ಕ್ರೇಜಿಸ್ಟಾರ್ ರವಿಚಂದ್ರನ್ ತುಂಬಾನೇ ಇಷ್ಟ ಪಟ್ಟಂತಹ ಕನ್ನಡದ ಖ್ಯಾತ ನಟ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ನಟನಾಗಿ ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿ ಕೂಡ ಸರ್ವಕಾರ್ಯಗಳಲ್ಲಿ ಸವ್ಯಸಾಚಿಯಂತೆ ಕಾರ್ಯನಿರ್ವಹಿಸುವ ಚಾಣಾಕ್ಷತನ ಇರುವ ಪ್ರಬುದ್ಧ ವ್ಯಕ್ತಿತ್ವ ಎಂದರೆ ಅದು ಕ್ರೇಜಿಸ್ಟಾರ್ ರವಿಚಂದ್ರನ್ ರವರದ್ದು. ಹೌದು ಸ್ನೇಹಿತರೆ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಬಿಗ್ ಬಜೆಟ್ ಸಿನಿಮಾ ಮಾಡಲು ಪ್ರಾರಂಭಿಸಿದ್ದು ಅವರೇ ಮೊದಲು ಎಂಬುದು ನಿಮಗೆಲ್ಲಾ ಗೊತ್ತೇ ಇದೆ.

ಇನ್ನು ರವಿಚಂದ್ರನ್ ಅವರು ಯಾರ ಬಗ್ಗೆ ಕೂಡ ಸುಮ್ಮಸುಮ್ಮನೆ ಹೋಗಳುವುದಿಲ್ಲ. ರವಿಚಂದ್ರನ್ ರವರು ಯಾರ ಬಗ್ಗೆ ಹೊಗಳಿದ್ದಾರೆ ಅಥವಾ ಯಾರನ್ನಾದರೂ ಇಷ್ಟ ಪಟ್ಟಿದ್ದಾರೆ ಎಂದರೆ ಅವರು ಆ ನಟ ಹಾಗೂ ನಿರ್ದೇಶಕರಲ್ಲಿ ಏನನ್ನಾದರೂ ಉತ್ತಮ ಗುಣವನ್ನು ನೋಡಿರುತ್ತಾರೆ. ಇನ್ನು ರವಿಚಂದ್ರನ್ ರವರು ಇಷ್ಟ ಪಟ್ಟಂತಹ ನಟ ಯಾರು ಗೊತ್ತಾ ಸ್ನೇಹಿತರೆ. ಹೌದು ಸ್ನೇಹಿತರೆ ರವಿಚಂದ್ರನ್ ಅವರು ಇಷ್ಟಪಟ್ಟಂತಹ ಆ ಅದ್ಭುತ ಪ್ರತಿಭೆ ಲೋಕೇಶ್ ರವರು. ಹೌದು ಸ್ನೇಹಿತರೆ ಇವರಿಬ್ಬರ ಜೋಡಿಯಲ್ಲಿ ಈಗಾಗಲೇ 10 ಚಿತ್ರಗಳು ಮೂಡಿಬಂದಿವೆ ಹಾಗೂ ಎಲ್ಲಾ ಹತ್ತು ಚಿತ್ರಗಳು ಸೂಪರ್ ಹಿಟ್ ಆಗಿವೆ.

ಮೊದಲಿಗೆ ಇವರಿಬ್ಬರ ಕಾಂಬಿನೇಷನ್ ಅಲ್ಲಿ ಸಾವಿರ ಸುಳ್ಳು ಚಿತ್ರ ಬರುತ್ತದೆ. ಇದಾದ ನಂತರ ಪ್ರೇಮಲೋಕ ಚಿತ್ರದಲ್ಲಿ ರವಿಚಂದ್ರನ್ ರವರ ತಂದೆಯಾಗಿ, ರಣಧೀರ ಚಿತ್ರದಲ್ಲಿ ಮಾವನಾಗಿ, ಗೋಪಿಕೃಷ್ಣ ಚಿತ್ರದಲ್ಲಿ ಕಳ್ಳ ಗುರು ಆಗಿ, ರಾಮಾಚಾರಿ ಚಿತ್ರದಲ್ಲಿ ಹೀರೋಯಿನ್ ಅಣ್ಣನಾಗಿ, ಕಿಂದರಿ ಜೋಗಿ ಚಿತ್ರದಲ್ಲಿ ಊರ ಮುಖಂಡನಾಗಿ, ಗುರು ಬ್ರಹ್ಮ ಚಿತ್ರದಲ್ಲಿ ತಂದೆಯಾಗಿ, ಪುಟ್ನಂಜ ಚಿತ್ರದಲ್ಲಿ ಅಮ್ಮಾವ್ರ ಗಂಡ ನಾಗಿ, ಪ್ರೀತ್ಸೋದ್ ತಪ್ಪಾ ಚಿತ್ರದಲ್ಲಿ ಮತ್ತೆ ಪುನಹ ರವಿಚಂದ್ರನ್ ರವರ ತಂದೆಯಾಗಿ ಕಾಣಿಸಿಕೊಂಡು ನಟಿಸಿದ್ದರು. ಇವರಿಬ್ಬರ ಜೋಡಿ ಅಂದಿನಿಂದ ಇಂದಿನವರೆಗೂ ಕೂಡ ಜನಮಾನಸದಲ್ಲಿ ಅಜರಾಮರವಾಗಿ ಉಳಿದುಕೊಂಡು ಬಿಟ್ಟಿದೆ. ಈ ಜೋಡಿಯ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Post Author: Ravi Yadav