ವಿಷ್ಣುವರ್ಧನ್ ನಟನೆಯ ಭೂತಯ್ಯನ ಮಗ ಅಯ್ಯು ಚಿತ್ರಕ್ಕೂ ಅಣ್ಣಾವ್ರಿಗೆ ಇರುವ ನಂಟೇನು ಗೊತ್ತೇ??
ವಿಷ್ಣುವರ್ಧನ್ ನಟನೆಯ ಭೂತಯ್ಯನ ಮಗ ಅಯ್ಯು ಚಿತ್ರಕ್ಕೂ ಅಣ್ಣಾವ್ರಿಗೆ ಇರುವ ನಂಟೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಎರಡು ಕಣ್ಣುಗಳಿಂದ ಖ್ಯಾತಿಯಾಗಿರುವ ರಾಜಕುಮಾರ್ ಹಾಗೂ ವಿಷ್ಣುವರ್ಧನ್ ರವರು ಕೇವಲ ಸಿನಿಮಾ ನಟರಾಗಿ ಮಾತ್ರವಲ್ಲದೆ ಕನ್ನಡ ಜನತೆಗೆ ನಿಜ ಜೀವನದಲ್ಲೂ ಕೂಡ ಜನಮೆಚ್ಚಿದ ನಾಯಕರಾಗಿ ಮೆರೆದವರು. ಆದರೆ ಕೆಲ ಕಲಹ ಪ್ರಿಯರು ಮಾತ್ರ ಇವರಿಬ್ಬರ ನಡುವಿನ ಬಾಂಧವ್ಯವನ್ನು ಹೊರ ಪ್ರಪಂಚದಲ್ಲಿ ಇಬ್ಬರಿಗೆ ಸರಿ ಇಲ್ಲ ಎಂಬಂತೆ ಚಿತ್ರಿಸಿದರು. ಹೌದು ಸ್ನೇಹಿತರೆ ಗಂಧದಗುಡಿ ಚಿತ್ರದಲ್ಲಿ ರಾಜಕುಮಾರ ಹಾಗೂ ವಿಷ್ಣುವರ್ಧನ್ ಇಬ್ಬರೂ ಕೂಡ ಜೊತೆಯಾಗಿ ನಟಿಸಿದ್ದರು.
ಆದರೆ ಈ ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ನಡೆದಂತಹ ಅರಿವಿಲ್ಲದಂತಹ ಆಚಾತುರ್ಯ ವನ್ನು ಹೊರಗಿನ ಪ್ರಪಂಚ ತಪ್ಪಾಗಿ ಸಮಾಜದ ಎದುರುಗಡೆ ಪ್ರತಿಬಿಂಬಿಸಿತು. ಇದರಿಂದಾಗಿ ಕನ್ನಡ ಚಿತ್ರರಂಗದಲ್ಲಿ ಎರಡು ಬಣ ಏರ್ಪಟ್ಟಿತು. ಒಂದು ಡಾ ರಾಜಕುಮಾರ್ ಅವರನ್ನು ಬೆಂಬಲಿಸುವ ಬಣ ಇನ್ನೊಂದು ವಿಷ್ಣುವರ್ಧನ್ ರವರನ್ನು ಬೆಂಬಲಿಸುವ ಬಣ. ಆದರೆ ನಿಜವಾಗಿಯೂ ಇವರಿಬ್ಬರ ಮಧ್ಯೆ ಯಾವುದೇ ವೈ’ಶ್ಯಮ್ಯ ವಾಗಲಿ ಬೇಸರವಾಗಲೀ ಮುನಿಸಾಗಲಿ ಇರಲಿಲ್ಲ. ಇದನ್ನು ಇವರು ಜೊತೆಯಲ್ಲಿ ಸಿಕ್ಕಾಗಲೆಲ್ಲಾ ಸಾಬೀತು ಪಡಿಸಲು ಪ್ರಯತ್ನಿಸಿದರು. ಇದಕ್ಕೆ ಇನ್ನೊಂದು ಒಳ್ಳೆಯ ಉದಾಹರಣೆ ಹೇಳುವುದಾದರೆ ಬನ್ನಿ ಸ್ನೇಹಿತರೆ ನಿಮಗೆ ಸಂಪೂರ್ಣ ವಿವರವಾಗಿ ನಿಮಗೆ ವಿವರಿಸುತ್ತೇವೆ.
ಹೌದು ಸ್ನೇಹಿತರೆ ಗಂಧದಗುಡಿ ಚಿತ್ರದ ನಂತರ ಸಾಹಸಸಿಂಹ ವಿಷ್ಣುವರ್ಧನ್ ರವರು ಭೂತಯ್ಯನ ಮಗ ಅಯ್ಯು ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಹೌದು ಸ್ನೇಹಿತರೆ ಈ ವಿಷಯ ಈಗ ಯಾಕೆ ಅಂತೀರಾ ಬನ್ನಿ ಅದಕ್ಕೊಂದು ಕಾರಣವಿದೆ ಕಾರಣ ಇವರಿಬ್ಬರ ನಡುವೆ ಯಾವುದೇ ವೈಷಮ್ಯ ಇಲ್ಲ ಎಂಬುದನ್ನು ಸಾಬೀತು ಪಡಿಸುತ್ತದೆ. ಹೌದು ಸ್ನೇಹಿತರೆ ಭೂತಯ್ಯನ ಮಗ ಅಯ್ಯು ಸಾಮಾಜಿಕ ಕಳಕಳಿಯ ಸಂದೇಶವನ್ನು ಒಳಗೊಂಡಂತಹ ಅಪರೂಪದ ಚಿತ್ರ ಎಂದು ಹೇಳಬಹುದು. ಬಂಗಾರದ ಮನುಷ್ಯ ಚಿತ್ರದ ನಿರ್ದೇಶಕರಿಂದ ಕಾದಂಬರಿ ಆಧಾರಿತ ಚಿತ್ರ ಭೂತಯ್ಯನ ಮಗ ಅಯ್ಯು.
ಈ ಚಿತ್ರಕ್ಕೆ ನಾಲ್ವರು ನಿರ್ಮಾಪಕರಿದ್ದರು. ಅದರಲ್ಲಿ ಒಬ್ಬರು ಈಶ್ವರಿ ಪ್ರೊಡಕ್ಷನ್ಸ್ ನ ವೀರಸ್ವಾಮಿ ಇನ್ನೊಬ್ಬರು ವರದರಾಜ್. ಈ ವರದರಾಜ್ ಹೆಸರನ್ನು ನೀವು ಸಾಕಷ್ಟು ಬಾರಿ ಕೇಳಿರಬಹುದು. ಹೌದು ಸ್ನೇಹಿತರೆ ಈ ವರದರಾಜ್ ಬೇರೆ ಇನ್ಯಾರೋ ಅಲ್ಲ ಸ್ವತಹ ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರ ಸ್ವಂತ ಸಹೋದರ ವರದಪ್ಪ. ಹೌದು ಸ್ನೇಹಿತರೆ ನಾಲ್ವರು ನಿರ್ಮಾಪಕರಲ್ಲಿ ರಾಜಕುಮಾರ್ ಅವರ ಸಹೋದರ ವರದಪ್ಪ ಕೂಡ ಒಬ್ಬರು. ಒಂದು ವೇಳೆ ಡಾಕ್ಟರ್ ರಾಜಕುಮಾರ್ ರವರಿಗೆ ವಿಷ್ಣುವರ್ಧನ್ ರವರ ಕುರಿತಂತೆ ಏನಾದರೂ ಮನಸಿನಲ್ಲಿ ಇದ್ದಿದ್ರೆ ತಮ್ಮ
ನಿರ್ಮಾಪಕರಾಗಿದ್ದ ವರದಪ್ಪನವರು ಬಳಿ ವಿಷ್ಣುವರ್ಧನ್ ರವರಿಗೆ ಅವಕಾಶ ನೀಡದಂತೆ ಮಾಡಬಹುದಿತ್ತು ಆದರೆ ಅವರು ಹಾಗೆ ಮಾಡಲಿಲ್ಲ.
ಇತ್ತ ವಿಷ್ಣುವರ್ಧನ್ ರವರಿಗೆ ರಾಜಕುಮಾರ್ ರವರ ಕುರಿತಂತೆ ಏನಾದರೂ ಮುನಿಸಿದ್ದಿದ್ದರೆ ಅವರು ಕೂಡ ಅವರ ತಮ್ಮ ಚಿತ್ರದ ನಿರ್ಮಾಪಕ ರಾಗಿರುವುದರಿಂದ ನಾನು ಚಿತ್ರದಲ್ಲಿ ನಟಿಸುವುದಿಲ್ಲ ಎಂಬ ನಿರ್ಧಾರವನ್ನು ಕೂಡ ತಿಳಿಸ ಬಹುದಿತ್ತು ಆದರೆ ಅವರು ಹಾಗೆ ಮಾಡಲಿಲ್ಲ. ಇದಕ್ಕೆ ಕಾರಣ ಅವರಿಬ್ಬರ ನಡುವೆ ಯಾವುದೇ ವಿಷಯವಾಗಲಿ ವೈಮನಸ್ಸು ಆಗಲಿ ಇರಲಿಲ್ಲ ಅದು ಕೇವಲ ಕೆಲ ಮೂರನೇ ವ್ಯಕ್ತಿಗಳಿಂದ ಹಬ್ಬಿದಂತಹ ಗಾಳಿಸುದ್ದಿ ಹೊರತು ನಿಜವಲ್ಲ.
ಕನ್ನಡ ಚಿತ್ರರಂಗದ ಮೇರು ನಟರಾದ ಇಬ್ಬರು ಕೂಡ ಒಬ್ಬರನ್ನೊಬ್ಬರು ಬಹಳಷ್ಟು ಗೌರವ ಹಾಗೂ ಪ್ರೀತಿಗಳಿಂದ ಕಾಣುತ್ತಿದ್ದರು. ಇಂದಿಗೂ ಅಷ್ಟೇ ಸ್ನೇಹಿತರೆ ರಾಜ್ ಹಾಗೂ ವಿಷ್ಣು ಅಭಿಮಾನಿಗಳು ಎಲ್ಲವನ್ನೂ ಮರೆತು ಪರಸ್ಪರ ಅನ್ಯೋನ್ಯವಾಗಿ ಇರಬೇಕಾಗಿದ್ದು ಅನಿವಾರ್ಯ. ಈ ಕುರಿತಂತೆ ನಿಮಗೆ ಏನನ್ನಿಸುತ್ತದೆ ಸ್ನೇಹಿತರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.