ಐಪಿಎಲ್ ಆರಂಭವಾಗುವುದಕ್ಕೂ ಮುನ್ನವೇ ಆರ್ಸಿಬಿ ತಂಡಕ್ಕೆ ಕಹಿ ಸುದ್ದಿ, ಸ್ಟಾರ್ ಆಟಗಾರ ತಂಡದಿಂದ ಔಟ್, ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಐಪಿಎಲ್ 2021 ಭಾರತದಲ್ಲಿ ಅದ್ದೂರಿಯಾಗಿಯೇ ಪ್ರಾರಂಭವಾಗಿತ್ತು. ಆದರೆ ಲಾಕ್ಡೌನ್ ನ ನಿಯಮಗಳಿಂದಾಗಿ ಅದ್ದೂರಿಯಾಗಿ ಅಮೋಘವಾಗಿ ನಡೆಯುತ್ತಿದ್ದ ಐಪಿಎಲ್ ಪಂದ್ಯಾವಳಿಗಳು ಅರ್ಧದಲ್ಲಿ ನಿಂತಿದ್ದವು. ಇನ್ನು ಈ ಬಾರಿಯ ಐಪಿಎಲ್ ನಲ್ಲಿ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಗಮನಾರ್ಹವಾಗಿ ಪ್ರದರ್ಶನ ನೀಡಿತ್ತು. ಆಡಿದ ಏಳು ಪಂದ್ಯಗಳಲ್ಲಿ 5 ರಲ್ಲಿ ಗೆಲುವನ್ನು ಸಾಧಿಸಿತು. ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಕಪ್ಪು ನಮ್ದೇ ಅನ್ನೋತರ ಪ್ರಚಂಡ ಫಾರಂನಲ್ಲಿ ಆಟವಾಡುತ್ತಿದ್ದರು.

ಎಬಿ ಡಿವಿಲಿಯರ್ಸ್ ವಿರಾಟ್ ಕೊಹ್ಲಿ ದೇವದತ್ ಪಡಿಕ್ಕಲ್ ವಾಷಿಂಗ್ಟನ್ ಸುಂದರ ಹೀಗೆ ಹಲವಾರು ಮಂದಿ ಪ್ರತಿಭಾನ್ವಿತ ಆಟಗಾರರು ಅಮೋಘ ಪ್ರದರ್ಶನದಿಂದಾಗಿ ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಿಂದೆಂದಿಗಿಂತಲೂ ಯಶಸ್ವಿ ಆಟವನ್ನು ಆಡಿತ್ತು. ಈಗ ಐಪಿಎಲ್ 2021 ಮುಂದುವರಿದ 31 ಪಂದ್ಯಗಳನ್ನು ದುಬೈ ನಲ್ಲಿ ಆಡಿಸಲು ಐಪಿಎಲ್ ನಿರ್ಧರಿಸಿದೆ. ಬಿಸಿಸಿಐ ಇದಕ್ಕೆ ತಯಾರಿಯನ್ನು ಕೂಡಾ ಪೂರ್ಣವಾಗಿ ಮಾಡಿಕೊಂಡಿದೆ. ಇನ್ನು ಎಲ್ಲ ತಯಾರಿಗಳು ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಉಳಿಸಿಕೊಳ್ಳಲಾಗದ ಅಂತಹ ಆಶ್ಚರ್ಯ ದೊರೆತಿದೆ.

ಹೌದು ಸ್ನೇಹಿತರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಬಲಿಷ್ಠ ತಂಡಗಳಲ್ಲಿ ಅಗ್ರಗಣ್ಯ ವಾಗಿ ಮೆರೆಯುತ್ತಿತ್ತು. ಎಲ್ಲಾ ಆಟಗಾರರ ಸಮಗ್ರ ಪರಸ್ಪರವಾಗಿ ಸಹಕಾರ ತಂಡದ ಗೆಲುವಿಗೆ ಹಾಗೂ ಯಶಸ್ವಿಗೆ ಕಾರಣವಾಗಿತ್ತು. ಆದರೆ ಈಗ ಬಂದಿರುವ ಸುದ್ದಿ ಪ್ರಕಾರ ಬೆಂಗಳೂರು ತಂಡದ ಪ್ರಮುಖ ಆಲ್-ರೌಂಡರ್ ಆಟಗಾರರಾಗಿರುವ ವಾಷಿಂಗ್ಟನ್ ಸುಂದರ್ ರವರ ಬಲಗೈ ಬೆರಳಿಗೆ ಬಿದ್ದಿರುವ ಇಂಜುರಿ ಆಗಿರುವ ಕಾರಣ ಶಸ್ತ್ರಚಿಕಿತ್ಸೆ ಮಾಡುವ ಸಾಧ್ಯತೆ ಎದ್ದು ಕಾಣುತ್ತಿದೆ ಹೀಗಾಗಿ ಈ ಬಾರಿಯ ಮುಂದುವರಿದ ಐಪಿಎಲ್ ಪಂದ್ಯಾವಳಿಗಳಿಗೆ ವಾಷಿಂಗ್ಟನ್ ಸುಂದರ್ ರವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಲಭ್ಯವಾಗುವುದು ಬಹುಶಃ ಕಷ್ಟಸಾಧ್ಯವೇ ಸರಿ.

Post Author: Ravi Yadav