ನಾಮಿನೇಟ್ ಆದ ನಾಲ್ವರಲ್ಲಿ ಮನೆಯಿಂದ ಹೊರ ಹೋಗುವ ಸ್ಪರ್ಧಿ ಯಾರು ಗೊತ್ತೇ?? ಈ ವಾರ ಎಲಿಮಿನೇಷನ್ ಫಿಕ್ಸ್. ಯಾರು ಗೊತ್ತೇ??
ನಾಮಿನೇಟ್ ಆದ ನಾಲ್ವರಲ್ಲಿ ಮನೆಯಿಂದ ಹೊರ ಹೋಗುವ ಸ್ಪರ್ಧಿ ಯಾರು ಗೊತ್ತೇ?? ಈ ವಾರ ಎಲಿಮಿನೇಷನ್ ಫಿಕ್ಸ್. ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಬಹುಶಹ ಈಗಾಗಲೆ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ನೀಡಿದ ಟಾಸ್ಕ್ ನಲ್ಲಿ ಸೋಲುವ ಮೂಲಕ ವಿಜಯಯಾತ್ರೆ ತಂಡದ ನಾಲ್ವರು ಆಟಗಾರರು ನಾಮಿನೇಷನ್ ಆಗಿದ್ದಾರೆ. ಪ್ರೇಕ್ಷಕರು ನಿರ್ಧಾರ ಮಾಡಿದಾಗ ಮಾತ್ರ ಈ ನಾಲ್ಕು ಸ್ಪರ್ಧೆಗಳಲ್ಲಿ ಮೂರು ಜನ ಮನೆಯಿನ್ದ ಹೊರಹೋಗುತ್ತಾರೆ, ಉಳಿದ ಒಬ್ಬರು ಮನೆಯಿಂದ ಹೊರಗಡೆ ಬರಲೇ ಬೇಕಾಗುತ್ತದೆ. ಇನ್ನು ಈ ಸಮಯದಲ್ಲಿ ನಾಮಿನೇಷನ್ ಆಗಿರುವ ನಾಲ್ಕು ಜನರು ಕೂಡ ಬಾರಿ ಜನಪ್ರಿಯತೆಯನ್ನು ಹೊಂದಿರುವ ಕಾರಣ ಯಾರು ಮನೆಯಿಂದ ಹೋಗಬಹುದು ಎಂಬ ಕುತೂಹಲ ಎಲ್ಲರಿಗೂ ಕಾಡತೊಡಗಿದೆ.
ಒಂದು ವೇಳೆ ನಿಮಗೂ ಕೂಡ ಲೆಕ್ಕಾಚಾರಗಳು ತಲೆಯಲ್ಲಿ ಓಡುತ್ತಿದ್ದರೆ ಬನ್ನಿ ಖಂಡಿತ ನಾವು ಸಾಮಾಜಿಕ ಜಾಲತಾಣಗಳಲ್ಲಿ ಜನರ ಮಾತಿನಿಂದ ಕೇಳಿ ಬರುತ್ತಿರುವಂತೆ ಯಾವ ಆಟಗಾರರು ಮನೆಯಿಂದ ಹೊರ ಹೋಗಬಹುದು ಹಾಗೂ ಯಾವ ಆಟಗಾರರು ಮನೆಯಲ್ಲಿ ಉಳಿದು ಕೊಳ್ಳಬಹುದು ಎಂಬುದಕ್ಕೆ ಉತ್ತರ ನೀಡುತ್ತೇವೆ. ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಎರಡು ವಾರಗಳ ಹಿಂದೆ ಪ್ರಶಾಂತ ಸಂಬರ್ಗಿ ರವರು ಅಕ್ಷರಸಹ ಜನರ ಕಣ್ಣಲ್ಲಿ ಹೀರೋ ಆಗಿಬಿಟ್ಟಿದ್ದಾರೆ.
ಪ್ರಶಾಂತ್ ಸಂಬರ್ಗಿ ರವರು ಫೈನಲ್ ತಲುಪುವುದು ಖಚಿತ ಎಂದು ಹೇಳಲಾಗುತ್ತಿರುವ ಕಾರಣ ಈ ವಾರ ಪ್ರಶಾಂತ್ ರವರಿಗೆ ಮನೆಯಿಂದ ಹೋಗುವ ಯಾವುದೇ ಸಾಧ್ಯತೆಯೇ ಇಲ್ಲ, ಇನ್ನೂ ವೈಷ್ಣವಿ ರವರಂತೂ ವಿಜೇತ ರಾಗುತ್ತಾರೆ ಅಥವಾ ಖಂಡಿತವಾಗಲೂ ಫೈನಲ್ ಮೂರು ಜನರಲ್ಲಿ ವೈಷ್ಣವಿ ರವರು ಸ್ಥಾನ ಪಡೆಯಬೇಕು ಎಂಬ ಲೆಕ್ಕಾಚಾರಗಳು ಹಾಗೂ ವೈಷ್ಣವಿ ರವರ ಕುರಿತು ಎಲ್ಲರಿಗೂ ಒಳ್ಳೆಯ ಅಭಿಪ್ರಾಯ ಇರುವುದರಿಂದ ಪ್ರಶಾಂತ್ ಸಂಬರ್ಗಿ ಹಾಗೂ ವೈಷ್ಣವಿ ರವರು ಸಂಪೂರ್ಣ ಸೇಫ್ ಆಗಿದ್ದಾರೆ.
ಇನ್ನುಳಿದಿರುವುದು ಪ್ರಿಯಾಂಕಾ ತಿಮ್ಮೇಶ್ ಹಾಗೂ ಶುಭಾ ಪೂಂಜಾ ರವರು ಮಾತ್ರ ಇವರಿಬ್ಬರಲ್ಲಿ ಒಬ್ಬರು ಮನೆಗಿಂತ ಹೋಗುವುದು ಬಹುತೇಕ ಖಚಿತವಾಗಿದೆ, ಇದೇ ಸಮಯದಲ್ಲಿ ಶುಭ ಪೂಂಜಾ ರವರು ಯಾವುದೇ ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ಹೆಚ್ಚಾಗಿ ನೀಡದೆ ಇದ್ದರೂ ಕೂಡ ಅವರ ಮುಗ್ದ್ಸ್ ಮನಸ್ಸಿಗೆ ಕಳೆದ ಹಲವಾರು ವಾರಗಳಲ್ಲಿ ಪ್ರೇಕ್ಷಕರು ಭಾರಿ ಸಂಖ್ಯೆಯಲ್ಲಿ ಮೆಚ್ಚಿ ಮನೆಯಲ್ಲಿ ಉಳಿಸಿರುವ ಕಾರಣ ಪ್ರಿಯಂಕ ತಿಮ್ಮೇಶ್ ಅವರು ಈ ಬಾರಿ ಹೊರ ಹೋಗುವ ಸಾಧ್ಯತೆ ಹೆಚ್ಚಾಗಿದೆ ಆದರೆ ಇತ್ತೀಚಿಗಷ್ಟೇ ಪ್ರಿಯಾಂಕಾ ರವರು ತಮ್ಮನ್ನು ತಾವು ಹೆಚ್ಚು ತೊಡಗಿಸಿಕೊಳ್ಳುತ್ತಿರುವ ಕಾರಣ ಶುಭಪೂಂಜ ಹಾಗೂ ಪ್ರಿಯಂಕ ತಿಮ್ಮೇಶ್ ರವರ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಇನ್ನುಳಿದಂತೆ ಈ ನಾಲ್ಕು ಜನರಲ್ಲಿ ಯಾರು ಮನೆಯಿಂದ ಹೊರಗೆ ಹೋಗಬೇಕು ಎಂಬುದನ್ನು ನೀವು ಕೂಡ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.