ವಿರಾಟ್ ಹಾಗೂ ರೋಹಿತ್ ಸ್ಥಾನವನ್ನು ತುಂಬುವ ಯುವ ಆಟಗಾರರನ್ನು ಹೆಸರಿಸಿದ ಹರ್ಭಜನ್, ಯಾರಂತೆ ಗೊತ್ತೇ??

ವಿರಾಟ್ ಹಾಗೂ ರೋಹಿತ್ ಸ್ಥಾನವನ್ನು ತುಂಬುವ ಯುವ ಆಟಗಾರರನ್ನು ಹೆಸರಿಸಿದ ಹರ್ಭಜನ್ ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ಸಚಿನ್, ಸೆಹ್ವಾಗ್, ಗಂಗೂಲಿ, ದ್ರಾವಿಡ್ ಸ್ಥಾನ ತುಂಬಬಲ್ಲ ಭವಿಷ್ಯದ ಆಟಗಾರ ಯಾರು ಎಂಬ ಚರ್ಚೆ ನಡೆಯುತ್ತಿತ್ತು. ನಂತರ ಆ ಸ್ಥಾನಕ್ಕೆ ಸಮರ್ಥ ಆಟಗಾರರು ಬಂದ ನಂತರ ಆ ಚರ್ಚೆ ಕ್ರಮೇಣ ಕಡಿಮೆಯಾಗತೊಡಗಿತು. ಸದ್ಯ ಈಗ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ನಂತರ ಆ ಸ್ಥಾನಕ್ಕೆ ಯಾರು, ಇನ್ನು ಮುಂದುವರಿದು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸ್ಥಾನ ತುಂಬಬಲ್ಲ ಆಟಗಾರ ಯಾರು ಎಂಬ ಚರ್ಚೆಗೆ ಭಾರತದ ಟರ್ಬನೇಟರ್ ಖ್ಯಾತಿಯ ಹರ್ಭಜನ್ ಸಿಂಗ್ ಈಗ ದನಿಗೂಡಿಸಿದ್ದಾರೆ.

ಇತ್ತೀಚೆಗೆ ಇಂಗ್ಲೀಷ್ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದ ಭಜ್ಜಿ ಭಾರತದ ಭವಿಷ್ಯದ ಕ್ರಿಕೇಟ್ ತಂಡದ ಬಗ್ಗೆ ಮಾತನಾಡುತ್ತ, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಸ್ಥಾನವನ್ನ ಖಂಡಿತ ಈ ಆಟಗಾರ ತುಂಬುತ್ತಾನೆ ಎಂದು ಹೇಳಿದರು. ಆತನನ್ನು ನಾನು ಬಹಳಷ್ಟು ವರ್ಷಗಳಿಂದ ಗಮನಿಸಿಕೊಂಡು ಬರುತ್ತಿದ್ದೇನೆ, ಆತ ವೇಗದ ಬೌಲರ್ ಗಳಿಗಾಗಲಿ, ಸ್ಪಿನ್ ಬೌಲರ್ ಗಳಿಗಾಗಲಿ ಆಡುವ ಶೈಲಿಯನ್ನ ಗಮನಿಸಿದರೇ, ಸದ್ಯ ಆತನನ್ನ ತಡೆಯುವ ಶಕ್ತಿ ಪ್ರಪಂಚದ ಯಾವ ಬೌಲರ್ ಗೂ ಇಲ್ಲ. ಆದರೇ ಭಾರತ ತಂಡದಲ್ಲಿ ಆತನಿಗೆ ಅವಕಾಶಗಳು ದೊರೆಯುತ್ತಿಲ್ಲ. ಆತನಿಗೆ ಭಾರತ ತಂಡದಲ್ಲಿ ಟೆಸ್ಟ್, ಏಕದಿನ, ಟಿ 20 ಮೂರು ಮಾದರಿಯಲ್ಲಿ ಹೆಚ್ಚು ಹೆಚ್ಚು ಅವಕಾಶಗಳು ಸಿಗಬೇಕು. ಆಗ ಮಾತ್ರ ಆತನ ಪ್ರತಿಭೆಗೆ ಉತ್ತಮ ಮನ್ನಣೆ ದೊರೆಯುತ್ತದೆ.

ಅಷ್ಟಕ್ಕೂ ಆ ಆಟಗಾರ ಯಾರು ಎಂಬ ನಿಮ್ಮ ಪ್ರಶ್ನೆಗೆ ಉತ್ತರ, ಬೇರಾರೂ ಅಲ್ಲ, ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬ್ಯಾಟ್ಸಮನ್ ಸೂರ್ಯ ಕುಮಾರ್ ಯಾದವ್. ಇಂಗ್ಲೆಂಡ್ ವಿರುದ್ದ ಟಿ 20 ಸರಣಿ ಆಡಿದ್ದ ಸೂರ್ಯ, ಸದ್ಯ ಶ್ರೀಲಂಕಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈಗ ಇಂಗ್ಲೆಂಡ್ ಗೆ ಬ್ಯಾಕ್ ಅಪ್ ಆಟಗಾರನಾಗಿ ಸಹ ಪ್ರಯಾಣಿಸುತ್ತಿದ್ದಾರೆ. ಸದ್ಯ 2023 ರ ವಿಶ್ವಕಪ್ ಗೆ ಕೋಹ್ಲಿ , ರೋಹಿತ್, ಪಂತ್ , ಕೆ.ಎಲ್.ರಾಹುಲ್ ಮಾತ್ರ ಸ್ಥಾನ ಖಾಯಂ ಮಾಡಿಕೊಂಡಿದ್ದಾರೆ. ಸೂರ್ಯ ಕುಮಾರ್ ಯಾದವ್ ಸಹ 2023 ರ ವಿಶ್ವಕಪ್ ನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಆಗಬಲ್ಲರು ಎಂದು ಹರ್ಭಜನ್ ತಿಳಿಸಿದರು. ಆದರೇ ವಿಶ್ವಕಪ್ ಗೆ ಇನ್ನು ಎರಡು ವರ್ಷ ಇರುವ ಕಾರಣ ಈಗಲೇ ಇಷ್ಟೊಂದು ನೀರಿಕ್ಷೆಗಳನ್ನ ಹುಟ್ಟಿಸುವುದು ತಪ್ಪು ಎಂದು ಹೇಳಲಾಗುತ್ತಿದೆ. ಆಟಗಾರರ ಫಾರ್ಮ್ ಹೀಗೆ ಇರುತ್ತದೆಯೆಂದು ಹೇಳಲಾಗುವುದು ಕಷ್ಟ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ‌.