ಪ್ರಶಾಂತ್ ಗೆ ಕಳಪೆ ನೀಡಿದಷ್ಟು ಜನಕ್ಕೆ ಒಮ್ಮೆಲೆ ಶಾಕ್ ನೀಡಿದ ಸುದೀಪ್, ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ವಾರ ಪ್ರಶಾಂತ್ ರವರನ್ನು ಮನೆಯ ಮಂದಿ ಕಳಪೆ ಎಂದಿದ್ದರು, ಆದರೆ ಪ್ರಶಾಂತ್ ಸಂಬರ್ಗಿ ರವರು ಇದಕ್ಕೆ ಒಪ್ಪಿರಲಿಲ್ಲ, ಅದರಲ್ಲಿಯೂ ತಾವು ಅತ್ಯುತ್ತಮವಾಗಿ ಆಟವಾಡಿದ ಮೇಲೆ ಕೂಡ ಸ್ಪರ್ಧಿಗಳನ್ನು ಕಳಪೆ ಎಂದದ್ದು ಪ್ರಶಾಂತ ರವರಿಗೆ ಅಕ್ಷರಸಹ ಬೇಸರ ತರಿಸಿದ್ದು ಸುಳ್ಳಲ್ಲ. ಅದೇ ಕಾರಣಕ್ಕಾಗಿ ನಾನು ಕಳಪೆ ಡ್ರೆಸ್ ಹಾಕಿ ಕೊಳ್ಳುವುದಿಲ್ಲ ಎಂದು ಕೂಡ ಹೇಳಿದ್ದರು. ಅದರಲ್ಲಿಯೂ ಶುಭ ಹಾಗೂ ಪ್ರಶಾಂತ್ ರವರ ನಡುವೆ ಟೈ ಆದಾಗ ದಿವ್ಯ ಉರುಡುಗ ರವರು ಪ್ರಶಾಂತ್ ರವರ ಹೆಸರನ್ನು ಊಹಿಸಿದಂತೆ ತೆಗೆದುಕೊಂಡಾಗ ಪ್ರಶಾಂತ್ ರವರು ಶುಭ ರವರು ಗಳಿಸಿದ್ದು 175 ಅಂಕ ಹೀಗಿರುವಾಗ ನನಗೆ ಹಾಗೂ ಅವರಿಗೆ ಹೇಗೆ ಕಂಪೇರ್ ಮಾಡಿ ಕಳಪೆ ನೀಡುತ್ತಿರ ಎಂದು ಪ್ರಶ್ನೆ ಮಾಡಿದರು.

ಆದರೂ ಕೂಡ ಇದು ನಮ್ಮ ವೈಯಕ್ತಿಕ ಅಭಿಪ್ರಾಯ ನಾವು ಕೇವಲ ಅಂಕಗಳನ್ನು ನೋಡುವುದಿಲ್ಲ ಆಟದ ವೈಖರಿ ನೋಡುತ್ತೇವೆ ಹಾಗೂ ಆಟವಾಡಿದ ಆಟಗಳಲ್ಲಿ ನೀವು ಎಷ್ಟು ಶ್ರಮ ನೀಡುತ್ತೀರಿ ಹಾಗೆ ಹೀಗೆ ಏನೇನೋ ಎಂದಲ್ಲಾ ಸಮಜಾಯಿಸಿ ನೀಡಿ ಮನೆಯ ಮಂದಿ ಪ್ರಶಾಂತ್ ರವರನ್ನು ಕಳಪೆ ಎಂದು ಹಣೆಪಟ್ಟಿ ಕಟ್ಟಿದ್ದರು. ಇದಕ್ಕೆ ಪ್ರಶಾಂತ್ ರವರು ಸುದೀಪ್ ರವರು ಬಂದಾಗ ಕೂಡ ಈ ಕುರಿತು ಮಾತನಾಡಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಮನೆಯ ಮಂದಿ ಒಟ್ಟಿನಲ್ಲಿ ಒಬ್ಬರ ಬಕ್ರ ಸ್ಪರ್ಧೆಯನ್ನು ಹುಡುಕಿ ಕಳಪೆ ಎಂದು ಹೇಳಿ ಬಿಡುತ್ತಾರೆ ಎಂದು ಸುದೀಪ್ ರವರ ಮುಂದೆ ಶನಿವಾರ ಹೇಳಿದ್ದರು.

ಹೀಗೆ ಇಷ್ಟೆಲ್ಲ ಚರ್ಚೆಗಳು ನಡೆಯುತ್ತಿರುವ ಸಮಯದಲ್ಲಿ ಮನೆಯ ಮಂದಿಗೆಲ್ಲಾ ಒಮ್ಮೆಲೆ ಸುದೀಪ್ ರವರು ಶಾಕ್ ನೀಡಿದ್ದಾರೆ ಹಾಗೂ ಮತ್ತೊಮ್ಮೆ ಪ್ರಶಾಂತ್ ಅವರು ಮಾಡಿದ ವಾದ ಸರಿಯಾಗಿದೆ ಎಂದು ಜನರಿಗೆ ಮನದಟ್ಟು ಮಾಡಿ ಕೊಟ್ಟಿದ್ದಾರೆ. ಹೌದು ಸ್ನೇಹಿತರೇ ವಾರದ ಪೂರ್ತಿ ಆಟಗಾರರು ಆಟವಾಡುವ ರೀತಿಯನ್ನು ನೋಡಿ ಕಿಚ್ಚ ಸುದೀಪ್ ರವರು ಆಟಗಾರರಿಗೆ ವಿಶೇಷವಾಗಿ ಕಿಚ್ಚನ ಚಪ್ಪಾಳೆ ಎಂಬುದನ್ನು ನೀಡುತ್ತಾರೆ. ಅದೇ ರೀತಿ ಈ ವಾರದ ಕಿಚ್ಚನ ಚಪ್ಪಾಳೆ ಯನ್ನು ಪ್ರಶಾಂತ ಸಂಬರ್ಗಿ ರವರಿಗೆ ನೀಡಲಾಗಿದೆ, ಈ ಮೂಲಕ ಮತ್ತೊಮ್ಮೆ ಪ್ರಶಾಂತ್ ರವರು ಮಾಡಿದ ವಾದ ಸರಿಯಾಗಿದೆ ಎಂದು ಎಲ್ಲರಿಗೂ ಮನ ದಟ್ಟಾಗಿದೆ. ಮತ್ತೊಮ್ಮೆ ಅಭಿಮಾನಿಗಳ ಕಣ್ಣಲ್ಲಿ ಪ್ರಶಾಂತ ರವರು ಹೀರೋ ಆಗಿ ಬಿಟ್ಟಿದ್ದಾರೆ. ಅದೇ ಕಾರಣಕ್ಕಾಗಿ ಇದೇ ಪ್ರಶ್ನೆಯನ್ನು ಪ್ರಶಾಂತ್ ಕೇಳಿದಾಗ ವಾದ ಮಾಡಿದ್ದ, ಮಂಜು ಹಾಗೂ ದಿವ್ಯ ಉರುಡುಗ ಅಭಿಮಾನಿಗಳಿಗೆ ಈಗ ಸುದೀಪ್ ರವರ ನಿರ್ಧಾರ ಕೂಡ ತಪ್ಪೇ ಏನು ಪ್ರಶ್ನೆ ಮಾಡಿದ್ದಾರೆ.

Post Author: Ravi Yadav