ಲೈವ್ ಗೆ ಬಂದ ಅಹೋರಾತ್ರ, ಚಕ್ರವರ್ತಿ ವಿಚಾರದಲ್ಲಿ ತೆಗೆದುಕೊಂಡ ನಿಲುವಿಗೆ ಸುದೀಪ್ ರವರಿಗೆ ತರಾಟೆ. ಹೇಳಿದ್ದೇನು ಗೊತ್ತಾ??

ಲೈವ್ ಗೆ ಬಂದ ಅಹೋರಾತ್ರ, ಚಕ್ರವರ್ತಿ ವಿಚಾರದಲ್ಲಿ ತೆಗೆದುಕೊಂಡ ನಿಲುವಿಗೆ ಸುದೀಪ್ ರವರಿಗೆ ತರಾಟೆ. ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಚಕ್ರವರ್ತಿ ಚಂದ್ರಚುಡ್ ರವರು ಪ್ರಿಯಾಂಕಾ ರವರು ತಮಗೆ ಬಿಗ್ ಬಾಸ್ ನೀಡಿದ ವಿಶೇಷ ಅಧಿಕಾರವನ್ನು ಬಳಸಿಕೊಂಡು ಮುಂದಿನ ವಾರಕ್ಕೆ ಚಕ್ರವರ್ತಿ ಚಂದ್ರಚುಡ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದಾಗ ಅ ಸಭ್ಯ ಸನ್ನೆಯನ್ನು ತೋರಿಸಿದ ಕಾರಣ ಪ್ರೇಕ್ಷಕರು ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧ ಹಾಗೂ ಚಕ್ರವರ್ತಿ ಚಂದ್ರಚುಡ್ ರವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕೂಡಲೇ ಚಕ್ರವರ್ತಿ ಚಂದ್ರಚುಡ್ ಅವರನ್ನು ಮನೆಯಿಂದ ಹೊರಗಡೆ ಕಳುಹಿಸಬೇಕು ಎಂಬ ಮಾತುಗಳು ಕೇಳಿ ಬಂದಿದ್ದವು, ಆದರೆ ಹಾಗೆ ಮಾಡದ ಕಾರಣ ಮುಂದಿನ ವಾರ ಖಂಡಿತವಾಗಲೂ ಎಲಿಮಿನೇಟ್ ಆಗುತ್ತಾರೆ ಎಂದು ಎಲ್ಲರೂ ಒಗ್ಗಟ್ಟಾಗಿ ಭವಿಷ್ಯ ನುಡಿದಿದ್ದರು.

ಆದರೆ ಈ ವಿಚಾರದ ಕುರಿತು ಸುದೀಪ್ ರವರು ಮಾತನಾಡಿ ಚಕ್ರವರ್ತಿ ಚಂದ್ರಚುಡ್ ರವರಿಗೆ ತಕ್ಕಮಟ್ಟಿಗೆ ಚಳಿ ಬಿಡಿಸಿದರು ಹಾಗೂ ಈ ವಾರ ಎಲಿಮಿನೇಷನ್ ಇಲ್ಲದ ಕಾರಣ ಚಕ್ರವರ್ತಿ ರವರು ಮನೆಯಲ್ಲಿ ಉಳಿದು ಕೊಳ್ಳುವ ನಿರ್ಧಾರ ಆಗಿದೆ. ಈ ಕುರಿತು ತಿಳಿಯುತ್ತಿದ್ದಂತೆ ಅಹೋರಾತ್ರ ರವರು ಲೈವ್ ಗೆ ಬಂದು, ಸುದೀಪ್ ರವರು ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡಿದ ರೀತಿ ಹಾಗೂ ಚಕ್ರವರ್ತಿ ರವರು ನಡೆದುಕೊಂಡ ರೀತಿಯ ವಿರುದ್ಧ ಅಕ್ಷರಸಹ ಟೀಕೆಗಳ ಬಾಣಗಳನ್ನು ಸುರಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿರುವ ಎಲ್ಲರೂ ಕೂಡ ಸುದೀಪ್ ರವರ ಬೆಂಬಲಿಗರು, ಹುಚ್ಚ ವೆಂಕಟ್ ರವರನ್ನು ಬಿಗ್ ಬಾಸ್ ರೂಲ್ಸ್ ಬ್ರೇಕ್ ಮಾಡಿದ ಕಾರಣ ಮನೆಯಿಂದ ಹೊರಗಡೆ ಕಳುಹಿಸಿದಂತೆ ಇವರನ್ನು ಕೂಡ ಕಳುಹಿಸಿದ್ದಾರೆ ನಾನು ಭೇಷ್ ಎನ್ನುತ್ತಿದೆ, ಅದನ್ನು ಬಿಟ್ಟು ಪಂಚಾಯಿತಿ ನಡೆಸಿ ಚಕ್ರವರ್ತಿ ಚಂದ್ರಚುಡ್ ರವರಿಗೆ ಅವರು ಇವರು ಎಂದು ಮರ್ಯಾದೆ ನೀಡಿ ಅಭಿಮಾನಿ ಎಂದು ಹೇಳಿ ಹೊಗಳುವುದು, ಆಮೇಲೆ ಪಂಚಾಯಿತಿ ನಡೆಸಿದಂತೆ ನಾಟಕವಾಡುವುದು, ಅವನು ನಿನ್ನ ಬೆನ್ನ ಹಿಂದೆ ಮಾತನಾಡುವುದು ಇವೆಲ್ಲಾ ಒಂದು ನಾಟಕ ಎಂದು ನನಗೆ ತಿಳಿದಿದೆ. ಎಂದು ಇನ್ನೂ ಹಲವಾರು ಮಾತುಗಳ ಮೂಲಕ ಸುದೀಪ್ ಹಾಗೂ ಚಕ್ರವರ್ತಿ ರವರ ವಿರುದ್ಧ ಟೀಕೆಗಳ ಬಾಣಗಳನ್ನು ಸುರಿಸಿದ್ದಾರೆ. ಸಂಪೂರ್ಣ ವೀಡಿಯೊ ಮೇಲುಗಡೆ ಇದ್ದು ಒಮ್ಮೆ ನೋಡಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.