ಕರುನಾಡ ವಾಣಿ
ಇದು ನಿಮ್ಮ ಧ್ವನಿ

ನಾಗರಹಾವಿನ ನಂತರ ಪುಟ್ಟಣ್ಣ, ವಿಷ್ಣುವರ್ಧನ್ ಅವರಿಗೆ ಮತ್ತೊಂದು ಸಿನಿಮಾ ಮಾಡಲಿಲ್ಲ ಯಾಕೆ ಗೊತ್ತಾ ಕೊನೆಗೂ ಬಯಲಾದ ಸತ್ಯ??

4

ನಮಸ್ಕಾರ ಸ್ನೇಹಿತರೇ ಇಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಅದೆಷ್ಟು ನಟರು ಹಾಗೂ ನಿರ್ದೇಶಕರು ಬಂದಿರಬಹುದು. ಆದರೆ ಅವರೆಲ್ಲರಿಗೂ ಮಾದರಿಯಾಗುವಂತೆ ಬದುಕಿದ್ದವರು ಹಾಗೂ ಸಿನಿಮಾಗಳನ್ನು ಮಾಡಿದವರು ಎಂದರೆ ಅದು ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ಎಂದೇ ಖ್ಯಾತರಾಗಿರುವ ನಿರ್ದೇಶಕ ಪುಟ್ಟಣ್ಣ ಕಣಗಾಲ್. ಹೌದು ಸ್ನೇಹಿತರೆ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರವರು ಕನ್ನಡ ಚಿತ್ರಗ ಕಂಡಂತಹ ಶ್ರೇಷ್ಠ ನಟ ವಿಷ್ಣುವರ್ಧನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟವರು. ನಾಗರಹಾವು ಚಿತ್ರದ ರಾಮಾಚಾರಿ ಪಾತ್ರದ ಮೂಲಕ ಸಂಪತ್ ಕುಮಾರ್ ಆಗಿದ್ದವರು ನಾಡು ಕಂಡ ಶ್ರೇಷ್ಠ ನಟ ವಿಷ್ಣುವರ್ಧನ್ ಆಗಿ ಪರಿವರ್ತನೆಯಾದರು.

ವಿಷ್ಣುವರ್ಧನ್ ರವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಪುಟ್ಟಣ್ಣ ಕಣಗಾಲ್ ರವರ ನಾಗರಹಾವು ಚಿತ್ರದ ಮೂಲಕ. ವಿಷ್ಣುವರ್ಧನ್ ರವರ ಸಿನಿ ಜೀವನಕ್ಕೆ ಶುಭಾರಂಭ ನೀಡಿದವರು ನಿರ್ದೇಶಕ ಪುಟ್ಟಣ್ಣ ಕಣಗಾಲ್. ಎಲ್ಲರೊಂದಿಗೂ ಪುಟ್ಟಣ್ಣ ಕಣಗಾಲ್ ಅವರು ವಿಷ್ಣುವರ್ಧನ್ ತನ್ನ ನೆಚ್ಚಿನ ಶಿಷ್ಯ ಎಂಬುದಾಗಿ ಹೇಳಿಕೊಳ್ಳುತ್ತಿದ್ದರು. ಇನ್ನು ವಿಷ್ಣುವರ್ಧನ್ ಅವರು ಕೂಡ ಪುಟ್ಟಣ್ಣ ಕಣಗಾಲ್ ಅವರು ತನ್ನ ಸಿನಿ ಜೀವನದ ಗುರುಗಳು ಎಂಬುದಾಗಿ ಒಪ್ಪಿಕೊಂಡಿದ್ದರು. ಆದರೆ ನಾಗರಹಾವು ಚಿತ್ರದ ನಂತರ ಇಬ್ಬರು ನಟ ಹಾಗೂ ನಿರ್ದೇಶಕ ಜೋಡಿ ಮತ್ತೆ ಒಂದಾಗಲಿಲ್ಲ.

ಹೌದು ಸ್ನೇಹಿತರೆ ಯಾವುದೇ ಚಿತ್ರರಂಗದಲ್ಲಿ ಒಂದು ನಿರ್ದೇಶಕ ಹಾಗೂ ನಟನ ಜೋಡಿ ಯಾವುದೇ ಚಿತ್ರದ ಮೂಲಕ ಯಶಸ್ಸು ಆಯಿತೆಂದರೆ ಮತ್ತೊಮ್ಮೆ ಪ್ರೇಕ್ಷಕರು ಅಥವಾ ಜೋಡಿ ಮತ್ತೊಂದು ಚಿತ್ರದ ಮೂಲಕ ಯಶಸ್ಸು ಪಡೆಯುವ ಹವಣಿಕೆಯಲ್ಲಿ ಇರುತ್ತಾರೆ. ಆದರೆ ವಿಷ್ಣುವರ್ಧನ್ ಹಾಗೂ ಪುಟ್ಟಣ್ಣ ಕಣಗಲ್ ಜೋಡಿ ಮತ್ತೊಂದು ಕೂಡ ಒಂದು ಚಿತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ. ಶುಭಮಂಗಳ ಹೀಗೆ ಹಲವಾರು ಚಿತ್ರಗಳಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲರು ವಿಷ್ಣುವರ್ಧನರನ್ನು ನಾಯಕನನ್ನಾಗಿ ಮಾಡಲು ಹೊರಟಿದ್ದರು ಸಮಸ್ಯೆಗಳಿಂದಾಗಿ ಮತ್ತೆ ಅವರು ಒಂದಾಗಿ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಇದಕ್ಕೆ ಒಂದು ಮುಖ್ಯ ಕಾರಣವೆಂದರೆ ವಿಷ್ಣುವರ್ಧನ್ ರವರ ಬ್ಯುಸಿ ಶೆಡ್ಯೂಲ್ ನಲ್ಲಿ ಡೇಟ್ ಹೊಂದಾಣಿಕೆಯಾಗಲು ಸಾಧ್ಯವಾಗುತ್ತಿರಲಿಲ್ಲ. ಕೆಲಸ ಚಿತ್ರಗಳ ನಿರ್ಮಾಪಕರು ಹಾಗೂ ಕಥೆ ಒಪ್ಪಿಗೆ ಆಗುತ್ತಿರಲಿಲ್ಲ ಕಾರಣದಿಂದಾಗಿ ವಿಷ್ಣುವರ್ಧನ್ ರವರು ಹಾಗೂ ಪುಟ್ಟಣ್ಣ ಕಣಗಾಲ್ ರವರು ಮತ್ತೊಮ್ಮೆ ಒಂದಾಗಿ ಕೆಲಸ ಮಾಡಬೇಕೆಂಬ ಕನಸು ಕನಸಾಗಿ ಉಳಿಯಿತು. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.