ಶ್ರೀಲಂಕಾದಲ್ಲಿ ಕಳಪೆ ಪ್ರದರ್ಶನ, ಇಬ್ಬರು ಆಟಗಾರರಿಗೆ ಗೇಟ್ ಪಾಸ್ ಪಕ್ಕ, ಒಬ್ಬರಿಗೆ ಶಾಶ್ವತ ಬಾಗಿಲು ಮುಚ್ಚಲಿದೆಯಂತೆ, ಯಾರಿಗೆ ಗೊತ್ತೇ??

ಶ್ರೀಲಂಕಾದಲ್ಲಿ ಕಳಪೆ ಪ್ರದರ್ಶನ, ಇಬ್ಬರು ಆಟಗಾರರಿಗೆ ಗೇಟ್ ಪಾಸ್ ಪಕ್ಕ, ಒಬ್ಬರಿಗೆ ಶಾಶ್ವತ ಬಾಗಿಲು ಮುಚ್ಚಲಿದೆಯಂತೆ, ಯಾರಿಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೇಟ್ ತಂಡದಲ್ಲಿ ಸ್ಥಾನ ಪಡೆಯುವುದೆಂದರೇ ಅದು ಸಾಧನೆಯೇ ಸರಿ. ಅದರಲ್ಲೂ ಇತ್ತಿಚೆಗಂತೂ ಆಡುವ 11 ರ ಬಳಗದಲ್ಲಿ ಸ್ಥಾನ ಪಡೆಯುವುದು ಹರಸಾಹಸವೇ ಸರಿ. 140 ಕೋಟಿ ಇರುವ ಭಾರತದ ಜನಸಂಖ್ಯೆಯಲ್ಲಿ ದೇಶವನ್ನ ಪ್ರತಿನಿಧಿಸುವ 11 ಆಟಗಾರರು ಎಂದರೇ ಅದು ಹೆಮ್ಮೆಯ ವಿಷಯ. ಭಾರತ ತಂಡದ ಮುಖ್ಯ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದ್ದ ಕಾರಣ, ಬೆಂಚ್ ಕಾಯಿಸುತ್ತಿದ್ದ ಆಟಗಾರರಿಗೆ ಶ್ರೀಲಂಕಾ ಪ್ರವಾಸದ ಅವಕಾಶ ಸಿಕ್ಕಿತು. ಇದನ್ನ ಕೆಲವು ಆಟಗಾರರು ಸಮರ್ಥವಾಗಿ ಬಳಸಿಕೊಂಡರೇ, ಇನ್ನುಳಿದ ಆಟಗಾರರು ನೀರಿಕ್ಷೆಗೆ ತಕ್ಕ ಪ್ರದರ್ಶನ ನೀಡದೇ ಈಗ ತಂಡದಿಂದಲೇ ಹೊರಬೀಳುವ ವಾತಾವರಣ ಸೃಷ್ಠಿಸಿಕೊಂಡಿದ್ದಾರೆ. ಬನ್ನಿ ಆ ಇಬ್ಬರೂ ಆಟಗಾರರು ಯಾರು ಎಂಬುದನ್ನ ತಿಳಿಯೋಣ ಬನ್ನಿ.

ಮನೀಶ್ ಪಾಂಡೆ – ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಪಾಂಡೆಗೆ ಹಲವಾರು ಅವಕಾಶಗಳು ಸಿಕ್ಕಿದ್ದವು. ಆದರೇ ಆಗ ಪಾಂಡೆ ಉತ್ತಮ ಆಟವಾಡಿದರೂ, ಹೆಚ್ಚು ಅವಕಾಶ ಸಿಗುತ್ತಿರಲಿಲ್ಲ. ಆದರೇ ಶ್ರೀಲಂಕಾ ಪ್ರವಾಸದಲ್ಲಿ ಮಾತ್ರ ಪಾಂಡೆಯವರಿಗೆ ಮೂರು ಏಕದಿನ ಪಂದ್ಯದಲ್ಲಿಯೂ ಬ್ಯಾಟಿಂಗ್ ಗೆ ಅವಕಾಶ ಸಿಕ್ಕಿತ್ತು. ಸಿಕ್ಕ ಅವಕಾಶದಲ್ಲಿಯೇ ದೊಡ್ಡ ಇನ್ನಿಂಗ್ಸ್ ಆಡುವ ಸಾಧ್ಯತೆಗಳಿದ್ದರೂ ಪಾಂಡೆ ಆ ಅವಕಾಶಗಳೆಲ್ಲವನ್ನು ಕೈಯಾರೆ ಹಾಳು ಮಾಡಿಕೊಂಡಿದ್ದಾರೆ. ಮೂರು ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ ಪಾಂಡೆ, 26, 37, 11 ರನ್ ಗಳಿಸುವ ಮೂಲಕ ನೀರಸ ಪ್ರದರ್ಶನ ನೀಡಿದ್ದಾರೆ. ಈಗಾಗಲೇ ಭಾರತ ತಂಡಕ್ಕೆ ನಾಲ್ಕನೇ ಕ್ರಮಾಂಕಕ್ಕೆ ಶ್ರೇಯಸ್ ಅಯ್ಯರ್ ಹಾಗೂ ಸೂರ್ಯ ಕುಮಾರ್ ಯಾದವ್ ಪ್ರಬಲ ಸ್ಪರ್ಧಿಗಳಾಗಿದ್ದಾರೆ. ಹಾಗಾಗಿ ಪಾಂಡೆ ನಾಲ್ಕನೇ ಕ್ರಮಾಂಕದ ಸ್ಪರ್ಧೆಯಿಂದ ಬಹುತೇಖ ಹೊರಬಿದ್ದಂತೆ. ಸದ್ಯ 32 ವರ್ಷ ವಯಸ್ಸಿನ ಪಾಂಡೆಗೆ ಮತ್ತೊಂದು ಅವಕಾಶ ಸಹ ತಂಡದಲ್ಲಿ ಸಿಗುವುದು ಕಠಿಣವಾಗಿದೆ.

ನವದೀಪ್ ಸೈನಿ – ಭಾರತ ತಂಡದ ಮಟ್ಟಿಗೆ ಅತ್ಯಂತ ವೇಗದ ಬೌಲರ್. ಆದರೇ ಇನ್ನು ಸಹ ಲೈನ್ ಮತ್ತು ಲೆಂಗ್ತ್ ನಲ್ಲಿ ಹಿಡಿತವಿಲ್ಲ. ಆಸ್ಟ್ರೇಲಿಯಾ ನೆಲದಲ್ಲಿಯೂ ಟೆಸ್ಟ್ ನಲ್ಲಿ ಅವಕಾಶ ಸಿಕ್ಕರೂ, ಬೇರೆಯವರ ಥರ ಬಳಸಿಕೊಳ್ಳಲಿಲ್ಲ. ಐಪಿಎಲ್ ನಲ್ಲಿ ಆರ್.ಸಿ.ಬಿ ತಂಡದ ಪರ ಏಕೈಕ ಪಂದ್ಯ ಆಡಿ ಅದರಲ್ಲಿಯೂ ಸಹ ದುಬಾರಿಯಾಗಿದ್ದರು. ಈಗ ಶ್ರೀಲಂಕಾ ವಿರುದ್ದ ಪಂದ್ಯದಲ್ಲಿಯೂ ಸಹ ದುಬಾರಿಯಾಗಿದ್ದಾರೆ. ಯಾವ ವಿಕೇಟ್ ಸಹ ಪಡೆಯುತ್ತಿಲ್ಲ. ಹಾಗಾಗಿ ನವದೀಪ್ ಸೈನಿ ಮುಂದಿನ ಸರಣಿಗಳಿಂದ ತಂಡದಿಂದ ಹೊರ ಬೀಳುವುದು ಬಹುತೇಖ ಖಚಿತವೆನಿಸಿದೆ. ಸದ್ಯ ಭಾರತ ತಂಡದ ಬೆಂಚ್ ಸ್ಟ್ರೆಂತ್ ವಿಶ್ವದಲ್ಲೇ ಅತ್ಯುತ್ತಮ ಎನಿಸಿರುವ ಕಾರಣ ಆಟಗಾರರು ಒಂದು ಪ್ರದರ್ಶನದಲ್ಲಿ ಎಡವಿದರೂ ಸಹ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.