ವಿಷ್ಣು ಸರ್ ಅವರೇ ಬರೆದ ಕಥೆಯಲ್ಲಿ ಅವರೇ ನಾಯಕರಾಗಿ ನಟಿಸಲಿಲ್ಲ ಯಾಕೆ ಗೊತ್ತಾ ?? ಮನ ಮುಟ್ಟುವ ಕಥೆ ನೋಡಿ ಒಮ್ಮೆ.

ವಿಷ್ಣು ಸರ್ ಅವರೇ ಬರೆದ ಕಥೆಯಲ್ಲಿ ಅವರೇ ನಾಯಕರಾಗಿ ನಟಿಸಲಿಲ್ಲ ಯಾಕೆ ಗೊತ್ತಾ ?? ಮನ ಮುಟ್ಟುವ ಕಥೆ ನೋಡಿ ಒಮ್ಮೆ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ದಿಗ್ಗಜರಲ್ಲಿ ಹಲವಾರು ನಟರ ಹೆಸರು ಬಂದುಹೋಗುತ್ತದೆ. ಆದರೆ ಯಾವುದೇ ಶಿಫಾರಿಸ್ಸಿಲ್ಲದೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ನಂತರದ ದಿನಗಳಲ್ಲಿ ಕನ್ನಡಿಗರ ನೆಚ್ಚಿನ ಸಾಹಸಸಿಂಹ ನಾಗಿ ಮೆರೆದವರು ಮೈಸೂರಿನ ಮಾಣಿಕ್ಯ ಕನ್ನಡಿಗರ ಪ್ರೀತಿಗೆ ಸಂಪತ್ಕುಮಾರ್ ಆಗಿದ್ದವರು ವಿಷ್ಣುವರ್ಧನ್ ಆದರು. ಹೌದು ಸ್ನೇಹಿತರೆ ವಿಷ್ಣುವರ್ಧನ್ ರವರ ಸಹಾನುಭೂತಿ ಹಾಗೂ ಸಿಂಪಲ್ ವ್ಯಕ್ತಿತ್ವ ಕನ್ನಡ ಪ್ರೇಕ್ಷಕರ ಮನಗೆದ್ದ ಅವರನ್ನು ಆರಾಧಿಸುವ ಅಭಿಮಾನಿಗಳ ಬಳಗ ರಾಜ್ಯಾದ್ಯಂತ ಬೆಳದಿತ್ತು.

ಅಂದಿನ ಕಾಲದಲ್ಲೇ ನಾಗರಹಾವು ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಆಂಗ್ರಿ ಯಂಗ್ ಮ್ಯಾನ್ ಆಗಿ ಗುರುತಿಸಿಕೊಂಡವರು ನಮ್ಮ ನೆಚ್ಚಿನ ವಿಷ್ಣು ದಾದಾ. ವಿಷ್ಣುದಾದಾ ಎಂದರೆ ಸರಳ ವ್ಯಕ್ತಿತ್ವ ಹಾಗೂ ಅವರು ಎಲ್ಲರಿಗೂ ನೀಡುತ್ತಿದ್ದ ಅಂತಹ ಗೌರವ ಅವರ ಹೆಗ್ಗುರುತು ಎಂಬುದು ನಾವು ಹೇಳಬಹುದು. ವಿಷ್ಣು ದಾದಾ ರವರು ಮಹಿಳೆಯರಿಗೆ ನೀಡುತ್ತಿದ್ದಂತ ಅಗೌರವ ಅವರ ಮೇರು ವ್ಯಕ್ತಿತ್ವಕ್ಕೆ ನೀಡುವಂತಹ ಪ್ರಮುಖ ಉದಾಹರಣೆಯಾಗಿದೆ.

ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಅಂದಿನ ಕಾಲದಲ್ಲಿ ಕನ್ನಡ ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಚಿತ್ರರಂಗದಲ್ಲಿ ನಟಿಸಿ ಭಾರತ ಚಿತ್ರರಂಗದ ಫೀನಿಕ್ಸ್ ಎಂಬ ಪಟ್ಟವನ್ನು ಪಡೆದಂತಹ ಅಮೂಲ್ಯ ನಟ. ಕೇವಲ ತಮ್ಮ ನಟನೆಯ ಮೂಲಕ ಮಾತ್ರವಲ್ಲದೆ ತಮ್ಮ ಕಂಠದ ಮೂಲಕವೂ ಕನ್ನಡ ಪ್ರೇಕ್ಷಕರ ಮನಗೆದ್ದ ಅಂತಹ ಅಪರೂಪದ ಪ್ರತಿಭೆ ನಮ್ಮ ವಿಷ್ಣುವರ್ಧನ್. ಹೌದು ಸ್ನೇಹಿತರೆ ಅವರ ಧ್ವನಿಯಲ್ಲಿ ಮೂಡಿಬಂದಿರುವ ಅದೆಷ್ಟು ಹಾಡುಗಳು ಇಂದಿಗೂ ಕೂಡ ಕನ್ನಡ ಸಿನಿಪ್ರೇಕ್ಷಕರ ಹಾಗೂ ಸಂಗೀತಪ್ರಿಯರ ನೆಚ್ಚಿನ ಹಾಡಾಗಿವೆ ಹಾಗೂ ಎಲ್ಲರೂ ಅದನ್ನು ಮೆಚ್ಚಿದ್ದಾರೆ ಕೂಡ.

ಇನ್ನು ತಮ್ಮ ವಿಷ್ಣುವರ್ಧನ್ ರವರು ತಮ್ಮ ಅದ್ಭುತ ನಟನೆಯ ಮೂಲಕ ಕೇವಲ ಕನ್ನಡ ಪ್ರೇಕ್ಷಕರನ್ನು ಮಾತ್ರವಲ್ಲದೆ ಪರಭಾಷಾ ಪ್ರೇಕ್ಷಕರನ್ನು ಕೂಡ ತನ್ನೆಡೆಗೆ ಸೆಳೆಯುವಂತೆ ಮಾಡಿದ್ದಾರೆ. ಆದರೆ ನಿಮಗೆ ಗೊತ್ತಿರದ ಒಂದು ವಿಷಯವನ್ನು ನಾವು ಎಂದು ಹೇಳಲು ಹೊರಟಿದ್ದೇವೆ ಸ್ನೇಹಿತರೆ. ನಿಮಗೆ ಒಂದು ವಿಷಯ ಗೊತ್ತಾ ಸ್ನೇಹಿತರೆ ವಿಷ್ಣುವರ್ಧನ್ ರವರು ಒಂದು ಕಥೆಯನ್ನೂ ಬರೆದಿದ್ದರು ಆದರೆ ಆ ಕತೆಯಲ್ಲಿ ಅವರೇ ನಟಿಸಿರಲಿಲ್ಲ.

ಹೌದು ಸ್ನೇಹಿತರೆ ಈ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ ಬನ್ನಿ. ವಿಷ್ಣುವರ್ಧನ್ ರವರು ಕೇವಲ ನಾಯಕನಟನಾಗಿ ಸಂಗೀತಗಾರನಾಗಿ ಮಾತ್ರವಲ್ಲದೆ ಕಥೆ ಬರಹಗಾರರಾಗಿ ಕೂಡ ತಮ್ಮ ಪ್ರತಿಭೆಯ ಅನಾವರಣವನ್ನು ಕನ್ನಡ ಚಿತ್ರರಂಗದಲ್ಲಿ ತೋರ್ಪಡಿಸಿದ್ದಾರೆ. ಹೌದು ಸ್ನೇಹಿತರೆ 90ರ ದಶಕದಲ್ಲಿ ಅನಂತನಾಗ್ ಹಾಗೂ ಫಣಿರಾಮಚಂದ್ರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿದ್ದಂತೆ ಗಣೇಶನ ಮದುವೆ ಗೌರಿ ಗಣೇಶ ಹೀಗೆ ಗಣೇಶ ಸೀರಿಸ್ ಚಿತ್ರಗಳು ಪ್ರೇಕ್ಷಕರಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸಿತ್ತು.

ಈ ಹಿನ್ನೆಲೆಯಲ್ಲಿ ವಿಷ್ಣುವರ್ಧನ್ ರವರು ಒಂದು ಕಾಮಿಡಿ ಕಥೆಯ ಹಿನ್ನೆಲೆ ಉಳ್ಳಂತಹ ಕತೆ ಬರೆದು ಫಣಿರಾಮಚಂದ್ರ ದವರಿಗೆ ನೀಡಿದ್ದರು. ಈ ಕಥೆಯ ಆಧಾರವಾಗಿಟ್ಟುಕೊಂಡು ಗಣೇಶ ಐ ಲವ್ ಯು ಎಂಬ ಚಿತ್ರವನ್ನು ಫಣಿರಾಮಚಂದ್ರ ರವರು ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಅನಂತನಾಗ ಸಿತಾರ ಅವರಂತಹ ತಾರಾಬಳಗ ಇತ್ತು. ಈ ಚಿತ್ರದ ಮೂಲಕ ವಿಷ್ಣುವರ್ಧನ್ ರವರ ಕಥೆ ಬರಹದ ಪ್ರತಿಭೆಯೂ ಕೂಡಾ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲ್ಪಟ್ಟಿತು. ಈ ಚಿತ್ರ ಹೇಳಿಕೊಳ್ಳುವ ಅಷ್ಟರಮಟ್ಟಿಗೆ ಬಾಕ್ಸಾಫೀಸ್ ನಲ್ಲಿ ಯಶಸ್ಸು ಕಾಣದಿದ್ದರೂ ಸಹ ಪ್ರೇಕ್ಷಕರು ಈ ಚಿತ್ರದಲ್ಲಿ ಸಾಕಷ್ಟು ಮನರಂಜನೆಯನ್ನು ಕಂಡುಕೊಂಡಿದ್ದರು. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.