ಬಿಗ್ ಬಾಸ್ ನಲ್ಲಿ ದಾಖಲೆ ವೋಟ್ಗ ಳನ್ನು ಪಡೆದು ಇತಿಹಾಸ ಸೃಷ್ಟಿಸಿದ ಸ್ಪರ್ಧಿ, ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಮನೆಯಲ್ಲಿ ಇದೀಗ ವಿನ್ನರ್ ಆಗಿ ಮನೆಯಿಂದ ಯಾರು ಹೊರ ಬರುತ್ತಾರೆ ಎಂಬುದರ ಕುರಿತು ‌ಎಲ್ಲೆಡೆ ಚರ್ಚೆಗಳು ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಸೀಸನ್ 8 ‌ ಮುಕ್ತಾಯವಾಗುವ ಕಾರಣ ಸ್ಪರ್ಧಿಗಳ ನಡುವೆ ಸಾಕಷ್ಟು ಪೈಪೋಟಿ ಮೂಡಿದ್ದು ಅಭಿಮಾನಿಗಳಲ್ಲಿ ಪ್ರತಿಕ್ಷಣವೂ ಕೂಡ ಯಾರು ಗೆಲ್ಲಬಹುದು ಎಂಬ ಆಲೋಚನೆ ತುಂಬಿಕೊಂಡಿದೆ. ಇನ್ನು ಕೇವಲ ಕೆಲವೇ ಕೆಲವು ದಿನಗಳಲ್ಲಿ ಅಧಿಕೃತವಾಗಿ ಈ ಬಾರಿಯ ವಿನ್ನರ್ ಯಾರು ಎಂದು ಘೋಷಣೆ ಮಾಡಲು ಎಲ್ಲ ಸಿದ್ಧತೆಗಳು ನಡೆದಿದ್ದು ಶಮಂತ್ ಹಾಗೂ ಶುಭ ಪೂಂಜಾ ರವರ ನಂತರ ಮತ್ತೊಬ್ಬರು ಮನೆಯಿಂದ ಹೊರಹೋಗಲು ಎಲ್ಲಾ ತಯಾರಿಗಳು ಆರಂಭವಾಗಿವೆ.

ಇನ್ನು ಇದೇ ಸಮಯದಲ್ಲಿ ಕಳೆದ ವಾರ ದಿವ್ಯ ಉರುಡುಗ ಅವರನ್ನು ಹೊರತು ಪಡಿಸಿ ಉಳಿದ ಎಲ್ಲಾ ಸ್ಪರ್ಧಿಗಳು ಎಲಿಮಿನೇಟ್ ಆಗಲು ನಾಮಿನೇಷನ್ ಆಗಿದ್ದರು, ಈ ಸಮಯದಲ್ಲಿ ಯಾವ ಸ್ಪರ್ಧಿಗಳಿಗೆ ಹೆಚ್ಚು ಪ್ರೇಕ್ಷಕರು ವೋಟ್ ಮಾಡಿದ್ದಾರೆ ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ಆರಂಭವಾಗಿವೆ, ಇದೇ ಸಮಯದಲ್ಲಿ ಭಾರತದ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಒಂದಾಗಿರುವ ಸಾಕ್ಷಿ ಸಂಸ್ಥೆಯು ಯಾವ ಸ್ಪರ್ಧಿ ಹೆಚ್ಚಿನ ಮತಗಳನ್ನು ಪಡೆದುಕೊಂಡಿದ್ದಾರೆ ಎಂಬುದರ ಕುರಿತು ವಿಶೇಷ ಲೇಖನವೊಂದನ್ನು ಬಿಡುಗಡೆ ಮಾಡಿದೆ.

ಹೌದು ಸ್ನೇಹಿತರೇ ಸಾಕ್ಷಿ ಪ್ರಸಾರ ಮಾಡಿರುವ ಫೋಟೋವನ್ನು ನಾವು ಮೇಲುಗಡೆ ಹಾಕಿದ್ದೇವೆ ನೋಡಿ, ಈ ಕುರಿತು ಲೇಖನ ಬರೆದಿರುವ ಸಾಕ್ಷಿ ಮಾಧ್ಯಮ ಸಂಸ್ಥೆಯು ಫೈನಲ್ ವಾರಕ್ಕೂ ಮುನ್ನ ಕೊನೆಯ ವಾರದಲ್ಲಿ ಎಲ್ಲರೂ ನಾಮಿನೇಟ್ ಆಗಿದ್ದ ಸಮಯದಲ್ಲಿ ಜನರಿಗೆ ತಾನು ಯಾರು ಎಂಬುದು ತಿಳಿಯದೆ ಮನೆಯ ಒಳಗಡೆ ಪ್ರವೇಶಿಸಿ ಸಂಪೂರ್ಣ ಜನಪ್ರಿಯತೆ ಪಡೆದು ಕೊಂಡಿರುವ ಅರವಿಂದ್ ರವರು ಎಲ್ಲಾ ಸ್ಪರ್ಧಿಗಳನ್ನು ಮೀರಿಸಿ ಹೆಚ್ಚಿನ ವೋಟು ಪಡೆದುಕೊಂಡಿದ್ದಾರೆ ಎಂದು ವರದಿ ಮಾಡಿದೆ. ಎಷ್ಟು ಜನ ವೋಟ್ ಮಾಡಿದ್ದಾರೆ ಎಂಬುದರ ಯಾವುದೇ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಾಗಿಲ್ಲಾವಾದರೂ ಕೂಡ ಅರವಿಂದ್ ಅವರು ಹೆಚ್ಚಿನ ಜನರಿಗೆ ಇಷ್ಟವಾಗಿದ್ದಾರೆ ಎಂದು ಮಾಧ್ಯಮ ವರದಿಯಲ್ಲಿ ತಿಳಿಸಲಾಗಿದೆ.

Post Author: Ravi Yadav