸಬೇಕು. ಗರ್ಭಾವಸ್ಥೆಯಲ್ಲಿ ರಕ್ತದಲ್ಲಿ ಕಬ್ಬಿಣಾಂಶ ಸಮತೋಲನದಲ್ಲಿರಬೇಕು. ಹೀಗಾದಾಗ ಮಾತ್ರ ಹೆರಿಗೆಯ ಸಮಯದಲ್ಲಿ ದೇಹದಲ್ಲಿ ರಕ್ತದ ಪ್ರಮಾಣವೂ ಸಮತೋಲನದಲ್ಲಿರುತ್ತದೆ. ಹಾಗಾಗಿ ಬೀನ್ಸ್ ತರಕಾರಿಯನ್ನು ನಿತ್ಯವೂ ಆಹಾರ ಪದಾರ್ಥದಲ್ಲಿ ಸೇರಿಸಿ ತಿನ್ನುವುದು ಅತ್ಯಂತ ಸೂಕ್ತ. ಜೊತೆಗೆ ಮಹಿಳೆಯರು ಗರ್ಭವತಿಯಾಗಲೂ ಕೂಡ ಸಾಕಷ್ಟು ಪ್ರೋಟಿನ್, ವಿಟಮಿನ್ ಗಳಿರುವ ತರಕಾರಿಗಳನ್ನು ಸೇವಿಸಬೇಕು. ಅವುಗಳಲ್ಲಿ ಮುಖ್ಯವಾಗಿ ಬೀನ್ಸ್ ನ್ನು ಕೂಡ ಸೇವಿಸಲೇಬೇಕು.