ಬಿಗ್ ಬಾಸ್ ಮನೆಯಲ್ಲಿ ಊಹಿಸದ ಘಟನೆ, ಬಿರುಕು ಬಿಟ್ಟ ಮಂಜು, ದಿವ್ಯ ಸಂಬಂಧ, ಮಹತ್ವದ ಘಟನೆಯಾದರೂ ಏನು ಗೊತ್ತೇ??

ಬಿಗ್ ಬಾಸ್ ಮನೆಯಲ್ಲಿ ಊಹಿಸದ ಘಟನೆ, ಬಿರುಕು ಬಿಟ್ಟ ಮಂಜು, ದಿವ್ಯ ಸಂಬಂಧ, ಮಹತ್ವದ ಘಟನೆಯಾದರೂ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ದಿಗಳು ಉಳಿದಿಕೊಳ್ಳಲು ಇದೀಗ ಕೊನೆ ಹಂತದಲ್ಲಿ ಸಿಕ್ಕ ಯಾವುದೇ ಅವಕಾಶವನ್ನು ಕೂಡ ಬಿಡಲು ಸಿದ್ಧವಾಗಿರುವುದಿಲ್ಲ. ಅದೆಷ್ಟೋ ಆಟಗಾರರ ಸಂಪೂರ್ಣ ಲೆಕ್ಕಾಚಾರಗಳು ಇದೀಗ ಬದಲಾಗಿ ಹೋಗಿವೆ. ಯಾಕೆಂದರೆ ಏನಾದ್ರು ಮಾಡಿ ಕೊನೆಯ ವರೆಗೂ ಉಳಿದು ಕೊಳ್ಳಬೇಕು ಎಂಬುದು ಎಲ್ಲರ ಲೆಕ್ಕಾಚಾರವಾಗಿದೆ. ಆದರೆ ಅದೇ ಸಮಯದಲ್ಲಿ ಕೆಲವರು ತಾನು ಉಳಿದುಕೊಂಡರೆ ಸಾಲದು ವಿನ್ನರ್ ಆಗಬೇಕು ಎಂಬ ಕನಸನ್ನು ಕೂಡ ಕಟ್ಟಿಕೊಂಡಿದ್ದಾರೆ.

ಸದ್ಯದ ಮಟ್ಟಿಗೆ ಅರವಿಂದ್ ಮಂಜು ಪಾವಗಡ ಹಾಗೂ ಪ್ರಶಾಂತ್ ಸಂಭರ್ಗಿ ರವರು ಮಾತ್ರ ಗೆಲ್ಲುವ ಸಾಧ್ಯತೆಗಳಿವೆ, ಇವೆರೆಲ್ಲರಿಗೂ ವೈಷ್ಣವಿ ರವರು ಉತ್ತಮ ಪೈಪೋಟಿ ನೀಡಬಹುದು. ಆದರೆ ದಿವ್ಯ ಉರುದುಗ ಹಾಗೂ ದಿವ್ಯ ಸುರೇಶ ಇವರಿಬ್ಬರ ಗೋಲ್ ಕೇವಲ ಫೈನಲ್ ವರೆಗೂ ಬರುವುದು ಮಾತ್ರ ಆಗಿದೆ. ಇಂದಿನ ಟ್ರೆಂಡ್ ಪ್ರಕಾರ ಇವರಿಬ್ಬರಲ್ಲಿ ಒಬ್ಬರು ಅಥವಾ ಇವರಿಬ್ಬರು ಕೊನೆಯ 5 ಸ್ಪರ್ದಿಗಳ ಸಾಲಿನಲ್ಲಿ ಮಾತ್ರ ಸ್ಥಾನ ಪಡೆಯಬಹುದು, ವಿನ್ನರ್ ಗಳಾಗಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದೇ ಸಮಯದಲ್ಲಿ ದಿವ್ಯ ಸುರೇಶ್ ರವರ ಆಟದ ವೈಖರಿ ಬದಲಾದಂತೆ ಕಾಣುತ್ತಿದೆ. ಹೌದು ಸ್ನೇಹಿತರೇ, ಇದೀಗ ದಿವ್ಯ ಸುರೇಶ್ ರವರ ಆಟದ ವೈಖರಿಯಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತಿದ್ದು ಬಿಗ್ ಬಾಸ್ ನ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಮಂಜು ಪಾವಗಡ ರವರು ದಿವ್ಯ ಸುರೇಶ್ ರವರಿಂದ ಅಂತರ ಕಾಯ್ದುಕೊಳ್ಳಲಿದ್ದಾರೆ ಎಂಬ ಮಾತನ್ನು ಮಂಜು ಆಡಿದ್ದರು. ಆದರೆ ಮನೆಯ ಒಳಗೆ ಹೋದ ಮೇಲೆ ಆ ರೀತಿಯ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ, ಆದರೆ ಈತನ್ಮದ್ಯೆ ಮಂಜು ಹಾಗೂ ದಿವ್ಯ ರವರ ನಡುವೆ ಪ್ರತಿ ಚಿಕ್ಕ ವಿಚಾರಗಳಿಗೂ ಕೂಡ ಅಸಮಾಧಾನ ವ್ಯಕ್ತವಾಗುತ್ತಿದ್ದು ದಿವ್ಯ ಸುರೇಶ್ ರವರು ಪ್ರಿಯಾಂಕಾ ರವರ ಬಳಿ ಮುಕ್ತವಾಗಿ ಈ ಕುರಿತು ಚರ್ಚೆ ನಡೆಸುತ್ತಿದ್ದಾರೆ,

ಮಂಜು ರವರ ಪಕ್ಕ ಕುಳಿತುಕೊಳ್ಳಲು ಕೂಡ ಆಲೋಚನೆ ಮಾಡಬೇಕಾದ ಪರಿಸ್ಥಿತಿ ಬಂದು ಬಿಟ್ಟಿದೆ ಎಂದು ಕಣ್ಣೀರು ಹಾಕಿದ್ದಾರೆ. ಇನ್ನು ಮುಂದೆ ಮಂಜು ರವರಿಂದ ಅಂತರ ಕಾಯ್ದುಕೊಳ್ಳುವುದಾಗಿ ನೆನ್ನೆಯು ಕೂಡ ತಿಳಿಸಿರುವ ದಿವ್ಯ ಸುರೇಶ್ ರವರು ಮಂಜು ರವರು ಮನೆಯ ಹೊರಗಡೆ ಮಾಡಬೇಕು ಎಂದುಕೊಂಡ ಕೆಲಸವನ್ನು ದಿವ್ಯ ಸುರೇಶ್ ರವರು ಇದೀಗ ಮಾಡುತ್ತಿದ್ದರ, ಮಂಜು ಅವರಿಂದ ಅಂತರ ಕಾಯ್ದುಕೊಳ್ಳಲಿದ್ದಾರೆ. ಇದರಿಂದ ಯಾರಿಗೆ ಲಾಭವು ಅಥವಾ ಯಾರಿಗೆ ನಷ್ಟ ಎಂಬುದು ತಿಳಿಯದಂತಾಗಿದೆ. ಒಟ್ಟಿನಲ್ಲಿ ದಿವ್ಯ ಸುರೇಶ್ ರವರ ಈ ನಡೆ ಮಂಜು ಹಾಗೂ ದಿವ್ಯ ರವರ ಅಭಿಮಾನಿಗಳನ್ನು ಲೆಕ್ಕಾಚಾರಗಳ ನಡುವೆ ಬದಲಾವಣೆ ಸೃಷ್ಟಿಸುತ್ತದೆ, ಆದ ಕಾರಣ ವಿನ್ನರ್ ಸ್ಥಾನಕ್ಕೆ ಮಂಜು ತಲುಪಿ ಕಿರೀಟ ಹಿಡಿಯುತ್ತಾರೆಯೇ? ದಿವ್ಯ ಅಭಿಮಾನಿಗಳ ಬೆಂಬಲವಿಲ್ಲದೆ ಇದು ಸಾಧ್ಯವೇ ಎಂಬ ಪ್ರಶ್ನೆಗಳು ಸೃಷ್ಟಿಯಾಗಿವೆ, ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.