ಅಂತ್ಯ ಸಂಸ್ಕಾರಕ್ಕೂ ಕೆಲವೇ ಕ್ಷಣಗಳ ಮುನ್ನ ಜಯಂತಿ ಅವರ ಮಗ ಕೃಷ್ಣ ಕುಮಾರ್ ಮಾಡಿರುವ ಕೆಲಸ ನೋಡಿದರೇ ಗ್ರೇಟ್ ಎನಿಸುತ್ತದೆ, ಏನು ಗೊತ್ತೇ??
ಅಂತ್ಯ ಸಂಸ್ಕಾರಕ್ಕೂ ಕೆಲವೇ ಕ್ಷಣಗಳ ಮುನ್ನ ಜಯಂತಿ ಅವರ ಮಗ ಕೃಷ್ಣ ಕುಮಾರ್ ಮಾಡಿರುವ ಕೆಲಸ ನೋಡಿದರೇ ಗ್ರೇಟ್ ಎನಿಸುತ್ತದೆ, ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇಂದು ಕನ್ನಡ ಚಿತ್ರರಂಗದ ಪಾಲಿಗೆ ಕರಾಳ ದಿನ ಎಂದರೆ ತಪ್ಪಾಗಲಾರದು. ಏಕೆಂದರೆ ನಾಡುಕಂಡ ಸಾರ್ವಕಾಲಿಕ ಶ್ರೇಷ್ಠ ನಟಿ ಅಭಿನಯ ವಿಶಾರದೆ ಎಂದೇ ಕರೆಸಿಕೊಂಡಿದ್ದ ನಟಿ ಜಯಂತಿ ಅಮ್ಮನವರು ಇಹಲೋಕವನ್ನು ತ್ಯಜಿಸಿದ್ದಾರೆ. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗ ಸೇರಿದಂತೆ ಆರು ಭಾಷೆಗಳಲ್ಲಿ 500ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿ ಊಹೆಗೂ ಮೀರಿದ ಕಲಾಸೇವೆಯನ್ನು ಮಾಡಿದಂತಹ ಹೆಮ್ಮೆಯ ನಟಿ ಜಯಂತಿ ಅಮ್ಮನವರು.
ಸಿನಿ ಜೀವನದಲ್ಲಿ ಯಾರೂ ಕೂಡ ಮಾಡಲಾಗದಂತಹ ಸಾಧನೆ ಮಾಡಿದರೂ ಸಹ ವೈಯಕ್ತಿಕ ಜೀವನದಲ್ಲಿ ಸುಖ ಸಿಗದೆ ಪರದಾಡಿದರು. ಉತ್ತಮ ಗ ಕೃಷ್ಣಕುಮಾರ್ ಅವರಿಗೆ ನಟಿ ಅನುಪ್ರಭಾಕರ್ ಅವರನ್ನು ಕೊಟ್ಟು ಮದುವೆ ಮಾಡಿದರು ಸಹ ಅವರ ದಾಂಪತ್ಯ ಜೀವನ ಕೂಡ ಹೆಚ್ಚು ವರ್ಷಗಳ ಕಾಲ ಉಳಿಯಲಿಲ್ಲ. ಈ ಬೇಸರದಲ್ಲೇ ನಟಿ ಜಯಂತಿ ಅವರ ಆರೋಗ್ಯ ಹದಗೆಡುತ್ತಾ ಪೂರ್ಣವಾಗಿ ಇಂದು ನಮ್ಮನ್ನೆಲ್ಲ ಬಿಟ್ಟುಹೋಗುವಂತೆ ಆಗಿದೆ.
ಇನ್ನು ಮಗ ಕೃಷ್ಣಕುಮಾರ್ ರವರು ತಾಯಿಯ ಕೊನೆಗಾಲದಲ್ಲಿ ಕೂಡ ಮಾಡಿದಂತಹ ಕೆಲಸ ನೋಡಿದರೆ ಎಲ್ಲರೂ ಕೂಡ ಸಲಾಂ ಹೊಡೆಯಲೇ ಬೇಕು. ಹೌದು ಸ್ನೇಹಿತರೆ ತಾಯಿಯ ಪಾರ್ಥಿವ ಶರೀರವನ್ನು ಜನರ ವೀಕ್ಷಣೆಗಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಇಟ್ಟಂತಹ ಸಮಯದಲ್ಲಿ ತಾಯಿಯವರ ನೇತ್ರದಾನ ಮಾಡಿ ಎಂದು ಯಾರೂ ವೈದ್ಯರು ಕೇಳಿದ ಸಲಹೆಗೆ ಕೂಡಲೇ ಪ್ರತಿಕ್ರಿಯಿಸಿ ತಾಯಿಯ ನೇತ್ರದಾನವನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗೆ ತಮ್ಮ ಕೊನೆಯ ಗಳಿಗೆಯಲ್ಲಿ ಕೂಡ ನಟಿ ಜಯಂತಿಯವರು ಮತ್ತೊಬ್ಬರ ಬಾಳಿಗೆ ಬೆಳಕಾಗುವ ಮೂಲಕ ಸಾರ್ಥಕ ಜೀವನವನ್ನು ಪೂರೈಸಿದ್ದಾರೆ ಎಂದು ಹೇಳಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.