ಟಿ20 ವಿಶ್ವಕಪ್ ಗೆ ಹರ್ಷ ಭೋಗ್ಲೆ ಪ್ರಕಟಿಸಿದ ತಂಡದಲ್ಲಿ ಸ್ಥಾನ ಪಡೆದ ಆಟಗಾರರು ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ವಿಶ್ವ ಟಿ20 ಕಪ್ ಇನ್ನೇನು ಕೆಲವೇ ತಿಂಗಳಲ್ಲಿ ಆರಂಭವಾಗಲಿದೆ. ಅದಕ್ಕೆ ಪೂರ್ವಭಾವಿ ಸಿದ್ದತೆ ಎಂಬಂತೆ ಸೆಪ್ಟೆಂಬರ್ 19 ರಿಂದ ಐಪಿಎಲ್ ನ ಮುಂದುವರಿದ ಚರಣ ನಡೆಯಲಿದೆ. ಈ ಸರಣಿಗೆಂದೇ ಭಾರತದ ಖ್ಯಾತ ಟಿವಿ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಒಂದು ತಂಡವನ್ನು ಪ್ರಕಟಿಸಿದ್ದು, ಇದು ಬಲಿಷ್ಠ ತಂಡವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಬನ್ನಿ ಆ ತಂಡ ಹೇಗಿದೆ ಎಂದು ತಿಳಿದುಕೊಳ್ಳೋಣ.

ಹರ್ಷ ಭೋಗ್ಲೆ ಪ್ರಕಟಿಸಿದ ತಂಡದಲ್ಲಿ ಆರು ತಜ್ಞ ಬ್ಯಾಟ್ಸಮನ್ ಗಳು, ಮೂವರು ಆಲ್ ರೌಂಡರ್ ಗಳು, ಇಬ್ಬರು ತಜ್ಞ ಸ್ಪಿನ್ನರ್, ನಾಲ್ವರು ವೇಗದ ಬೌಲರ್ ಗಳು ಸ್ಥಾನ ಪಡೆದಿದ್ದಾರೆ. ಆರಂಭಿಕರಾಗಿ ಹರ್ಷ ಭೋಗ್ಲೆ ಸಹ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ರನ್ನ ಆರಿಸಿಕೊಂಡಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ನಾಯಕ ಕೋಹ್ಲಿ, ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯ ಕುಮಾರ್ ಯಾದವ್, ಐದನೇ ಕ್ರಮಾಂಕದಲ್ಲಿ ರಿಷಭ್ ಪಂತ್, ಆರನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ, ಏಳನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ, ಎಂಟನೇ ಕ್ರಮಾಂಕದಲ್ಲಿ ಜಸಪ್ರಿತ್ ಬುಮ್ರಾ, ಒಂಬತ್ತನೇ ಕ್ರಮಾಂಕದಲ್ಲಿ ನಟರಾಜನ್, ಹತ್ತನೇ ಕ್ರಮಾಂಕದಲ್ಲಿ ವರುಣ್ ಚಕ್ರವರ್ತಿ, ಕೊನೆಯದಾಗಿ ಯುಜವೇಂದ್ರ ಚಾಹಲ್ ಬರಬೇಕು ಎಂದಿದ್ದಾರೆ.

ಬ್ಯಾಕ್ ಅಪ್ ವೇಗದ ಬೌಲರ್ ಗಳಾಗಿ ದೀಪಕ್ ಚಾಹರ್, ಮಹಮದ್ ಶಮಿ ಅಥವಾ ಟಿ ನಟರಾಜನ್ ಇಬ್ಬರಲ್ಲಿ ಒಬ್ಬರೂ ಹಾಗೂ ಬ್ಯಾಕ್ ಅಪ್ ಬ್ಯಾಟ್ಸಮನ್ ಆಗಿ ಶ್ರೇಯಸ್ ಅಯ್ಯರ್ ಅಥವಾ ವಿಕೇಟ್ ಕೀಪರ್ ಬ್ಯಾಟ್ಸಮನ್ ಇಶಾನ್ ಕಿಶನ್ ಇವರಿಬ್ಬರಲ್ಲಿ ಒಬ್ಬರನ್ನ ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಕೆ.ಎಲ್.ರಾಹುಲ್ ಸಹ ವೀಕೇಟ್ ಕೀಪಿಂಗ್ ಮಾಡುವ ಕಾರಣ ಶ್ರೇಯಸ್ ಅಯ್ಯರ್ ಆಯ್ಕೆ ಉತ್ತಮ ಎಂದು ಹೇಳಿದ್ದಾರೆ.

ಹರ್ಷ ಭೋಗ್ಲೆಯವರು ಆಯ್ಕೆ ಮಾಡಿದ ಹದಿನೈದು ಸದಸ್ಯರ ತಂಡ ಇಂತಿದೆ – ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ,ಜಸಪ್ರಿತ್ ಬುಮ್ರಾ, ಯುಜವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ವಾಷಿಂಗ್ಟನ್ ಸುಂದರ್, ಮಹಮದ್ ಶಮಿ / ಟಿ ನಟರಾಜನ್, ಶ್ರೇಯಸ್ ಅಯ್ಯರ್/ಇಶಾನ್ ಕಿಶನ್‌. ಈ ಹದಿನೈದರಲ್ಲಿ ನಿಮ್ ಆಯ್ಕೆಯ ಆಡುವ ಹನ್ನೊಂದರ ಬಳಗ ಯಾವುದು ಎಂಬುದನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav