ಬಾರಿ ಸದ್ದು ಮಾಡಿದ್ದ ರವಿ ಬೆಳಗೆರೆ ರವರು ಅಣ್ಣಾವ್ರ ಬಗ್ಗೆ ಬರೆದಿದ್ದಿ ವಿಚಾರಗಳು, ಅಷ್ಟಕ್ಕೂ ಅಂದು ಬರೆದದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗ ನಮ್ಮ ಕರ್ನಾಟಕ ಸಂಸ್ಕೃತಿಯ ಪ್ರತೀಕ ಎಂದರೆ ತಪ್ಪಾಗಲಾರದು. ನಮ್ಮ ಕನ್ನಡಿಗರ ನಾಡು ನುಡಿ ಹಾಗೂ ಸಂಸ್ಕೃತಿಯ ಕುರಿತಂತೆ ಬೆಳಕು ಚೆಲ್ಲುವ ಕಾರ್ಯಕ್ರಮವನ್ನು ಕನ್ನಡ ಚಿತ್ರರಂಗ ಅದೆಷ್ಟು ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ. ಇನ್ನು ಕನ್ನಡ ಸಂಸ್ಕೃತಿ ಎಂದರೆ ಅದರ ರಾಯಭಾರಿ ಎಂದೇ ಕರೆಸಿಕೊಳ್ಳುತ್ತಿದ್ದ ಅವರು ಕನ್ನಡ ಚಿತ್ರರಂಗದ ನಟ ಸಾರ್ವಭೌಮ ಎಂದೇ ಖ್ಯಾತರಾಗಿದ್ದರು ನಮ್ಮ ಡಾ ರಾಜಕುಮಾರ್ ಎಲ್ಲರ ನೆಚ್ಚಿನ ಅಣ್ಣಾವ್ರು.

ಹೌದು ಸ್ನೇಹಿತರೆ ಅಣ್ಣಾವ್ರು ವಿದ್ಯಾಭ್ಯಾಸದಲ್ಲಿ ಎಂದಿದ್ದರೂ ಕೂಡ ಅದೆಷ್ಟೋ ಜನರಿಗೆ ಜೀವನವನ್ನು ಹೇಗೆ ನಡೆಸಬೇಕೆಂಬ ವಿಶ್ವವಿದ್ಯಾಲಯ ಎಂದೇ ಹೇಳಬಹುದು. ಅವರು ತೆರೆಯ ಮೇಲೆ ನಾಯಕನಾಗಿ ಎಷ್ಟು ಜನಪ್ರಿಯರಾಗಿದ್ದರು ಹಾಗೆ ಅವರು ತೆರೆಯ ಹಿಂದೆ ಕೂಡ ನಿಜಜೀವನದ ನಾಯಕನಾಗಿ ಜನರ ಮನಗೆದ್ದಿದ್ದರು. ಕನ್ನಡ ಚಿತ್ರರಂಗದಲ್ಲಿ ಯಾರಿಗೆ ಏನೇ ತೊಂದರೆ ಆದರೂ ಸಹ ತಾವು ಮುಂದೆ ನಿಂತು ಅದನ್ನು ಪರಿಹರಿಸಿಕೊಳ್ಳುತ್ತಿದ್ದರು.

ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ಒಮ್ಮೆ ರವಿಚಂದ್ರನ್ ರವರಿಗೆ ಕನ್ನಡ ಭಾಷೆಯನ್ನು ಕಳಿಸಿದ್ದಾರೆ ಎಂಬುದಾಗಿ ಮಾಧ್ಯಮಗಳು ವರದಿಯನ್ನು ಪ್ರಕಟ ಮಾಡಿದಾಗ ಸ್ವತಹ ರಾಜಕುಮಾರರವರ ಮುಂದೆ ಬಂದು ರವಿಚಂದ್ರನ್ ರವರು ಹಾಗೆ ಮಾಡುವುದಿಲ್ಲ ಕನ್ನಡದ ಕುರಿತಂತೆ ಅವರಿಗೆ ಅಪಾರ ಭಾಷಾಭಿಮಾನ ಇದೆ ಎಂಬುದಾಗಿ ವಿವಾದವನ್ನು ಅಲ್ಲಿಗೆ ನಿಲ್ಲಿಸಿದ್ದರು. ಹೀಗೆ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡಬೇಕೆಂದು ರಾಜಕುಮಾರ್ ರವರು ಸಾಕಷ್ಟು ಬಾರಿ ಮುಂದೆ ಬಂದು ಚಿತ್ರಂಗದ ಹಿರಿಯಣ್ಣನಾಗಿ ಕನ್ನಡ ಚಿತ್ರರಂಗವನ್ನು ಒಂದು ಗೂಡಿಸಿದ್ದಾರೆ.

ಇನ್ನು ಡಾಕ್ಟರ್ ರಾಜಕುಮಾರ್ ಅವರ ಭಾಷಾಭಿಮಾನದ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಕೇವಲ ಚಿತ್ರದಲ್ಲಿ ಡೈಲಾಗ್ ಡೆಲಿವರಿಯಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲೂ ಕೂಡ ಕನ್ನಡ ಭಾಷೆಯನ್ನು ಸುಲಲಿತವಾಗಿ ಸ್ಪಷ್ಟವಾಗಿ ಮಾತನಾಡುವ ಏಕೈಕ ನಟ ಎಂದರೆ ಅದು ರಾಜಕುಮಾರ್ ಎಂದು ಹೇಳಬಹುದು. ಇನ್ನು ನಾವು ರವಿಬೆಳಗೆರೆಯವರ ಬಗ್ಗೆ ಹೇಳುವುದಾದರೆ ಕನ್ನಡ ಮಾಧ್ಯಮಲೋಕ ಕಂಡಂತಹ ಮಿನುಗುತಾರೆ. ಇದ್ದದ್ದನ್ನು ನೇರವಾಗಿ ಬರೆದು ಸಮಾಜಕ್ಕೆ ತಲುಪಿಸುವಂತಹ ಪತ್ರಕರ್ತ. ಆದರೆ ಅವರು ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ ಏನು ಬರೆದಿದ್ದರು ಏನು ಹೇಳಿದ್ದರು ಎಂಬುದನ್ನು ನಾವು ನಿಮಗೆ ಸಂಪೂರ್ಣ ವಿವರವಾಗಿ ಹೇಳುತ್ತೇನೆ ಬನ್ನಿ ಸ್ನೇಹಿತರೆ.

ಹೌದು ಸ್ನೇಹಿತರೆ ರವಿ ಬೆಳಗೆರೆಯವರು ರಾಜಕುಮಾರ್ ರವರ ಬಗ್ಗೆ ನಟಿ ಜಯಂತಿ ಅವರಿಗೆ ಕಲ್ಪಿಸಿಕೊಂಡು ಅವರಿಬ್ಬರಿಗೆ ಮದುವೆಯಾಗಿದೆ ಎಂಬುದಾಗಿ ಹಾಗೂ ವಿನೋದ್ ರಾಜಕುಮಾರ್ ಅವರು ಅವರ ಮಗ ಎಂಬುದಾಗಿ ತಮ್ಮ ಪುಸ್ತಕವೊಂದರಲ್ಲಿ ಬರೆದಿದ್ದರು ಮಾತ್ರವಲ್ಲದೆ ಅವರು ಬರೆದಿದ್ದ ಪುಸ್ತಕ ಸಾಮಾಜಿಕವಾಗಿ ಬೇರೆಯದೇ ಅರ್ಥವನ್ನು ಕಲ್ಪಿಸುವಂತೆ ಮಾಡಿದ್ದರೂ ಸಹ ನಂತರ ರಾಜಕುಮಾರ್ ರವರು ನಿಧನರಾದಾಗ ಸ್ವತಹ ರವಿಬೆಳಗೆರೆಯವರೇ ಕನ್ನಡ ಚಿತ್ರರಂಗವನ್ನ ಹಿರಿಯಣ್ಣನ ಕಳೆದುಕೊಂಡಿದೆ ಎಂಬುದಾಗಿ ಕೂಡಾ ಬರೆದಿದ್ದರು.

ರಾಜಕುಮಾರ್ ಅವರು ಏಕೈಕ ನಟ ತಮ್ಮ ಮೌಲ್ಯಗಳ ಆಧಾರದ ಮೇಲೆ ಜೀವನವನ್ನು ನಡೆಸಿದವರು ಎಂಬುದಾಗಿ ಕೂಡ ರವಿಬೆಳಗೆರೆಯವರು ರಾಜಕುಮಾರ್ ಅವರ ಗುಣಗಾನ ಮಾಡಿದ್ದರು. ರವಿಬೆಳಗೆರೆಯವರು ರಾಜಕುಮಾರ್ ಅವರ ಬಗ್ಗೆ ಅಪವಾದವನ್ನು ಕೂಡ ಮಾಡಿದ್ದರು ಹೊಗಳಿಕೆಯ ಗುಣಗಾನವನ್ನು ಕೂಡ ಮಾಡಿದ್ದರು. ಇದನ್ನು ಸಮಾಜ ಹೇಗೆ ತೆಗೆದುಕೊಳ್ಳಬೇಕು ಎಂಬುದನ್ನು ನಾವೇ ಸ್ವತಹ ಅರ್ಥಮಾಡಿಕೊಳ್ಳಬೇಕು ಏಕೆಂದರೆ ರಾಜಕುಮಾರ್ ಅವರ ಮೇರು ವ್ಯಕ್ತಿತ್ವ ನಮಗೆ ಆದರ್ಶ ಜೀವನದ ತೆರೆದ ಪುಸ್ತಕವೆಂದು ಹೇಳಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Post Author: Ravi Yadav