ಮನೆಯಲ್ಲಿಯೇ ಹೋಟೆಲ್ ಗಿಂತ ಅದ್ಭುತ ರುಚಿಯ ಪಾಲಕ್ ರೈಸ್ ಮಾಡುವುದು ಹೇಗೆ ಗೊತ್ತೇ?? ಪದೇ ಪದೇ ಮಾಡು ಅಂತಾರೆ.
ಮನೆಯಲ್ಲಿಯೇ ಹೋಟೆಲ್ ಗಿಂತ ಅದ್ಭುತ ರುಚಿಯ ಪಾಲಕ್ ರೈಸ್ ಮಾಡುವುದು ಹೇಗೆ ಗೊತ್ತೇ?? ಪದೇ ಪದೇ ಮಾಡು ಅಂತಾರೆ.
ನಮಸ್ಕಾರ ಸ್ನೇಹಿತರೇ ಪಾಲಕ್ ರೈಸ್ ತಿನ್ನೋಕೆ ತುಂಬಾನೇ ರುಚಿ. ಹಾಗೇನೇ ಪಾಲಕ್ ನಲ್ಲಿ ಪ್ರೊಟೀನ್ ಹಾಗೂ ವಿಟಮಿನ್ ಗಳು ಹೇರಳವಾಗಿದ್ದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹಾಗಾಗಿ ಆಗಾಗ ಪಾಲಕ್ ಸೊಪ್ಪನ್ನು ಬಳಸಿ ಬೇರೆ ಬೇರೆ ಆಹಾರ ತಯಾರಿಸಿ ತಿನ್ನುವುದು ಒಳ್ಳೆಯದು. ಇಂದು ಪಾಲಕ್ ರೈಸ್ ಹೇಗೆ ಮಾಡೋದು ನೋಡೋಣ ಬನ್ನಿ.
ಪಾಲಕ್ ರೈಸ್ ಮಾಡಲು ಬೇಕಾಗಿರುವ ಸಾಮಗ್ರಿಗಳು: ಪಾಲಕ್ – ಒಂದು ಕಟ್ಟು, ಅಕ್ಕಿ -2 ಕಪ್, ಈರುಳ್ಳಿ- 2, ಟೊಮ್ಯಾಟೋ-2, ತೆಂಗಿನತುರಿ ಅರ್ಧ ಕಪ್, ಎಣ್ಣೆ ಸ್ವಲ್ಪ, ಹಸಿಮೆಣಸು- 5-6, ಚಕ್ಕೆ, ಲವಂಗ, ಏಲಕ್ಕಿ, ಕಸೂರಿ ಮೇಥಿ ಸ್ವಲ್ಪ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸ್ವಲ್ಪ, ಅಚ್ಚ ಖಾರದ ಪುಡಿ 2 ಚಮಚ, ತುಪ್ಪ 2 ಚಮಚ, ಮೊಸರು ಕಾಲು ಕಪ್, ಧನಿಯಾ ಪುಡಿ ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು.
ಪಾಲಕ್ ರೈಸ್ ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಗೆ ನೀರನ್ನು ಹಾಕಿ ಬಿಸಿ ಮಾಡಿ. ಅದಕ್ಕೆ ಚೆನ್ನಾಗಿ ತೊಳೆದ ಒಂದು ಕಟ್ಟು ಪಾಲಕ್ ಸೊಪ್ಪನ್ನು ಹಾಕಿ ಬೇಯಿಸಿಕೊಳ್ಳಿ. ಪಾಲಕ್ ಸೊಪ್ಪು ಬೆಂದ ನಂತರ ನುಣ್ಣಗೆ ರುಬ್ಬಿಕೊಳ್ಳಿ. ಈಗ ತೆಂಗಿನತುರಿಯನ್ನು ಕೂಡ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಪಾತ್ರೆಯಲ್ಲಿ ಅಕ್ಕಿಯನ್ನು 10 ನಿಮಿಷಗಳ ಕಾಲ ನೆನೆಸಿಕೊಳ್ಳಬೇಕು.
ಈಗ ಒಂದು ಕುಕ್ಕರ್ ಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಅದಕ್ಕೆ ತೆಗೆದಿಟ್ಟುಕೊಂಡ ಚೆಕ್ಕೆ, ಲವಂಗ, ಏಲಕ್ಕಿ ಹಾಗೂ ಕಸೂರಿ ಮೇಥಿಯನ್ನು ಹಾಕಿ. ನಂತರ ಹಸಿಮೆಣಸು ಹಾಗೂ ಶುಂಠಿ ಬೆಳ್ಳುಳ್ಳಿ ಪೇಸ್ಟ್ ನ್ನು ಸೇರಿಸಿ ಸ್ವಲ್ಪ ಹುರಿಯಿರಿ. ಇದರ ಹಸಿ ವಾಸನೆ ಹೋಗುವವರೆಗೆ 30 ಸೆಕೆಂಡುಗಳ ಕಾಲ ಮಿಕ್ಸ್ ಮಾಡಿ. ಈಗ ರುಬ್ಬಿಟ್ಟುಕೊಂಡ ಪಾಲಕ್ ಸೊಪ್ಪನ್ನು ಹಾಕಿ 2 ನಿಮಿಷ ಕುದಿಸಿ. ಇದಕ್ಕೆ ಹೆಚ್ವಿಟ್ಟುಕೊಂಡ ಈರುಳ್ಳಿಯನ್ನು ಸೇರಿಸಿ ಮಿಕ್ಸ್ ಮಾಡಿ. ನಂತರ ಹೆಚ್ವಿಟ್ಟುಕೊಂಡ ಟೊಮ್ಯಾಟೋ ವನ್ನು ಸೇರಿಸಿ 2 ನಿಮಿಷ ಹುರಿಯಿರಿ. ಇದಕ್ಕೆ ರುಬ್ಬಿಕೊಂಡ ತೆಂಗಿನಕಾಯಿ ಯನ್ನು ಸೇರಿಸಿ. ನಂತರ ಧನಿಯಾ ಪುಡಿ, ಅಚ್ಚ ಖಾರದ ಪುಡಿ ಹಾಗೂ ಮೊಸರನ್ನು ಸೇರಿಸಿ 2 ನಿಮಿಷಗಳ ಕಾಲ ಚೆನ್ನಾಗಿ ಪ್ರೈ ಮಾಡಿಕೊಳ್ಳಿ. ಇದಕ್ಕೆ 3 ಕಪ್ ನೀರನ್ನು ಹಾಕಿ. (2 ಕಪ್ ಅಕ್ಕಿಗೆ3 ಕಪ್ ನೀರು ಸಾಕು) ಇದಕ್ಕೆ ಅಕ್ಕಿಯನ್ನು ಹಾಕಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಗೂ 2 ಚಮಚ ತುಪ್ಪ ವನ್ನು ಸೇರಿಸಿ ಕುಕ್ಕರ್ ನ ಮುಚ್ಚಳ ಮುಚ್ಚಿ2 ವಿಶಲ್ ಕೂಗಿಸಿ. ಕುಕ್ಕರ್ ಆರಿದ ನಂತರ ಮುಚ್ಚಳ ತೆಗೆದು ಒಮ್ಮೆ ಮಿಕ್ಸ್ ಮಾಡಿ. ಇದೀಗ ಅದ್ಭುತ ರುಚಿಯ ಪಾಲಕ್ ರೈಸ್ ರೆಡಿ. ಮನೆಯಲ್ಲಿ ನೀವೂ ಮಾಡಿ ಮನೆಯವರಿಗೆ ಬಡಿಸಿ. ಹೋಗಳಿಕೆಯಂತೂ ಸಿಕ್ಕೇ ಸಿಗತ್ತೆ ನೋಡಿ!