ಶಮಂತ್, ದಿವ್ಯ ಹಾಗೂ ಅರವಿಂದ್ ರವರ ಫೋಟೋ ವಿಡಿಯೋ ಬಿಡುಗಡೆಯಾಗಲು ಕಾರಣವಾದ ಬಿಗ್ ಬಾಸ್ ಸ್ಪರ್ಧಿ ಯಾರಂತೆ ಗೊತ್ತಾ???

ಶಮಂತ್, ದಿವ್ಯ ಹಾಗೂ ಅರವಿಂದ್ ರವರ ಫೋಟೋ ವಿಡಿಯೋ ಬಿಡುಗಡೆಯಾಗಲು ಕಾರಣವಾದ ಬಿಗ್ ಬಾಸ್ ಸ್ಪರ್ಧಿ ಯಾರಂತೆ ಗೊತ್ತಾ???

ನಮಸ್ಕಾರ ಸ್ನೇಹಿತರೇ ಕಳೆದ ಎರಡು ಮೂರು ದಿನಗಳಿಂದ ನೀವು ಗಮನಿಸುತ್ತಿರಬಹುದು ಬಿಗ್ ಬಾಸ್ ಫಿನಾಲೆ ಹತ್ತಿರ ಬರುತ್ತಿದ್ದಂತೆ ಸ್ಪರ್ಧಿಗಳ ಹಲವಾರು ವೈಯಕ್ತಿಕ ಫೋಟೋಗಳು ಹಾಗೂ ವಿಡಿಯೋಗಳು ಬಿಡುಗಡೆಯಾಗುತ್ತಿವೆ. ಕೆಲವೊಂದು ಮೂಲಗಳ ಪ್ರಕಾರ ಸ್ಪರ್ಧಿಗಳ ಅಭಿಮಾನಿಗಳು ಟ್ರೋಲ್ ಪೇಜ್ ಗಳ ಕುರಿತು ಮನಬಂದಂತೆ ಮಾತನಾಡಿದ ಕಾರಣ ಟ್ರೋಲ್ ಪೇಜ್ ಗಳು ಹುಡುಕಿ ಹುಡುಕಿ ಫೋಟೋ ಹಾಗೂ ವಿಡಿಯೋ ಗಳನ್ನು ಬಿಡುಗಡೆ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಸಾಮಾನ್ಯವಾಗಿ ಮನರಂಜನೆಯ ವಿಚಾರವಾಗಿ ಟ್ರೋಲ್ ಪೇಜ್ ಗಳು ಪ್ರತಿಯೊಬ್ಬರನ್ನು ಕೂಡ ಟ್ರೋಲ್ ಮಾಡುತ್ತಾರೆ ಆದರೆ ಅದು ಮನರಂಜನೆಗೆ ಮಾತ್ರ ಸೀಮಿತವಾಗಿರುತ್ತದೆ.

ಆದರೆ ಸ್ಪರ್ಧಿಗಳ ಅಭಿಮಾನಿಗಳು ಇದನ್ನು ಕೇವಲ ಮನರಂಜನೆಯಾಗಿ ತೆಗೆದುಕೊಳ್ಳದೆ ಟ್ರೋಲ್ ಪೇಜ್ ಗಳನ್ನು ನಾವೇ ಕಿಲಾಡಿಗಳು ಎಂದುಕೊಂಡು ‌ತಮ್ಮ ಸ್ಟೋರಿ ಗಳಲ್ಲಿ ಹಾಕಿ ಅಭಿಮಾನಿಗಳಿಗೆ ಇಲ್ಲಿ ಹೋಗಿ ಮನಬಂದಂತೆ ಮಾತನಾಡಲು ಮನವಿ ಮಾಡಿದ ಕಾರಣ ಟ್ರೋಲ್ ಪೇಜ್ ಗಳು ಎಂದಿನಂತೆ ತಕ್ಕ ಉತ್ತರ ನೀಡುವ ಸಲುವಾಗಿ ಫೋಟೋಗಳು ಹಾಗೂ ವಿಡಿಯೋಗಳನ್ನು ಬಿಡುಗಡೆ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಇದೀಗ ಈ ಕುರಿತು ಮಾತನಾಡಿರುವ ಚಕ್ರವರ್ತಿ ಚಂದ್ರಚುಡ್ ರವರು ಬಿಗ್ ಬಾಸ್ ಮನೆಯೊಳಗಿನ ಸ್ಪರ್ಧಿ ಒಬ್ಬರು ಈ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಅಚ್ಚರಿ ಸೃಷ್ಟಿಸಿದ್ದಾರೆ.

ಹೌದು ಸ್ನೇಹಿತರೇ ಮನೆಯ ಒಳಗಡೆ ಸದಾ ಪ್ರಶಾಂತ ಸಂಬರ್ಗಿ ರವರ ಜೊತೆ ಕಾಣಿಸಿಕೊಂಡಿದ್ದ ಚಕ್ರವರ್ತಿ ಚಂದ್ರಚುಡ್ ರವರ ಮನೆಯ ಹೊರಗಡೆ ಬಂದ ತಕ್ಷಣ ಪ್ರಶಾಂತ ಸಂಬರ್ಗಿ ರವರ ವಿರುದ್ಧ ಮಾತನಾಡಲು ಆರಂಭಿಸಿದ್ದಾರೆ, ಕನ್ನಡದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಚಕ್ರವರ್ತಿ ಚಂದ್ರಚೂಡ್ ರವರು ಶಮಂತ್ ಹಾಗೂ ದಿವ್ಯ ಉರುಡುಗ ಮತ್ತು ಅರವಿಂದ್ ರವರ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಲು ಪ್ರಶಾಂತ ಸಂಬರ್ಗಿ ರವರೇ ಕಾರಣ, ಫಿನಾಲೆ ಹತ್ತಿರ ಬಂದ ದಿನಗಳನ್ನು ಗಮನಿಸಿ ಈ ಕೆಲಸ ಮಾಡುತ್ತಿದ್ದಾರೆ ಎಂದು ನೇರವಾಗಿ ಹೇಳಿಕೆ ನೀಡಿದ್ದಾರೆ. ಇವರು ಮಾತನಾಡಿರುವ ವಿಡಿಯೋ ಕೆಳಗಡೆ ಇದ್ದು ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.