ಮತ್ತೊಮ್ಮೆ ಭಾರತೀಯ ಸೇನೆಗೆ ಆನೆಬಲ, ಭಾರತೀಯ ನೌಕಾ ಪಡೆ ಸೇರಿಕೊಂಡ ವಿಶ್ವದಲ್ಲಿಯೇ ಬಲಿಷ್ಠ ಅಸ್ತ್ರ, ವಿಶೇಷತೆ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ರಕ್ಷಣಾ ವಲಯದಲ್ಲಿ ಭಾರತೀಯ ಸೇನೆಗೆ ಹಲವಾರು ಉನ್ನತ ಮಟ್ಟದ ಶಸ್ತ್ರಾಸ್ತಗಳು ಸೇರುತ್ತಲೇ ಇವೆ. ರಫೇಲ್ ನಂತರ ಈಗ ಎರಡು ಹೊಸ ಹೆಲಿಕಾಪ್ಟರ್ ಗಳು ಭಾರತದ ನೌಕಾದಳವನ್ನು ಸೇರಿಕೊಂಡಿವೆ. ಈ ಹಿಂದೆ ಅಮೇರಿಕಾದಲ್ಲಿ ಮಾತ್ರ ಇದ್ದ ಎಂಎಚ್-60 ಹೆಸರಿನ ಎರಡು ಹೆಲಿಕಾಪ್ಟರ್ ಗಳನ್ನು ಅಮೇರಿಕಾ ನೌಕಾಪಡೆ ಭಾರತ ನೌಕಾದಳಕ್ಕೆ ಹಸ್ತಾಂತರಿಸಿದೆ. ಈ ಹೆಲಿಕಾಪ್ಟರ್ ನ ವಿಶೇಷತೆಗಳು ಈ ಕೆಳಗಿನಂತಿವೆ.

ಹೆಲಿಕಾಪ್ಟರ್ ಗಳನ್ನ ಉತ್ತಮ ಹವಾಮಾನಗಳಿದ್ದರೇ ಮಾತ್ರ ಆಪರೇಟ್ ಮಾಡಲಾಗುತ್ತಿತ್ತು. ಆದರೇ ಎಂಎಚ್-60 ಹೆಲಿಕಾಪ್ಟರ್ ಗಳು ಎಂತಹ ಪ್ರತಿಕೂಲ ವಾತಾವರಣವಿದ್ದರೂ ಈ ಹೆಲಿಕಾಪ್ಟರ್ ಗಳನ್ನು ನಿಸ್ಸಂದೇಹವಾಗಿ ಬಳಸಿಕೊಳ್ಳಬಹುದು. ಎಂಎಚ್ -60 ಆರ್ ಸಮುದ್ರ ಹೆಲಿಕಾಪ್ಟರ್ ಆಗಿದ್ದು, ಅತ್ಯಾಧುನಿಕ ಏವಿಯಾನಿಕ್ಸ್‌ನೊಂದಿಗೆ ಅನೇಕ ಕಾರ್ಯಾಚರಣೆಗಳನ್ನು ನಡೆಸಲು ವಿನ್ಯಾಸಗೊಳಿಸಲಾಗಿದೆ. ಈ ಹೆಲಿಕಾಪ್ಟರ್ ಭಾರತೀಯ ನೌಕಾಪಡೆಯ ಮೂರು ಆಯಾಮದ ಸಾಮರ್ಥ್ಯಗಳನ್ನು ಇನ್ನಷ್ಟು ಹೆಚ್ಚಳ ಮಾಡಲಿದೆ. ನಾವೀನ್ಯತೆ ಹಾಗೂ ತಂತ್ರಜ್ಞಾನದಲ್ಲಿ ಭಾರತ ಇತರೆ ದೇಶಗಳಿಗಿಂತ ಒಂದು ಹೆಜ್ಜೆ ಮುಂದೆ ಇಟ್ಟಿದೆ ಎಂದು ಹೇಳಿದರೇ ಅದು ಅತಿಶಯೋಕ್ತಿ ಅಲ್ಲ.

ಈ ಹಿಂದೆ 2020 ರ ಫೆಬ್ರವರಿಯಲ್ಲಿ ನಡೆದಿದ್ದ ನಮಸ್ತೇ ಟ್ರಂಪ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಿದ್ದಾಗ ಈ ಒಪ್ಪಂದವನ್ನ ಭಾರತ , ಅಮೇರಿಕಾ ಮುಂದೆ ಇಟ್ಟಿತ್ತು. ಆಗಲೇ ಅಮೇರಿಕಾ ಅಧ್ಯಕ್ಷರು ಈ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅದರಂತೆ ಈಗ ಹೆಲಿಕಾಪ್ಟರ್ ಗಳನ್ನು ಅಮೇರಿಕಾ ನೌಕಾಪಡೆ ಭಾರತದ ನೌಕಾಪಡೆಗೆ ಹಸ್ತಾಂತರಿಸಿದೆ. ಈ ಎರಡು ಎಂಎಚ್-60 ಹೆಲಿಕಾಪ್ಟರ್ ಗಳ ಸೇರ್ಪಡೆ ಭಾರತ, ವಿಶ್ವದ ದೊಡ್ಡಣ್ಣ ಅಮೆರಿಕ ಜೊತೆ ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಿದೆ. ಕಳೆದ ಎರಡು ವರ್ಷಗಳಲ್ಲಿ ದ್ವಿಪಕ್ಷೀಯ ರಕ್ಷಣಾ ವ್ಯಾಪಾರವು 20 ಬಿಲಿಯನ್ ಡಾಲರ್‌ಗಳಿಗಂತೂ ಹೆಚ್ಚು ವಿಸ್ತರಿಸಿದೆ ಎಂದು ಮೂಲಗಳು ಹೇಳಿವೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav