ಬಿಗ್ ಬಾಸ್ ಮನೆಯಲ್ಲಿ ಶಮಂತ್ ಎಲಿಮಿನೇಟ್ ಆಗಲು ಹಿಂದಿರುವ ಅಸಲಿ ಕಾರಣ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇದೀಗ ಫಿನಾಲೆ ವಾರಕ್ಕೂ ಮುನ್ನ ಲಕ್ಕಿ ಸ್ಪರ್ದಿ ಎಂದೇ ಖ್ಯಾತಿ ಪಡೆದು ಕೊಂಡಿದ್ದ ಶಮಂತ್ ರವರು ಮನೆಯಿಂದ ಹೊರ ಬಂದಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ ಶಮಂತ್ ರವರು ಕೇವಲ ಅದೃಷ್ಟದಿಂದ ಉಳಿದು ಕೊಂಡಿದ್ದರು ಎಂದರೆ ತಪ್ಪಾಗಲಾರದು ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಆ ರೀತಿ ಇರಲಿಲ್ಲ.

ಸಾಕಷ್ಟು ಹಾಡುಗಳನ್ನು ರಚನೆ ಮಾಡಿ ಹೆಸರು ಗಳಿಸಿದರು, ಅದೇ ಸಮಯದಲ್ಲಿ ಈ ಹಾಡುಗಳಿಂದ ಟ್ರೋಲ್ ಪೇಜ್ ಗಳಿಗೆ ಆಹಾರ ವಾದದ್ದು ಉಂಟು. ಇನ್ನು ಇದೇ ಸಮಯದಲ್ಲಿ ಶಮಂತ್ ಗೌಡರವರು ಯಾವ ಕಾರಣಕ್ಕಾಗಿ ಮನೆಯಿಂದ ಹೊರ ಹೋಗಿರಬಹುದು ಎಂಬುದರ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಅಭಿಮಾನಿಗಳು ಇವರು ಫೈನಲ್ ವರೆಗೂ ಹೋಗಿ ವಿಜೇತರ ಆಗಬೇಕಿತ್ತು ಎಂದು ಕೂಡ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ ಆದರೆ ಇತರ ಸ್ಪರ್ಧಿಗಳ ಅಭಿಮಾನಿಗಳಿಗೆ ಹೋಲಿಕೆ ಮಾಡಿದರೆ ಶಮಂತ್ ಅವರ ಅಭಿಮಾನಿಗಳ ಸಂಖ್ಯೆ ಕಡಿಮೆಯೇ ಇದೆ.

ಇನ್ನು ಇವರ ಮನೆಯಿಂದ ಹೊರ ಹೋಗಲು ಕಾರಣ ಏನು ಎಂಬುದನ್ನು ನಾವು ನೋಡುವುದಾದರೆ ಸ್ನೇಹಿತರೇ ಇವರ ಹಳ್ಳವನ್ನು ಇವರೇ ತೋಡಿಕೊಂಡರು ಎಂದರೆ ತಪ್ಪಾಗಲಾರದು, ಯಾಕೆಂದರೆ ನಿಮಗೆಲ್ಲರಿಗೂ ತಿಳಿದಿರುವಂತೆ ಮನೆಯಲ್ಲಿ ಬಹಳ ಮುಗ್ಧ ರೂಪದಲ್ಲಿ ಶಮಂತ್ ರವರು ಕಾಣಿಸಿ ಕೊಂಡಿದ್ದರು ಅದರಲ್ಲಿಯೂ ಮೊದಲ ಇನಿಂಗ್ಸ್ ಮುಗಿದ ಬಳಿಕ ನಡೆದ ಸಂದರ್ಶನದಲ್ಲಿ ನಾನು ಯಾವ ಹುಡುಗಿಗೆ ಪ್ರಪೋಸ್ ಕೂಡ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಅದೇ ಸಮಯದಲ್ಲಿ ಶಮಂತ್ ರವರು ಹುಡುಗಿ ಜೊತೆ ಇದ್ದ ವಿಡಿಯೋ ಒಂದು ಬಿಡುಗಡೆಯಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆಗೆ ಗುರಿಯಾಗಿದೆ. ಇದರಿಂದಲೇ ಶಮಂತ್ ರವರು ಮನೆಯಿಂದ ಹೊರ ಬಂದಿರ ಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Post Author: Ravi Yadav