ಬಿಸಿ ನೀರು ಕುಡಿಯುವುದರಿಂದ ಏನಾಗುತ್ತದೆ ಎಂದು ತಿಳಿದರೇ, ಕೂಡಲೇ ಬಿಸಿ ನೀರು ಕುಡಿಯಲು ಆರಂಭಿಸುತ್ತೀರಿ.

ನಮಸ್ಕಾರ ಸ್ನೇಹಿತರೇ ಕೆಲವರಿಗೆ ಬಿಸಿ ನೀರು ಕುಡಿಯುವುದೇ ಅಭ್ಯಾಸವಾಗಿದ್ದರೆ ಇನ್ನೂ ಕೆಲವರು ತಣ್ಣಗಿನ ನೀರನ್ನೇ ಕುಡಿಯುತ್ತಾರೆ. ಆದರೆ ಎಲ್ಲಾ ಕಾಲದಲ್ಲಿಯೂ ತಣ್ನನೆಯ ನೀರನ್ನು ಕುಡಿಯುವುದು ಅಷ್ಟು ಒಳ್ಳೆಯದಲ್ಲ. ಅದರಲ್ಲೂ ಮಕ್ಕಳಿಗೆ ಹೆಚ್ಚಾಗಿ ಬಿಸಿ ನೀರನ್ನು ಕುಡಿಸುವುದು ಒಳ್ಳೆಯದು. ಬಿಸಿ ನೀರನ್ನು ಮಳೆಗಾಲದಲ್ಲಿ ಮಾತ್ರವಲದೇ ಉಳಿದ ಸಮಯದಲ್ಲಿಯೂ ಕುಡಿಯಬೇಕು. ಏಕೆಂದರೆ ಇದು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ಬರುವ ನೆಗಡಿ, ಜ್ವರ ಗಳನು ತಡೆಯಲು ಬಿಸಿ ನೀರನ್ನು ಬಳಸುವುದು ವಾಡಿಕೆ. ಅದರಲ್ಲೂ ಮಳೆಗಾಲದಲ್ಲಿ ನೀರು ಕಲುಷಿತಗೊಳ್ಳುವ ಸಾಧ್ಯತೆ ಇದೆಯಾದ್ದರಿಂದ ಬಿಸಿ ನೀರನ್ನು ಕುಡಿಯುತ್ತಾರೆ. ಆದರೆ ಮಳೆಗಾಲ ಮಾತ್ರವಲ್ಲದೇ ಎಲ್ಲಾ ಸಮಯಗಳಲ್ಲಿಯೂ ಬಿಸಿ ನೀರಿನ ಸೇವನೆ ಎಷ್ಟು ಉತ್ತಮ ಎಂಬುದು ಗೊತ್ತಿದೆಯೇ? ಇದರ ಪ್ರಯೋಜನಗಳೇನು ಮುಂದೆ ಓದಿ..

ಬೆಳಗ್ಗೆ ಎದ್ದು ಮೊದಲು ಒಂದು ಲೋಟ ಬಿಸಿ ನೀರನ್ನು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗಿ ಮನ ವಿಸರ್ಜನೆ ಸರಿಯಾಗಿ ಆಗುತ್ತದೆ. ಗಂಟಲಿನಲ್ಲಿನ ಕಿರಿ ಕಿರಿ, ಗಂಟಲು ಬೇನೆಗೂ ಕೂಡ ಬಿಸಿ ನೀರಿನ ಸೇವನೆಯೇ ಪರಮೌಷಧ. ಹಾಗಾಗಿಯೇ ಕರೋನಾ ಸಮಯವಾದ ಈ ದಿನಗಳಲ್ಲಿ ವೈರಸ್ಸನ್ನು ತಡೆಯಬಲ್ಲ ಬಿಸಿ ನೀರನ್ನೇ ಸೇವಿಸಲು ವೈದ್ಯರುಗಳು ಕೂಡ ಸಲಹೆ ನೀಡುತ್ತಿದ್ದಾರೆ. ಕೆಮ್ಮು ಶೀತದಂಥ ಸಾಮಾನ್ಯ ಕಾಯಿಲೆಗಳು ಬಿಸಿ ನೀರನ್ನು ಸೇವಿಸುವುದರಿಂದ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.

ಹಲ್ಲುಗಳ ಆರೋಗ್ಯವನ್ನೂ ಕೂಡ ಉತ್ತಮಗೊಳಿಸುತ್ತದೆ ಬಿಸಿ ನೀರು. ತಣ್ಣೀರನ್ನು ಕುಡಿದರೆ ಬಾಯಲ್ಲಿನ ಸಂವೇದನಾಶೀಲತೆ ಹಲ್ಲುಗಳಲ್ಲಿ ನೋವನ್ನುಂಟು ಮಾಡುತ್ತದೆ. ಹಾಗಾಗಿ ಬಿಸಿ ನೀರು ಸೇವಿಸುವುದು ಅತ್ಯಂತ ಸೂಕ್ತ. ಬಿಸಿ ನೀರನ್ನು ಕುಡಿಯುತ್ತಾ ಇದ್ದರೆ ಇದು ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಡೇಹದಲ್ಲಿ ಜೀರ್ಣ ಶಕ್ತಿಯನ್ನು ಹೆಚ್ಚಿಸುವಲ್ಲಿಯೂ ಕೂಡ ಬಿಸಿ ನೀರಿನ ಪಾತ್ರ ದೊಡ್ದದಿದೆ. ರಾತ್ರಿ ಊಟವಾದ ಮೇಲೆ ಒಂದು ಲೋಟ ಬಿಸಿ ನೀರನ್ನು ಕುಡಿದು ಮಲಗಿ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗಿ ಹೊಟ್ಟೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ.

ಇನ್ನು ಮನಸ್ಸಿನ ಏಕಾಗ್ರತೆಗೂ ಕೂಡ ಬಿಸಿ ನೀರಿನ ಸೇವನೆ ಉತ್ತಮ ಎಂದು ತಜ್ಞರ ಅಭಿಪ್ರಾಯವಾಗಿದೆ. ಬಿಸಿ ನೀರು ಎಂದಾಕ್ಷಣ ಕುದಿಯುವ ನೀರೇ ಆಗಬೇಕೆಂದಿಲ್ಲ. ಉಗುರುಬೆಚ್ಚಗಿನ ನೀರನ್ನೂ ಕೂಡ ನೀವು ಬಳಸಬಹುದು. ಇನ್ನು ಬಿಸಿ ಬೀರಿಗೆ ಓಮ, ಮೆಂತ್ಯ, ಜೀರಿಗೆ ಕಾಳುಗಳನ್ನು ಸೇರಿಸಿ ಕುಡಿಯುವುದು ಕೂಡ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು.