ಕೊಹ್ಲಿಗೆ ಸೋಲು, ಕಪಿಲ್ ದೇವ್ ಮಾತಿಗೂ ಕ್ಯಾರೆ ಎನ್ನದ ಆಯ್ಕೆಸಮಿತಿ, ಇದು ಮುಂಬೈ ಲಾಬಿ ಅಲ್ಲದೆ ಇನ್ನೇನು ಎಂದ ನೆಟ್ಟಿಗರು. ನಡೆದದ್ದೇನು ಗೊತ್ತಾ??

ಕೊಹ್ಲಿಗೆ ಸೋಲು, ಕಪಿಲ್ ದೇವ್ ಮಾತಿಗೂ ಕ್ಯಾರೆ ಎನ್ನದ ಆಯ್ಕೆಸಮಿತಿ, ಇದು ಮುಂಬೈ ಲಾಬಿ ಅಲ್ಲದೆ ಇನ್ನೇನು ಎಂದ ನೆಟ್ಟಿಗರು. ನಡೆದದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ನ್ಯೂಜಿಲೆಂಡ್ ದೇಶದ ವಿರುದ್ಧ ಟೆಸ್ಟ್ ಸೋತ ಬಳಿಕ ಭಾರತ ಕ್ರಿಕೆಟ್ ತಂಡದಲ್ಲಿ ಹಲವಾರು ಇಂಜುರಿ ಗಳು ಆಗಿವೆ. ಶುಭ್ಮನ್ ಗಿಲ್ ರವರು ಮುಂದಿನ ಇಂಗ್ಲೆಂಡ್ ಸರಣಿಗೆ ಸಂಪೂರ್ಣವಾಗಿ ಅಲಭ್ಯರಾಗಿದ್ದು ಇವರಿಗಾಗಿ ಇದೀಗ ಪರ್ಯಾಯ ಆಟಗಾರನನ್ನ ಸರಣಿಗೆ ಆಯ್ಕೆ ಆಗಬೇಕಾಗಿದೆ. ಈ ಸಮಯದಲ್ಲಿ ಇಂಗ್ಲೆಂಡ್ಗೆ ತೆರಳಿದ 30 ಜನರಲ್ಲಿ ಸಾಕಷ್ಟು ಆರಂಭಿಕ ಆಟಗಾರರು ಇದ್ದಾರೆ.

ಅದರಲ್ಲಿಯೂ ಪ್ರಮುಖವಾಗಿ ಅತ್ಯುತ್ತಮ ಫಾರ್ಮ್ ನಲ್ಲಿರುವ ರಾಹುಲ್ ಹಾಗೂ ಮಯಂಕ್ ಅಗರ್ವಲ್ ರವರು ಶುಭ್ಮನ್ ಗಿಲ್ ರವರ ಸ್ಥಾನ ತುಂಬಬಲ್ಲ ಆಟಗಾರರಾಗಿದ್ದಾರೆ. ಆದರೆ ನ್ಯೂಜಿಲೆಂಡ್ ತಂಡದ ವಿರುದ್ಧ ಟೆಸ್ಟ್ ನಡೆದ ಸಮಯದಲ್ಲಿ ಶುಭ್ಮನ್ ಗಿಲ್ ರವರು ಇದ್ದ ಕಾರಣ ಇವರಿಬ್ಬರಿಗೂ ಅವಕಾಶ ಸಿಕ್ಕಿರಲಿಲ್ಲ, ಈಗ ಹೇಗಿದ್ದರೂ ಶುಭ್ಮನ್ ಗಿಲ್ ರವರು ಇಂಜುರಿ ಆದಕಾರಣ ರಾಹುಲ್ ಹಾಗೂ ಮಯಂಕ್ ಅಗರ್ವಲ್ ರವರು ಭಾರತದ ಆರಂಭಿಕ ಆಟಗಾರರ ಆಗಬೇಕು ಎಂಬುದು ವಿರಾಟ್ ಕೊಹ್ಲಿ ರವರ ಆಯ್ಕೆ.

ಆದರೆ ಆಯ್ಕೆ ಸಮಿತಿ ಮಾತ್ರ ಪರ್ಯಾಯ ಆಟಗಾರರನ್ನು ಕರೆಸಿಕೊಳ್ಳಬೇಕು ಎಂದು ಪಟ್ಟು ಹಿಡಿದಿದೆ. ಇದಕ್ಕೆ ಕಪಿಲ್ ದೇವ್ ಕೂಡ ಮಾತನಾಡಿ ಈಗಾಗಲೆ ತಂಡದಲ್ಲಿ ಆರಂಭಿಕ ಆಟಗಾರರು ಇರುವ ಸಮಯದಲ್ಲಿ ಅದೂ ಕೂಡ ಇಂಗ್ಲೆಂಡ್ನಲ್ಲಿ ಆಯ್ಕೆಯಾಗಿ ಕಾದು ಕುಳಿತಿರುವ ಪೃಥ್ವಿ ಶಾ ರವರನ್ನು ಶುಭ್ಮನ್ ಗಿಲ್ ರವರ ಬದಲಾಗಿ ಆಯ್ಕೆ ಮಾಡುವುದು ಸರಿ ಕಾಣಿಸುವುದಿಲ್ಲ,

ನೀವು ಕೆಎಲ್ ರಾಹುಲ್ ಹಾಗೂ ಮಯಂಕ್ ಅಗರ್ವಲ್ ರವರನ್ನು ಶುಭ್ಮನ್ ಗಿಲ್ ರವರು ಇಲ್ಲದೆ ಇದ್ದಾಗ ಕೂಡ ಬೆಂಚ್ ಕಾಯಿಸುವುದಾದರೆ ನೀವು ಅವರನ್ನು ತಂಡಕ್ಕೆ ಯಾಕೆ ಆಯ್ಕೆ ಮಾಡಿದ್ದೀರಾ, ಅವರನ್ನು ಇಲ್ಲೇ ಭಾರತದಲ್ಲಿ ಬಿಟ್ಟು ಹೋಗಬಹುದಾಗಿತ್ತು ಎಂದು ಪ್ರಶ್ನೆ ಕಪಿಲ್ ದೇವ್ ರವರು ಖಾರವಾಗಿ ಪ್ರಶ್ನೆ ಮಾಡಿದ್ದರು.

ಹೀಗೆ ಕಪಿಲ್ ದೇವ್ ರವರು ಮಾತನಾಡಿದ ತಕ್ಷಣ ಆಯ್ಕೆ ಸಮಿತಿಯು ಪೃಥ್ವಿ ಶಾ ಇಂಗ್ಲೆಂಡ್ ದೇಶಕ್ಕೆ ಹೋಗುವುದಿಲ್ಲ ಎಂದು ಜಾರಿಕೊಂಡಿತ್ತು, ಆದರೆ ಇದೀಗ ಸೈಲೆಂಟಾಗಿ ಹೆಚ್ಚು ಸುದ್ದಿ ಮಾಡದಂತೆ ಶ್ರೀಲಂಕಾದಲ್ಲಿ ಟಿ ಟ್ವೆಂಟಿ ಸರಣಿ ಆಡುತ್ತಿರುವ ಪೃಥ್ವಿ ಶಾ ರವರನ್ನು ಇಂಗ್ಲೆಂಡ್ಗೆ ಕಳುಹಿಸಲು ಎಲ್ಲ ಸಿದ್ಧತೆ ನಡೆಸಿದೆ ಎಂಬುದು ತಿಳಿದು ಬಂದಿದೆ.

ಇವರ ಜೊತೆಗೆ ಇಂಗ್ಲೆಂಡ್ನಲ್ಲಿ ಮಧ್ಯಮ ಕ್ರಮಾಂಕದ ಆಟಗಾರರಿದ್ದರು ಕೂಡ ಸೂರ್ಯ ಕುಮಾರ್ ಯಾದವ್ ಅವರನ್ನು ಕೂಡ ಕಳುಹಿಸಲು ಸಿದ್ಧತೆ ನಡೆಸುತ್ತಿದೆ. ಹೀಗೆ ನಾಯಕ ಒಪ್ಪದಿದ್ದರೂ ಹಾಗೂ ಹಿರಿಯ ಆಟಗಾರರು ಕೂಡ ಇದನ್ನೇ ಪ್ರಶ್ನೆ ಮಾಡುತ್ತಿದ್ದರು ಮುಂಬೈ ಕ್ರಿಕೆಟ್ ವಿಶ್ಲೇಷಕರು ಮಾತ್ರ ಇದನ್ನು ಅತ್ಯುತ್ತಮ ನಿರ್ಧಾರ ಎಂದಿದ್ದಾರೆ, ಹಾಗೂ ಆಯ್ಕೆ ಸಮಿತಿ ಮತ್ತೊಮ್ಮೆ ಅದೇ ರೀತಿಯ ನಿರ್ಧಾರ ತೆಗೆದುಕೊಳ್ಳಲ್ಲು ಮುಂದಾಗಿದೆ. ಈ ಮೂಲಕ ಮುಂಬೈ ಲಾಬಿ ಚರ್ಚೆ ಮತ್ತೊಮ್ಮೆ ಬೆಳಕಿಗೆ ಬಂದಿದ್ದು ಈ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯ ಬೇಡಿ.