ಈ ಆಟಗಾರನಿಗೆ ಇನ್ನು ಅವಕಾಶ ಸಿಗುವುದಿಲ್ಲ ಎಂದ ಸೆಹ್ವಾಗ್, ಮುಗಿಯಿತಾ ಆ ಆಟಗಾರನ ಕ್ರಿಕೇಟ್ ಜೀವನ, ಯಾರಂತೆ ಗೊತ್ತಾ??
ಈ ಆಟಗಾರನಿಗೆ ಇನ್ನು ಅವಕಾಶ ಸಿಗುವುದಿಲ್ಲ ಎಂದ ಸೆಹ್ವಾಗ್, ಮುಗಿಯಿತಾ ಆ ಆಟಗಾರನ ಕ್ರಿಕೇಟ್ ಜೀವನ, ಯಾರಂತೆ ಗೊತ್ತಾ??
ನಮಸ್ಕಾರ ಸ್ನೇಹಿತರೇ ಭಾರತ ಶ್ರೀಲಂಕಾ ವಿರುದ್ದ 2 – 1 ರಿಂದ ಸರಣಿ ಜಯಿಸಿತು. ಆದರೇ 3 -0 ಗಳಿಂದ ಜಯಿಸಬಹುದಾದ ಅವಕಾಶವನ್ನು ಕೈಯಾರೆ ಹಾಳುಮಾಡಿಕೊಂಡಿತು.ಈ ಸಂಭಂದ ಮಾತನಾಡಿದ ಭಾರತದ ಮಾಜಿ ಕ್ರಿಕೇಟ್ ಆಟಗಾರ ವಿರೇಂದ್ರ ಸೆಹ್ವಾಗ್ ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು ಕೆಲವು ಆಟಗಾರರ ಪ್ರದರ್ಶನದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ವಿರೇಂದ್ರ ಸೆಹ್ವಾಗ್ ಮನೀಶ್ ಪಾಂಡೆಯವರ ಪ್ರದರ್ಶನದ ಬಗ್ಗೆ ಖುಷಿಯಾಗಿಲ್ಲ. ಬೇರೆಲ್ಲ ಆಟಗಾರರಿಗಿಂತ ಪಾಂಡೆಯವರಿಗೆ ಮೂರು ಪಂದ್ಯಗಳಲ್ಲಿಯೂ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಯಲು ಅವಕಾಶ ಕಲ್ಪಿಸಲಾಗಿತ್ತು. ಮೂರು ಪಂದ್ಯಗಳಲ್ಲಿಯೂ ಸಹ ಅವರು ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್ ಗೆ ಇಳಿದಿದ್ದರು. ಏನಿಲ್ಲವೆಂದರೂ ಪಾಂಡೆಯವರು ತಮ್ಮ ಬ್ಯಾಟಿನಿಂದ ಕನಿಷ್ಠ ಎರಡು ಶತಕಗಳನ್ನ ಬಾರಿಸಬಹುದಿತ್ತು. ಆದರೇ ಪಾಂಡೆ ಮೂರು ಪಂದ್ಯಗಳಿಂದ ಸೇರಿ ಕೇವಲ 74 ರನ್ ಬಾರಿಸಿದ್ದಾರೆ.
ಇನ್ನು ಅವರ ಸ್ಟ್ರೈಕ್ ರೇಟ್ ಸಹ ಬಹಳ ಕಡಿಮೆ ಇತ್ತು. ಸದ್ಯ ಭಾರತ ತಂಡದಲ್ಲಿ ನಾಲ್ಕನೇ ಕ್ರಮಾಂಕಕ್ಕೆ ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್ ಬಹು ಪೈಪೋಟಿ ನಡೆಸುತ್ತಿದ್ದಾರೆ. ಅವರೆಲ್ಲರನ್ನ ಬಿಟ್ಟು ಮನೀಶ್ ಪಾಂಡೆಗೆ ಭಾರತೀಯ ಕ್ರಿಕೇಟ್ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಶ್ರೀಲಂಕಾ ಪ್ರವಾಸವೇ ಮನೀಶ್ ಪಾಂಡೆಯವರ ಅಂತರಾಷ್ಟ್ರೀಯ ಕ್ರಿಕೇಟ್ ವೃತ್ತಿ ಬದುಕಿನ ಅಂತಿಮ ಪಂದ್ಯವಾದರೂ ಆಗಬಹುದು ಎಂದು ಹೇಳಿದ್ದಾರೆ. 32 ವರ್ಷದ ಮನೀಶ್ ಪಾಂಡೆ ಸದ್ಯ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.
ಇನ್ನು ಡ್ಯಾಶಿಂಗ್ ಓಪನರ್ ವಿರೇಂದ್ರ ಸೆಹ್ವಾಗ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯರವರ ಪ್ರದರ್ಶನದ ಬಗ್ಗೆಯೂ ಸಹ ಖುಷಿಯಾಗಿಲ್ಲ. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಏಕದಿನ ಕ್ರಿಕೇಟ್ ನಲ್ಲಿ ಕನಿಷ್ಠ 8 ಓವರ್ ಗಳ ಬೌಲಿಂಗ್ ಮಾಡಬೇಕು ಮತ್ತು ಅವಶ್ಯ ಬಿದ್ದರೇ 20 ಓವರ್ ಗಳಷ್ಟಾದರೂ ಬ್ಯಾಟಿಂಗ್ ಮಾಡಬೇಕು. ಆದರೇ ಶ್ರೀಲಂಕಾ ವಿರುದ್ದದ ಸರಣಿಯಲ್ಲಿ ಹಾರ್ದಿಕ್ ನಿಸ್ತೇಜ ಪ್ರದರ್ಶನ ನೀಡಿದ್ದಾರೆ. ಬೌಲಿಂಗ್ ಸಹ ಪರಿಣಾಮಕಾರಿಯಾಗಲಿಲ್ಲ. ಬ್ಯಾಟಿಂಗ್ ಸಹ ತೀರಾ ಸಾಧಾರಣವಾಗಿತ್ತು. ಹಾಗಾಗಿ ಹಾರ್ದಿಕ್ ಪಾಂಡ್ಯ ಸಹ ಶೀಘ್ರದಲ್ಲೇ ಭಾರತೀಯ ಕ್ರಿಕೇಟ್ ತಂಡದ ಆಡುವ ಹನ್ನೊಂದು ಸದಸ್ಯರ ಬಳಗದಿಂದ ಹೊರಹೊಗಬಹುದು ಎಂದು ಹೇಳಿದ್ದಾರೆ.
ಇಂದಿನಿಂದ ಶ್ರೀಲಂಕಾ ವಿರುದ್ದ ಮೂರು ಟಿ20 ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ. ಅನುಭವಧ ಆಧಾರದ ಮೇಲೆ ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಈ ಭಾರಿಯೂ ಮಿಂಚಲಿಲ್ಲ ಎಂದರೇ ತಂಡದಿಂದ ಕೋಕ್ ಸಿಗುವ ಸಾಧ್ಯತೆಯೇ ಹೆಚ್ಚು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.