ಅಂಬರೀಶ್ ಅಣ್ಣ ರವರ ಜೊತೆ ಅನುಶ್ರೀ ರವರು ಮಾಡಿದ ಡ್ಯಾನ್ಸ್ ಸಖತ್ ವೈರಲ್, ಹೇಗಿದೆ ಗೊತ್ತಾ ಸೂಪರ್ ಡಾನ್ಸ್ ??

ಅಂಬರೀಶ್ ಅಣ್ಣ ರವರ ಜೊತೆ ಅನುಶ್ರೀ ರವರು ಮಾಡಿದ ಡ್ಯಾನ್ಸ್ ಸಖತ್ ವೈರಲ್, ಹೇಗಿದೆ ಗೊತ್ತಾ ಸೂಪರ್ ಡಾನ್ಸ್ ??

ನಮಸ್ಕಾರ ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ಹಾಗೂ ವಿಶಿಷ್ಟ ಮೇರು ವ್ಯಕ್ತಿತ್ವದ ಮೂಲಕ ದಾನಧರ್ಮದ ಮೂಲಕ ಹೆಸರುವಾಸಿ ಆಗಿರುವ ಏಕೈಕ ನಟ ಎಂದರೆ ಅದು ನಮ್ಮ ಕಲಿಯುಗದ ಕರ್ಣ ಹಾಗೂ ಮಂಡ್ಯದ ಗಂಡು ಎಂದು ಬಿರುದಾಂಕಿತರಾಗಿ ಇರುವ ರೆಬೆಲ್ ಸ್ಟಾರ್ ಅಂಬರೀಶ್ ರವರು. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಆಗಿದ್ದವರು ಜನರ ಪ್ರೀತಿಯ ಅಂಬರೀಶ್ ಆಗಿ ಮಾರ್ಪಟ್ಟರು. ಇನ್ನೊಂದು ವಿಶೇಷ ಗೊತ್ತಾ ಸ್ನೇಹಿತರೆ ರೆಬೆಲ್ ಸ್ಟಾರ್ ಅಂಬರೀಶ್ ಅವರು ತಮ್ಮ ಜೀವನವನ್ನು ಮಲ್ಟಿಸ್ಟಾರರ್ ಚಿತ್ರದ ಮೂಲಕ ವಿಷ್ಣುವರ್ಧನ್ ನಟನೆಯ ನಾಗರ ಹಾವಿನಿಂದ ಪ್ರಾರಂಭಿಸಿ,

ತಮ್ಮ ಕೊನೆಯ ಚಿತ್ರ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದವರೆಗೂ ಕೂಡ ಮಲ್ಟಿಸ್ಟಾರರ್ ಚಿತ್ರದಲ್ಲಿ ನಟಿಸಿದ್ದವರು. ಇಡೀ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಮಲ್ಟಿಸ್ಟಾರರ್ ಚಿತ್ರಗಳಲ್ಲಿ ನಟಿಸಿದ ಏಕೈಕ ನಟ ಎಂದರೆ ಅದು ರೆಬೆಲ್ ಸ್ಟಾರ್ ಅಂಬರೀಶ್. ವಿಷ್ಣುವರ್ಧನ್ ರಾಜಕುಮಾರ್ ಅನಂತ್ ನಾಗ್ ಶಂಕರ್ ನಾಗ್ ರವಿಚಂದ್ರನ್ ಜಗ್ಗೇಶ್ ದರ್ಶನ್ ಸುದೀಪ್ ಯಶ್ ಹೀಗೆ ಬಹುತೇಕ ಮಲ್ಟಿಸ್ಟಾರರ್ ಚಿತ್ರಗಳಲ್ಲಿ ಕಾಣಿಸಿಕೊಂಡರು ನಮ್ಮ ಅಂಬಿ ಅಣ್ಣ. ತಮ್ಮ ಮಾಸ್ ನಟನೆಯ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಂತಹ ಅದ್ಭುತ ಕಲಾವಿದ.

ಇನ್ನು ನಾವು ಅವರನ್ನು ಕಳೆದುಕೊಂಡು ಎರಡರಿಂದ ಮೂರು ವರ್ಷಗಳಾದರೂ ಸಹ ಇನ್ನೂ ಕೂಡ ಕನ್ನಡಿಗರ ಮನಸ್ಸಿನಲ್ಲಿ ಅವರು ಸದಾ ಅಜರಾಮರವಾಗಿ ಇದ್ದಾರೆ. ಇನ್ನು ಇತ್ತೀಚಿಗಷ್ಟೇ ಯೂಟ್ಯೂಬ್ನಲ್ಲಿ ರೆಬಲ್ ಸ್ಟಾರ್ ಅಂಬರೀಶ್ ರವರು ಕನ್ನಡ ಚಿತ್ರರಂಗದ ಖ್ಯಾತ ನಿರೂಪಕರಾಗಿರುವ ಆಂಕರ್ ಅನುಶ್ರೀ ಅವರ ಜೊತೆಗೆ ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗುತ್ತಿದೆ. ಆಂಕರ್ ಅನುಶ್ರೀ ಅವರೊಂದಿಗೆ ರೆಬೆಲ್ ಸ್ಟಾರ್ ಅಂಬರೀಶ್ ರವರು ಸ್ಟೆಪ್ ಹಾಕಿರುವ ವಿಡಿಯೋ ಈಗಾಗಲೇ ವೈರಲ್ ಆಗಿದ್ದು, ಕೆಳಗಡೆ ಹಾಕಲಾಗಿದ್ದು ಮತ್ತೊಮ್ಮೆ ಅಣ್ಣನವರ ನೆನಪು ಹಾಗೆ ಬಂದು ಹೋಗುವಂತೆ ಮಾಡುತ್ತದೆ. ನೀವು ಕೂಡ ಈ ವಿಡಿಯೋ ನೋಡಿ ನಿಮಗೆ ಹೇಗನಿಸುತ್ತದೆ ಎಂದು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.