ಬಹುನಿರೀಕ್ಷಿತ ರಾಜಮೌಳಿ ರವರ ರಾಮಾಯಣ ಸಿನಿಮಾದ ರಾಮನ ಪಾತ್ರದಿಂದ ಹೊರ ಬಂದ ಮಹೇಶ್ ಬಾಬು, ಕಾರಣವೇನು ಗೊತ್ತೇ??
ಬಹುನಿರೀಕ್ಷಿತ ರಾಜಮೌಳಿ ರವರ ರಾಮಾಯಣ ಸಿನಿಮಾದ ರಾಮನ ಪಾತ್ರದಿಂದ ಹೊರ ಬಂದ ಮಹೇಶ್ ಬಾಬು, ಕಾರಣವೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ರಾಮಾಯಣ ಚಿತ್ರ ಮೂಡಿಬರಲಿ ಎಂದು ಅದೆಷ್ಟು ಅಭಿಮಾನಿಗಳು ಹಲವಾರು ವರ್ಷಗಳಿಂದ ಕಾತರದಿಂದ ಕಾಯುತ್ತಿದ್ದಾರೆ. ಅದಕ್ಕೆ ಇತ್ತೀಚಿನ ದಿನಗಳಲ್ಲಿ ಪೂರಕವೆಂಬಂತೆ ನಿರ್ಮಾಪಕ ಮಧು ಮಂಟೇನಾ ನಿರ್ಮಾಣದಲ್ಲಿ ರಾಮಾಯಣ ಚಿತ್ರ ಮೂಡಿ ಬರುವ ಸೂಚನೆ ಇತ್ತು. ಸೀತೆಯ ಪಾತ್ರಕ್ಕಾಗಿ ದೀಪಿಕಾ ಪಡುಕೋಣೆಯನ್ನು ಹಾಗೂ ರಾಮನ ಪಾತ್ರಕ್ಕಾಗಿ ಮಹೇಶ್ ಬಾಬು ರವರನ್ನು ಹಾಗೂ ರಾವಣನ ಪಾತ್ರಕ್ಕಾಗಿ ಹೃತಿಕ್ ರೋಷನ್ ರವರನ್ನು ಆಯ್ಕೆ ಮಾಡಲಾಗಿತ್ತು.
ರಾಮನ ಪಾತ್ರಕ್ಕಾಗಿ ಮಹೇಶ್ ಬಾಬುರವರ ಮುಖಚರ್ಯೆ ಸಂಪೂರ್ಣವಾಗಿ ಸರಿ ಹೊಂದುತ್ತಿತ್ತು. ಮಹೇಶ್ ಬಾಬುರವರ ಮುಗ್ಧ ಹಾಗೂ ಶ್ವೇತವರ್ಣ ರಾಮನ ಪಾತ್ರಕ್ಕೆ ಹೇಳಿ ಮಾಡಿಸಿದಂತಿತ್ತು. ಎಲ್ಲವೂ ಸರಿಯಾಗಿದೆ ಎನ್ನುವಷ್ಟರಲ್ಲಿ ಸೀತೆಯ ಪಾತ್ರಕ್ಕೆ ದೀಪಿಕಾ ಪಡುಕೋಣೆ ಅವರನ್ನು ಆಯ್ಕೆ ಮಾಡಿದ್ದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಘ್ನವನ್ನು ಎದುರಿಸುತ್ತಿರು ಬೇಕಾದರೆ ಈಗ ಚಿತ್ರತಂಡಕ್ಕೆ ಇನ್ನೊಂದು ವಿಘ್ನ ಅಡ್ಡಿಯಾಗಿದೆ. ಹೌದು ಸ್ನೇಹಿತರೆ ರಾಮಾಯಣ ಚಿತ್ರದ ಪ್ರಮುಖ ಪಾತ್ರಧಾರಿ ಆಗಿರುವ ಮಹೇಶ್ ಬಾಬುರವರ ಚಿತ್ರತಂಡದಿಂದ ಹೊರ ಬಂದಿದ್ದಾರೆ.
ಹೌದು ಸ್ನೇಹಿತರೆ ಈ ಘಟನೆಗೆ ಕಾರಣವೇನೆಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇನೆ ಬನ್ನಿ. ಹೌದು ಸ್ನೇಹಿತರೆ ಮಹೇಶ್ ಬಾಬುರವರ ಮುಂದಿನ ಚಿತ್ರ ಬಾಹುಬಲಿ ಖ್ಯಾತಿಯ ರಾಜಮೌಳಿ ಅವರೊಂದಿಗೆ ನಡೆಯಲಿದೆ ಎಂಬುದು ಈಗಾಗಲೇ ಘೋಷಣೆಯಾಗಿದೆ. ಆರ್ ಆರ್ ಆರ್ ಚಿತ್ರದ ನಂತರ ರಾಜಮೌಳಿಯವರು ಮಹೇಶ್ ಬಾಬುರವರ ನಾಯಕತ್ವದ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಕಾರಣದಿಂದಾಗಿ ಡೇಟ್ಸ್ ಹೊಂದಾಣಿಕೆ ರಾಮಾಯಣ ಚಿತ್ರದೊಂದಿಗೆ ಸರಿಹೊಂದುವುದಿಲ್ಲ ಎಂಬ ಕಾರಣಕ್ಕಾಗಿ ಮಹೇಶ್ ಬಾಬು ರವರು ರಾಮಾಯಣ ಚಿತ್ರದ ಮೇಲೆ ರಾಜಮೌಳಿ ನಿರ್ದೇಶನದ ಚಿತ್ರದ ಚಿತ್ರವನ್ನು ಆಯ್ಕೆ ಮಾಡಿದ್ದಾರೆ. ಈಗ ನಿರ್ಮಾಪಕ ಮಂಟೇನಾರವರು ರಾಮನ ಪಾತ್ರಕ್ಕಾಗಿ ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬುದು ಕಾದು ನೋಡಬೇಕಾಗಿದೆ. ನಿಮ್ಮ ಪ್ರಕಾರ ರಾಮನ ಪಾತ್ರವನ್ನು ಮಾಡಲು ಸರಿಹೊಂದುವಂತಹ ನಟ ಯಾರು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.