ಉಮಾಪತಿ ದರ್ಶನ್ ರವರ ವಿಚಾರ ತಣ್ಣಗಾದ ತಕ್ಷಣ ಭರ್ಜರಿ ಸಿಹಿ ಸುದ್ದಿ ನೀಡಿದ ದರ್ಶನ್, ಅಧಿಕೃತವಾಯಿತು ಮುಂದಿನ ಸಿನಿಮಾ ಯಾವುದು ಗೊತ್ತಾ??
ಉಮಾಪತಿ ದರ್ಶನ್ ರವರ ವಿಚಾರ ತಣ್ಣಗಾದ ತಕ್ಷಣ ಭರ್ಜರಿ ಸಿಹಿ ಸುದ್ದಿ ನೀಡಿದ ದರ್ಶನ್, ಅಧಿಕೃತವಾಯಿತು ಮುಂದಿನ ಸಿನಿಮಾ ಯಾವುದು ಗೊತ್ತಾ??
ನಮಸ್ಕಾರ ಸ್ನೇಹಿತರೇ ಕೆಲವು ದಿನಗಳಿಂದ ನೀವು ಮಾಧ್ಯಮಗಳಲ್ಲಿ ನೋಡಿರಬಹುದು, ದರ್ಶನ್ ಹಾಗೂ ಅರುಣಾಕುಮಾರಿ ಹಾಗೂ ಉಮಾಪತಿ ರವರ ನಡುವಿನ ವಿಚಾರಗಳು ಭಾರಿ ಸದ್ದು ಮಾಡುತ್ತಿವೆ. ಇಂದು ಅಧಿಕೃತವಾಗಿ ಈ ಎಲ್ಲಾ ವಿಚಾರಗಳಿಗೂ ಹಾಗೂ ಚರ್ಚೆಗಳಿಗೆ ದರ್ಶನ್ ರವರು ನಿಮಗೆಲ್ಲರಿಗೂ ತಿಳಿದಿರುವಂತೆ ಈ ವಿಷಯವನ್ನು ಇಲ್ಲಿಗೆ ಎಲ್ಲರೂ ಬಿಡುತ್ತಿದ್ದೇವೆ ನೀವು ಕೂಡ ಬಿಟ್ಟುಬಿಡಿ ಎಂದು ಮನವಿ ಮಾಡಿದ್ದಾರೆ. ಇದಾದ ಕೆಲವೇ ಕೆಲವು ಗಂಟೆಗಳಲ್ಲಿ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿರುವ ದರ್ಶನ್ ಅವರು ತಮ್ಮ ಮುಂದಿನ ಸಿನಿಮಾದ ಘೋಷಣೆ ಮಾಡಿ ಬಿಟ್ಟಿದ್ದಾರೆ.
ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಶಿವರಾತ್ರಿ ಪ್ರಯುಕ್ತ ಮಾರ್ಚ್ 11ರಂದು ರಾಬರ್ಟ್ ಸಿನಿಮಾ ಬಿಡುಗಡೆಯಾಗಿದ್ದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡಿತ್ತು. ಇದಾದ ನಂತರ ದರ್ಶನ್ ಅವರ ಸಿನಿಮಾ ಯಾವ ರೀತಿ ಇರಲಿದೆ ಎಂದು ಭಾರೀ ಕುತೂಹಲ ಮೂಡಿಸಿತ್ತು. ಅದ್ಯಾಕೋ ತಿಳಿದಿಲ್ಲ ದರ್ಶನ್ ಅವರು ಈ ಕುರಿತು ಯಾವುದೇ ಅಧಿಕೃತ ಘೋಷಣೆ ಯನ್ನು ಮಾಡಿರಲಿಲ್ಲ. ಆದರೆ ಕೊನೆಗೂ ಅಭಿಮಾನಿಗಳ ಕಾಯುವಿಕೆಗೆ ಇದೀಗ ಸಿಹಿಸುದ್ದಿ ಅಧಿಕೃತವಾಗಿ ಕೇಳಿಬಂದಿದೆ.
ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ 2009ರಲ್ಲಿ ಬಿಡುಗಡೆಯಾಗಿದ್ದ ದರ್ಶನ್ ಯಜಮಾನ ಸಿನಿಮಾ ಗೆ ಶೈಲಜಾ ನಾಗ್ ರವರು ಬಂಡವಾಳ ಹಾಕಿದ್ದರು, ಹಾಗೂ ವಿ ಹರಿಕೃಷ್ಣ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದೀಗ ಮತ್ತೆ ಅದೇ ಕಾಂಬಿನೇಷನ್ನಲ್ಲಿ ಮತ್ತೊಂದು ಚಿತ್ರ ಸಿದ್ಧವಾಗುತ್ತಿದ್ದು ಶೈಲಜಾ ನಾಗ್ ರವರು ದರ್ಶನ್ ರವರ 55ನೇ ಸಿನಿಮಾಗೆ ನಾನು ಮತ್ತು ಬಿ ಸುರೇಶ್ ಊಡಿಕೆ ಮಾಡಲಿದ್ದೇವೆ ಹಾಗೂ ಹರಿಕೃಷ್ಣ ರವರು ನಿರ್ದೇಶನ ಮಾಡಲಿದ್ದಾರೆ ಎಂದು ಟ್ವಿಟ್ಟರ್ನಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ.