ಒಂದಕ್ಕಿಂತಲೂ ಹೆಚ್ಚು ಬಾರಿ ಮದುವೆಯಾದ ಕನ್ನಡದ ಟಾಪ್ ನಟಿ ಮಣಿಯರು ಯಾರ್ಯಾರು ಗೊತ್ತೇ??
ಒಂದಕ್ಕಿಂತಲೂ ಹೆಚ್ಚು ಬಾರಿ ಮದುವೆಯಾದ ಕನ್ನಡದ ಟಾಪ್ ನಟಿ ಮಣಿಯರು ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಜೀವನದಲ್ಲಿ ಮದುವೆ ಎನ್ನುವುದು ಒಂದು ಸುಂದರ ಕ್ಷಣ. ಅದಕ್ಕಾಗಿ ಎರಡು ಮನಸುಗಳು ಒಂದಾಗುವುದು ಮುಖ್ಯ. ಈಗಾಗಲೇ ಅದೆಷ್ಟೋ ಮದುವೆಗಳು ವಯಸ್ಸು ಮುಖ್ಯವಲ್ಲ ಮನಸ್ಸು ಮುಖ್ಯ ಎಂಬುದನ್ನು ಸಾಬೀತುಪಡಿಸಿದೆ. ಆದರೆ ಇಂದಿನ ವಿಷಯದಲ್ಲಿ ನಾವು ಹೇಳಹೊರಟಿರುವುದು ಕೆಲವು ಕನ್ನಡ ನಟಿಯರ ಮದುವೆ ಕುರಿತಂತೆ.
ಹೌದು ಸ್ನೇಹಿತರೇ ಮಾಮೂಲಿ ಮದುವೆಯೆಂದರೆ ಅಲ್ಲಿ ಸಂತೋಷ ಸಡಗರ ಇದ್ದೇ ಇರುತ್ತದೆ. ಇನ್ನೂ ಅದೆಷ್ಟು ಅಭಿಮಾನಿಗಳನ್ನು ಹೊಂದಿರುವ ನಟಿಯರ ಮದುವೆ ಅಂದ್ರೆ ಕೇಳಬೇಕ ಅಲ್ಲಿ ಸಂತೋಷ ಸಡಗರದ ನಡುವೆ ಸಾಕಷ್ಟು ಸುದ್ದಿ-ಸಮಾಚಾರಗಳು ಕೂಡ ಇದ್ದೇ ಇರುತ್ತದೆ. ಹೌದು ಸ್ನೇಹಿತರ ನಾನು ಇಂದಿನ ವಿಷಯದಲ್ಲಿ ಒಂದಕ್ಕಿಂತ ಹೆಚ್ಚು ಮದುವೆಯಾಗಿರುವ ನಟಿಮಣಿಯರ ಕುರಿತಂತೆ ಹೇಳಲು ಹೊರಟಿದ್ದೇವೆ. ವಿಶೇಷ ಸೂಚನೆ: ಪ್ರತಿಯೊಬ್ಬರ ವೈಯಕ್ತಿಕ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಈ ಲೇಖನ ಕೇವಲ ಮಾಹಿತಿ ತಿಳಿಸುವ ಉದ್ದೇಶದಿಂದ ಕೂಡಿದ್ದು ಯಾರನ್ನು ಕೂಡ ವೈಯಕ್ತಿಕವಾಗಿ ಬೆಟ್ಟು ಮಾಡಿ ತೋರಿಸುವ ಅಥವಾ ಅವರ ಭಾವನೆಗಳನ್ನು ಪ್ರಶ್ನಿಸುವ, ನೋ’ಯಿಸುವ ಯಾವುದೇ ಉದ್ದೇಶ ನಮಗೆ ಇರುವುದಿಲ್ಲ.
ಶೃತಿ ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ತಮ್ಮ ಭಾವನಾತ್ಮಕ ನಟನೆ ಹಾಗೂ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿರುವಂತಹ ಪ್ರತಿಭಾನ್ವಿತ ನಟಿ ಶ್ರುತಿ. ಶೃತಿ ಹಿಂದೆ ಎಸ್ ಮಹೇಂದರ್ ಎನ್ನುವ ಕನ್ನಡ ಚಿತ್ರರಂಗದ ಮೇರು ನಿರ್ದೇಶಕರನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರು ಎಷ್ಟು ಅನ್ಯೋನ್ಯವಾಗಿದ್ದರು ಎಂದರೆ ಕನ್ನಡ ಚಿತ್ರರಂಗವೇ ಮೆಚ್ಚಿತ್ತು. ಹನ್ನೊಂದು ವರ್ಷಗಳ ಸುಖ ದಾಂಪತ್ಯದ ನಂತರ 2009 ರಲ್ಲಿ ಈ ಜೋಡಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿತು. ನಂತರ ಮತ್ತೆ ಶೃತಿಯವರು 2013 ರಲ್ಲಿ ಖ್ಯಾತ ಪತ್ರಕರ್ತರಾಗಿರುವ ಚಕ್ರವರ್ತಿ ಚಂದ್ರಚುಡ್ ರವರನ್ನು ಕೊಲ್ಲೂರಿನ ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾದರು. ನಂತರ ಕೆಲವೇ ತಿಂಗಳುಗಳಲ್ಲಿ ಈ ಜೋಡಿ ಕೂಡ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿತು.
ಸುಧಾರಾಣಿ ರವರು ಅತಿ ಚಿಕ್ಕ ವಯಸ್ಸಿಗೇ ಚಿತ್ರರಂಗಕ್ಕೆ ಕಾಲಿಟ್ಟಂತಹ ಸುಧಾರಾಣಿ ರವರು ಅತಿ ಕಡಿಮೆ ಸಮಯದಲ್ಲಿ ಪ್ರೇಕ್ಷಕರ ಮನಗೆದ್ದ ಅಂತಹ ಪ್ರತಿಭಾನ್ವಿತ ನಟಿ. ಮೊದಲಿಗೆ ಅಮೆರಿಕ ಮೂಲದ ಸಂಜಯ್ ಎಂಬ ಡಾಕ್ಟರನ್ನು ಮದುವೆಯಾದಂತಹ ಸುಧಾರಾಣಿ ಯವರು ಕೇವಲ ಐದು ವರ್ಷಗಳ ಸಮಯದಲ್ಲಿ ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿದರು. ನಂತರ ಗೋವರ್ಧನ್ ಎಂಬುವವರನ್ನು 2001 ರಲ್ಲಿ ಮದುವೆಯಾದರು. ಗೋವರ್ಧನ್ ಮೂಲತಹ ಸುಧಾರಾಣಿ ಅವರ ಸಂಬಂಧಿಕ ವರ್ಗದಲ್ಲಿ ಇದ್ದವರು.
ರಾಧಿಕಾ ಮಂಗಳೂರು ಮೂಲದ ರಾಧಿಕಾ ಮೊದಲಿಗೆ 14 ವರ್ಷದಲ್ಲಿ ಇರಬೇಕಾದರೆ ಒಬ್ಬರನ್ನು ಮದುವೆಯಾಗಿದ್ದರು. ನಂತರ ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ ಏಕೆಂದರೆ ಅವರ ಮೊದಲ ಪತಿ ಹೃದಯಾಘಾತದಲ್ಲಿ ಇಹಲೋಕ ತ್ಯಜಿಸಿದರು. ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯ ನಟಿಯರಾಗಿ ಬಹು ಬೇಡಿಕೆಯ ನಟಿಯಾಗಿ ಕಾಣಿಸಿಕೊಂಡ ಇವರು ಮುಂದಿನ ದಿನಗಳಲ್ಲಿ ಕುಮಾರಸ್ವಾಮಿಯವರನ್ನು ಎರಡನೇ ವಿವಾಹವಾಗುತ್ತಾರೆ.
ಅನುಪ್ರಭಾಕರ್ ಆ ಕಾಲದಲ್ಲಿಯೇ ಎಂತಹ ಗ್ಲಾಮರ್ ಪಾತ್ರಗಳಾಗಲಿ ಅಥವಾ ಸಂಸ್ಕಾರಯುತ ಪಾತ್ರವಾಗಲೀ ಎರಡನ್ನು ಕೂಡ ನಿಭಾಯಿಸಬಲ್ಲ ಅಂತಹ ಚಾತುರ್ಯ ಉಳ್ಳಂತಹ ಪ್ರತಿಭಾನ್ವಿತ ನಟಿ ಅನು ಪ್ರಭಾಕರ್. ಮೊದಲಿಗೆ ನಟಿ ಜಯಂತಿ ಅವರ ಮಗ ಕೃಷ್ಣಕುಮಾರ್ ಎಂಬುವವರನ್ನು ಮದುವೆಯಾಗಿದ್ದ ಇವರು ನಂತರದ ದಿನಗಳಲ್ಲಿ ಇವರಿಬ್ಬರ ನಡುವೆ ಮುಡಿ ಬಂದಂತಹ ಭಿನ್ನಾಭಿಪ್ರಾಯಗಳಿಂದಾಗಿ ವಿವಾಹ ವಿಚ್ಛೇದನವನ್ನು ನೀಡಿದರು. ನಂತರ ನಟ ರಘು ಮುಖರ್ಜಿ ಅವರನ್ನು ಎರಡನೇ ಮದುವೆಯಾದರು. ಈಗ ಈ ಜೋಡಿ ಸುಖ ಶಾಂತಿಯಿಂದ ಸಂಸಾರ ಮಾಡಿಕೊಂಡಿದೆ.
ನೋಡಿದ್ರಲ್ಲ ಸ್ನೇಹಿತರೆ ಕನ್ನಡ ಚಿತ್ರರಂಗದ ಯಾವೆಲ್ಲ ನಟಿಯರು ಎರಡು ಮದುವೆಯಾಗಿದ್ದಾರೆ ಎಂಬುದನ್ನು ನಿಮಗೆ ಸಂಪೂರ್ಣ ವಿವರವಾಗಿ ತಿಳಿಸಿದ್ದೇವೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ ಹಾಗೂ ನಿಮ್ಮ ನೆಚ್ಚಿನ ನಟಿ ಯಾರೆಂಬುದನ್ನು ಕಾಮೆಂಟ್ ಮಾಡಿ.