ಭಾರತೀಯ ಭವಿಷ್ಯದ ಮೂರು ಆಟಗಾರರನ್ನು ಹೆಸರಿಸಿದ ಸುರೇಶ ರೈನಾ, ಆರ್ಸಿಬಿ ತಂಡದವರಿಗೂ ಸ್ಥಾನ, ಯಾರ್ಯಾರು ಗೊತ್ತೇ??

ಭಾರತೀಯ ಭವಿಷ್ಯದ ಮೂರು ಆಟಗಾರರನ್ನು ಹೆಸರಿಸಿದ ಸುರೇಶ ರೈನಾ, ಆರ್ಸಿಬಿ ತಂಡದವರಿಗೂ ಸ್ಥಾನ, ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸುರೇಶ್ ರೈನಾ ಭಾರತ ಕ್ರಿಕೇಟ್ ಕಂಡ ಶ್ರೇಷ್ಠ ಹಾಗೂ ನತದೃಷ್ಠ ಆಟಗಾರ ಎಂದು ಹೇಳಬಹುದು. ಉತ್ತಮ ಫೀಲ್ಡರ್, ವಿಕೇಟ್ ಟೇಕಿಂಗ್ ಬೌಲರ್, ಮಧ್ಯಮ ಕ್ರಮಾಂಕದ ಉತ್ತಮ ಬ್ಯಾಟ್ಸಮನ್ ಆಗಿದ್ದರೂ, ನಿರಂತರವಾಗಿ ಫಾರ್ಮ್ ನಲ್ಲಿ ಇಲ್ಲದೇ ಇದ್ದದ್ದು ರೈನಾಗೆ ಟೀಂ ಇಂಡಿಯಾದಲ್ಲಿ ಹೇಳಿಕೊಳ್ಳುವಂತಹ ಸ್ಥಾನ ಸಿಗಲಿಲ್ಲ. ಧೋನಿ ಕೃಪೆಯಿಂದ ಸ್ಥಾನ ಸಿಕ್ಕರೂ ರೈನಾ ಅದನ್ನ ಉಳಿಸಿಕೊಳ್ಳಲು ಯಶಸ್ವಿಯಾಗಲಿಲ್ಲ.

ಇತ್ತಿಚೆಗಷ್ಟೇ ಅಂತರಾಷ್ಟ್ರೀಯ ಕ್ರಿಕೇಟ್ ಗೆ ನಿವೃತ್ತಿ ಹೇಳಿರುವ ಸುರೇಶ್ ರೈನಾ ಈಗ ಮನಬಿಚ್ಚಿ ಮಾತನಾಡಿದ್ದಾರೆ. ಸದ್ಯ ಭಾರತ ತಂಡದ ಮೂವರು ಯುವ ಆಟಗಾರರ ಪ್ರತಿಭೆಗೆ ಫಿದಾ ಆಗಿದ್ದಾರೆ. ಈ ಆಟಗಾರರು ಭವಿಷ್ಯದ ಭಾರತ ತಂಡದ ಪ್ರಮುಖ ಆಸ್ತಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಮೂವರು ಆಟಗಾರರು ನನ್ನ ಹೃದಯವನ್ನು ಗೆದ್ದಿದ್ದಾರೆ ಎಂದು ಮನತುಂಬಿ ಶ್ಲಾಘಿಸಿದ್ದಾರೆ. ಬನ್ನಿ ಆ ಮೂವರು ಯುವ ಆಟಗಾರರು ಯಾರು ಎಂದು ತಿಳಿದುಕೊಳ್ಳೋಣ.

ಮೊದಲನೆಯದಾಗಿ ದೇವದತ್ ಪಡಿಕಲ್ – ಕರ್ನಾಟಕದ 20 ವರ್ಷ ವಯಸ್ಸಿನ ಈ ಏಡಗೈ ಬ್ಯಾಟ್ಸಮನ್ ಸಾಮರ್ಥ್ಯಕ್ಕೆ ರೈನಾ ಫಿದಾ ಆಗಿದ್ದಾರೆ. ಐಪಿಎಲ್ ನಲ್ಲಿ ಶತಕ ಸಿಡಿಸಿ ಮಿಂಚಿರುವ ಪಡಿಕ್ಕಲ್ ಭಾರತದ ಮ್ಯಾಥೂ ಹೇಡನ್ ಎಂದು ಬಣ್ಣಿಸಿದ್ದಾರೆ. ಇನ್ನು ಎರಡನೆಯದಾಗಿ ಋತುರಾಜ್ ಗಾಯಕ್ವಾಡ್ – ಕಲಾತ್ಮಕ ಓಪನಿಂಗ್ ಬ್ಯಾಟ್ಸಮನ್ ಋತುರಾಜ್ ಬಗ್ಗೆಯೂ ರೈನಾ ಹಾಡಿ ಹೊಗಳಿದ್ದಾರೆ. ಸಿ.ಎಸ್.ಕೆ ತಂಡದಲ್ಲಿ ಅವರ ಜೊತೆ ಆಡಿದ್ದೆನೆ. ಅವರು ಭವಿಷ್ಯದ ಭಾರತ ತಂಡದ ಆಸ್ತಿ ಎಂದಿದ್ದಾರೆ. ಇನ್ನು ಕೊನೆಯದಾಗಿ ಅಕ್ಷರ್ ಪಟೇಲ್ – ಏಡಗೈ ಸ್ಪಿನ್ ಮಾಂತ್ರಿಕ ಅಕ್ಷರ್ ಪಟೇಲ್ ಬಗ್ಗೆಯೂ ರೈನಾ ಉತ್ತಮ ಮಾತನಾಡಿದ್ದಾರೆ. ಪಂದ್ಯ ಗೆಲ್ಲಿಸಿಕೊಡಬಲ್ಲ ಬೌಲರ್ ಎಂದು ಬಣ್ಣಿಸಿದ್ದಾರೆ. ಸುರೇಶ್ ರೈನಾರವರ ಈ ಆಯ್ಕೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.