ಲಂಕಾ ಪ್ರವಾಸದಿಂದ ಅರ್ಧದಲ್ಲೇ ತಂಡವನ್ನ ತೊರೆಯುತ್ತಿರುವ ಭಾರತೀಯ ಆಟಗಾರರು ಯಾರ್ಯಾರು ಮತ್ತು ಯಾಕೆ ಗೊತ್ತೇ??
ಲಂಕಾ ಪ್ರವಾಸದಿಂದ ಅರ್ಧದಲ್ಲೇ ತಂಡವನ್ನ ತೊರೆಯುತ್ತಿರುವ ಭಾರತೀಯ ಆಟಗಾರರು ಯಾರ್ಯಾರು ಮತ್ತು ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಭಾರತದ ಒಂದು ತಂಡ ಇಂಗ್ಲೆಂಡ್ ನಲ್ಲಿ ಟೆಸ್ಟ್ ಆಡಲು ಬೀಡು ಬಿಟ್ಟಿರುವಾಗಲೇ ಮತ್ತೊಂದು ಅನನುಭವಿಗಳ ತಂಡ ಶ್ರೀಲಂಕಾ ವಿರುದ್ದ ಏಕದಿನ ಪಂದ್ಯದ ಸರಣಿ ಗೆದ್ದು ಬೀಗುತ್ತಿದೆ. ಈ ಮಧ್ಯೆ ಇನ್ನು ಕೆಲವೇ ದಿನಗಳಲ್ಲಿ ಶ್ರೀಲಂಕಾ ವಿರುದ್ದ ಟಿ20 ಸರಣಿಯನ್ನು ಸಹ ಆಡಲಿದೆ. ಆದರೇ ಎಕದಿನ ಸರಣಿ ಗೆದ್ದ ತಂಡಕ್ಕೆ ಈಗ ಬಿಸಿಸಿಐ ಶಾಕಿಂಗ್ ನ್ಯೂಸ್ ಒಂದನ್ನು ನೀಡಿದ್ದು, ತಂಡದಲ್ಲಿದ್ದ ಕೆಲವು ಪ್ರಮುಖ ಆಟಗಾರರನ್ನು ಶ್ರೀಲಂಕಾದಿಂದ ನೇರವಾಗಿ ಲಂಡನ್ ಗೆ ಕಳಿಸಿ ಎಂದು ಹೇಳಿದೆ.
ಇಂಗ್ಲೆಂಡ್ ಪ್ರವಾಸದಲ್ಲಿದ್ದ ಭಾರತೀಯ ಆಟಗಾರರಾದ ಆರಂಭಿಕ ಬ್ಯಾಟ್ಸಮನ್ ಶುಭಮಾನ್ ಗಿಲ್, ಆಲ್ ರೌಂಡರ್ ವಾಷಿಂಗ್ಟನ್ ಸುಂದರ್, ವೇಗದ ಬೌಲರ್ ಆವೇಶ್ ಖಾನ್ ಗಾಯಕ್ಕೆ ತುತ್ತಾಗಿ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಇನ್ನು ತಂಡದ ಉಪನಾಯಕ ಅಜಿಂಕ್ಯಾ ರಹಾನೆ ಸಹ ಕೈ ನೋವಿನಿಂದ ಬಳಲುತ್ತಿದ್ದು ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಭಾಗವಹಿಸಿರಲಿಲ್ಲ. ಹೀಗಾಗಿ ಈಗ ಲಂಕಾದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಆಟಗಾರರ ಮೇಲೆ ಕಣ್ಣಿಟ್ಟಿರುವ ಬಿಸಿಸಿಐ, ಗಾಯಗೊಂಡ ಆಟಗಾರರ ಬದಲಿಗೆ ಈ ಆಟಗಾರರನ್ನು ಕಳಿಸಿಕೊಡಿ ಎಂದು ಶ್ರೀಲಂಕಾದಲ್ಲಿರುವ ಭಾರತೀಯ ತಂಡದ ಮ್ಯಾನೇಜ್ ಮೆಂಟ್ ಗೆ ತಿಳಿಸಿದೆ.
ಅಷ್ಟಕ್ಕೂ ಇಂಗ್ಲೇಂಡ್ ಗೆ ಪ್ರಯಾಣ ಬೆಳೆಸುತ್ತಿರುವ ಆ ಮೂವರು ಆಟಗಾರರು ಯಾರು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಆರಂಭಿಕ ಬ್ಯಾಟ್ಸಮನ್ ಪೃಥ್ವಿ ಶಾ, ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಸೂರ್ಯಕುಮಾರ್ ಯಾದವ್ ಹಾಗೂ ಆಲ್ ರೌಂಡರ್ ಜಯಂತ್ ಯಾದವ್ ಇಂಗ್ಲೆಂಡ್ ಗೆ ತೆರಳಲಿದ್ದಾರೆ. ಶುಭಮಾನ್ ಗಿಲ್ ಸ್ಥಾನವನ್ನ ಪೃಥ್ವಿ ಶಾ ತುಂಬಿದರೇ, ಮಧ್ಯಮ ಕ್ರಮಾಂಕಕ್ಕೆ ಸೂರ್ಯ ಕುಮಾರ್ ಯಾದವ್ ಮತ್ತು ವಾಷಿಂಗ್ಟನ್ ಸುಂದರ್ ಸ್ಥಾನಕ್ಕೆ ಜಯಂತ್ ಯಾದವ್ ಬದಲಿ ಆಟಗಾರರಾಗಿದ್ದಾರೆ.
ಮುಂದಿನ ವಾರದಿಂದ ನಡೆಯಲಿರುವ ಶ್ರೀಲಂಕಾ ವಿರುದ್ದದ 3 ಟಿ 20 ಸರಣಿಯನ್ನು ಪೃಥ್ವಿ ಶಾ ಹಾಗೂ ಸೂರ್ಯ ಕುಮಾರ್ ಯಾದವ್ ತಪ್ಪಿಸಿಕೊಳ್ಳುವ ಸಾಧ್ಯತೆಯಿದ್ದು ದೇವದತ್ ಪಡಿಕಲ್ ಅಂತರಾಷ್ಟ್ರೀಯ ಕ್ರಿಕೇಟ್ ಗೆ ಪದಾರ್ಪಣೆ ಮಾಡುವ ಸಾಧ್ಯತೆಯಿದೆ. ಆಗಸ್ಟ್ 4 ರಿಂದ ಇಂಗ್ಲೇಂಡ್ ವಿರುದ್ದ ಆರಂಭವಾಗುವ 5 ಟೆಸ್ಟ್ ಪಂದ್ಯಗಳ ಸರಣಿ ಭಾರತ ತಂಡಕ್ಕೆ ಮಹತ್ವ ಎನಿಸಿದೆ. ಇದು ಮುಗಿದ ನಂತರ ಐಪಿಎಲ್ ನ ಮುಂದುವರಿದ ಚರಣ ಸೆಪ್ಟೆಂಬರ್ 19 ರಂದು ಯು.ಎ.ಇ ಯಲ್ಲಿ ಆರಂಭವಾಗಲಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.