ಕೊನೆಗೂ ಹೊರಬಿತ್ತು ಟಿ20 ವಿಶ್ವಕಪ್ ಗುಂಪಿನ ಮಾಹಿತಿ – ಭಾರತದ ಎದುರಾಳಿಗಳು ಯಾರು ಯಾರು ಗೊತ್ತಾ??

ಕೊನೆಗೂ ಹೊರಬಿತ್ತು ಟಿ20 ವಿಶ್ವಕಪ್ ಗುಂಪಿನ ಮಾಹಿತಿ – ಭಾರತದ ಎದುರಾಳಿಗಳು ಯಾರು ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಹಲವಾರು ಬೆಳವಣಿಗೆಗಳ ನಂತರವೂ ಟಿ 20 ವಿಶ್ವಕಪ್ ಈ ವರ್ಷ ನಡೆಯುವುದು ಖಚಿತವಾಗಿದೆ. ಮೊದಲು ಭಾರತದಲ್ಲಿ ನಡೆಯಬೇಕಿದ್ದ ವಿಶ್ವಕಪ್ ಪಂದ್ಯಾವಳಿಗಳನ್ನ ಇತ್ತಿಚಿಗಷ್ಟೇ ಬಿಸಿಸಿಐ ದುಬೈ,ಅಬುಧಾಭಿ ಮತ್ತು ಯು.ಎ.ಇ ಗಳಿಗೆ ಸ್ಥಳಾಂತರಿಸಿತ್ತು. ಈ ವರ್ಷದ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಟಿ20 ಕ್ರಿಕೇಟ್ ಹಬ್ಬ ನಡೆಯುವುದು ಖಚಿತವಾಗಿದೆ.

ಈ ನಡುವೆ ವಿಶ್ವಕಪ್ ನಲ್ಲಿ ಪಾಲ್ಗೊಳ್ಳುವ ತಂಡಗಳನ್ನ ಎರಡು ಗುಂಪುಗಳಾಗಿ ವಿಂಗಡಿಸಿರುವ ಐಸಿಸಿ ತಲಾ ಆರು ತಂಡಗಳುಳ್ಳ ಎರಡು ಗುಂಪುಗಳನ್ನ ಪ್ರಕಟಿಸಿದೆ. ಗ್ರೂಪ್ 1 ರಲ್ಲಿ ವೆಸ್ಟ್ ಇಂಡಿಸ್, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ತಂಡಗಳು ಇದ್ದು ಉಳಿದೆರೆಡು ತಂಡಗಳು ಅರ್ಹತಾ ಪಂದ್ಯಗಳಿಂದ ಗೆದ್ದು ಬರಬೇಕಾಗಿದೆ. ಇನ್ನು ಗ್ರೂಪ್ 2 ರಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಹಾಗೂ ಅಘಘಾನಿಸ್ತಾನ ತಂಡಗಳು ಸ್ಥಾನ ಪಡೆದಿವೆ. ಅಲ್ಲಿಗೆ ಭಾರತದ ಬದ್ದವೈರಿ ಆದ ಪಾಕಿಸ್ತಾನದ ಜೊತೆ ಭಾರತ ಲೀಗ್ ಹಂತದಲ್ಲಿಯೇ ಸ್ಪರ್ಧಿಸುವುದು ಖಚಿತವೇನಿಸಿದೆ. ಅಂತರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತ ಪಾಕಿಸ್ತಾನ ವಿರುದ್ದ ಅಜೇಯ ದಾಖಲೆಯನ್ನ ಇಟ್ಟುಕೊಂಡಿದೆ.

ಇನ್ನು ವಿಶ್ವ ಟಿ20 ಅಂಕಗಳಲ್ಲಿ ಕಡಿಮೆ ಅಂಕಗಳಿಸಿರುವ 8 ತಂಡಗಳನ್ನ ಪರಸ್ಪರ ಎರಡು ತಂಡಗಳಾಗಿ ಮಾಡಿದೆ. ಮೊದಲ ಗುಂಪಿನಲ್ಲಿ ಶ್ರೀಲಂಕಾ,ನೆದರ್ ಲ್ಯಾಂಡ್, ಐರ್ಲೆಂಡ್,ನಮೀಬಿಯಾ ಸ್ಥಾನ ಪಡೆದಿದ್ದರೇ, ಮತ್ತೊಂದು ಗುಂಪಿನಲ್ಲಿ ಬಾಂಗ್ಲಾದೇಶ, ಸ್ಕಾಟ್ಲ್ಯಾಂಡ್, ಪಪೂವಾ ನೂಗಿನಿಯಾ,ಓಮಾನ್ ದೇಶಗಳು ಸ್ಥಾನಗಳಿಸಿವೆ. ಈ ಗುಂಪಿನ ಟಾಪ್ 2 ತಂಡಗಳು ಮುಖ್ಯ ಗುಂಪಿನಲ್ಲಿ ಟಾಪ್ – 8 ತಂಡಗಳ ಜೊತೆ ಸೆಣಸಲಿವೆ. ತಂಡಗಳ ಹಂಚಿಕೆಯ ಗುಂಪು ಹೀಗಿದೆ. ಗುಂಪು 1 – ಆಸ್ಟ್ರೇಲಿಯಾ, ವೆಸ್ಟ್ ಇಂಡಿಸ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಎ1, ಬಿ2. ಗುಂಪು 2 – ಭಾರತ,ಪಾಕಿಸ್ತಾನ,ನ್ಯೂಜಿಲೆಂಡ್, ಅಫಘಾನಿಸ್ತಾನ, ಬಿ1,ಎ2. ಅರ್ಹತಾ ಸುತ್ತಿನ ಗುಂಪುಗಳು. ಎ ಗುಂಪು – ಶ್ರೀಲಂಕಾ, ಐರ್ಲೆಂಡ್,ನೆದರಲ್ಯಾಂಡ್, ನಮೀಬಿಯಾ. ಬಿ ಗುಂಪು – ಬಾಂಗ್ಲಾದೇಶ,ಸ್ಕಾಟ್ಲೆಂಡ್,ಪಪೂವಾ ನೂಗಿನಿಯಾ,ಓಮನ್. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.