ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಏನು ಮಾಡದೇ ಯಾವುದೇ ಟಾಸ್ಕ ಗೆಲ್ಲದೆ ಮನೆಯಲ್ಲಿ ತಾನೆ ಟಾಪ್ ಎನ್ನುವಂತಿರುವ ಸ್ಪರ್ಧಿ ಯಾರು ಗೊತ್ತಾ??

6

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ಇದೀಗ ಮನೆಯಲ್ಲಿ ಉಳಿದು ಕೊಳ್ಳಬೇಕು ಎಂದರೆ ಪ್ರತಿಯೊಬ್ಬರು ಕೂಡ ತಮ್ಮದೇ ಆದ ಲೆಕ್ಕಾಚಾರಗಳ ಮೂಲಕ ಆಟವಾಡ ಬೇಕಾಗಿದೆ. ಇಷ್ಟು ದಿವಸ ವೀಕ್ ಇರುವ ಸ್ಪರ್ಧಿಗಳು ವಾರಕ್ಕೊಬ್ಬರಂತೆ ಮನೆಯಿಂದ ಹೊರ ಬರುತ್ತಿದ್ದರು ಆದರೆ ಇದೀಗ ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳು ಫೈನಲ್ ತಲುಪುವ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ, ಆದ ಕಾರಣ ಪ್ರತಿ ವಾರವೂ ಕೂಡ ಬಹಳ ಪೈಪೋಟಿಯಿಂದ ಕೂಡಿದ್ದು ಯಾರ್ಯಾರು ಹೊರಬರುತ್ತಾರೆ ಎಂಬುದರ ಕುರಿತು ಬಾರಿ ಚರ್ಚೆ ನಡೆಯುತ್ತಿದೆ.

ಇನ್ನು ಆಟಗಾರರು ಇತರ ಆಟಗಾರರ ಮೈನಸ್ ಪಾಯಿಂಟ್ ಗಳನ್ನು ಪ್ರೇಕ್ಷಕರ ಮುಂದೆ ಇರಿಸುವ ಮೂಲಕ ಹಾಗೂ ಪ್ರೇಕ್ಷಕರಿಗೆ ನಿಜವಾದ ಸ್ಪರ್ಧಿ ಯಾರು ಎಂಬುದನ್ನು ತಿಳಿಸಿಕೊಡುವ ಸಲುವಾಗಿ ತಮ್ಮದೇ ಆದ ರೀತಿಯಲ್ಲಿ ಆಟವಾಡುತ್ತಿದ್ದಾರೆ. ಇದನ್ನು ನೋಡಿದರೆ ಸಾಕು ಪೈಪೋಟಿ ಎಷ್ಟು ಹೆಚ್ಚಾಗಿದೆ ಎಂಬುದು ತಿಳಿದು ಬರುತ್ತದೆ. ಹೀಗಿರುವಾಗ ಮನೆಯಲ್ಲಿ ಮೊದಲಿನಿಂದಲೂ ಫೈನಲ್ ತಲುಪುವ ಸ್ಪರ್ಧಿ ಎಂದು ಹೆಸರು ಪಡೆದು ಕೊಂಡಿರುವ ಸ್ಪರ್ಧಿಯೊಬ್ಬ ರು ಏನು ಮಾಡದೇ ಇಷ್ಟು ದಿವಸ ಮನೆಯಲ್ಲಿ ಉಳಿದು ಕೊಂಡಿದ್ದಾರೆ ಎಂಬುದು ಪ್ರಶಾಂತ್ ಸಂಭರ್ಗಿ ಅವರ ವಾದವಾಗಿದೆ. ಈ ವಿಷಯದ ಕುರಿತು ಇಂದು ತಿಳಿಸುತ್ತೇವೆ, ಹಾಗೂ ಕೊನೆಯಲ್ಲಿ ಈ ವಿಷಯದ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ದಿವ್ಯ ಉರುದುಗ ರವರು ಮೊದಲ ಒಂದೆರಡು ವಾರಗಳಲ್ಲಿ ಬಹಳ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಯಾವುದೇ ಟಾಸ್ ಗೆದ್ದಿರಲಿಲ್ಲ, ಇದಾದ ಬಳಿಕ ಜೋಡಿ ಟಾಸ್ಕ್ ನಲ್ಲಿ ಅರವಿಂದ್ ರವರ ಜೊತೆ ಸೇರಿಕೊಂಡು ಗೆದ್ದಿದ್ದರು, ಹೀಗೆ ಮುಗಿದ ಬಳಿಕ ಒಂದು ಆರೋಗ್ಯದ ಕಾರಣ ಒಂದೆರಡು ವಾರ ಹಾಗೂ ಇನ್ನೊಂದು ಆಟದ ಮಧ್ಯದಲ್ಲಿ ಇಂಜುರಿ ಆದ ಕಾರಣ ಕೆಲವೊಂದು ಟಾಸ್ಕ್ ಗಳನ್ನು ಆಡಲು ಸಾಧ್ಯವಾಗಿಲ್ಲ, ಆದರೆ ಅರವಿಂದ್ ರವರ ಜೊತೆ ಇರುವ ಟಾಸ್ಕ್ ಗಳಲ್ಲಿ ಮಾತ್ರ ಇವರು ಗೆಲವು ಸಾಧಿಸಿದ್ದಾರೆ, ಉಳಿದ ಯಾವುದೇ ಟಾಸ್ಕ್ ನಲ್ಲಿ ಏಕಾಂಗಿಯಾಗಿ ಭಾಗಿಯಾಗಿ ಗೆದ್ದ ಯಾವುದೇ ಹಿಸ್ಟ್ರಿ ಕಾಣಿಸುತ್ತಿಲ್ಲ. ಆದಕಾರಣ ದಿವ್ಯ ಹುಡುಗರು ಕೇವಲ ಅರವಿಂದ್ರ ಅವರಿಂದಾಗಿ ಉಳಿದು ಕೊಂಡಿದ್ದಾರೆ ಎಂಬುದು ಪ್ರಶಾಂತ್ ರವರ ಹೇಳಿಕೆಯಾಗಿದೆ, ಜನರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಇದೇ ರೀತಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ