ದರ್ಶನ್- ಸುದೀಪ್ ಒಟ್ಟಿಗೆ ನಟಿಸಬೇಕಿದ್ದ ಹೈ ವೋಲ್ಟೇಜ್ ಸಿನಿಮಾ ಮತ್ತೆ ಶುರುವಾಗುತ್ತಾ?? ಇದೇನಿಂದು ಹೊಸ ಸುದ್ದಿ??
ದರ್ಶನ್- ಸುದೀಪ್ ಒಟ್ಟಿಗೆ ನಟಿಸಬೇಕಿದ್ದ ಹೈ ವೋಲ್ಟೇಜ್ ಸಿನಿಮಾ ಮತ್ತೆ ಶುರುವಾಗುತ್ತಾ?? ಇದೇನಿಂದು ಹೊಸ ಸುದ್ದಿ??
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಸ್ನೇಹ ಅಂತ ಬಂದಾಗ ಮಂದಿಗೆ ನಮಗೆ ನೆನಪಾಗುತ್ತಿದ್ದಿದ್ದು ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್. ಹೌದು ಇತರ ಇವರಿಬ್ಬರ ಸ್ನೇಹ ಇಡೀ ಕನ್ನಡ ಚಿತ್ರರಂಗವೇ ಮನಮೆಚ್ಚಿ ಹೊಗಳುವಂತಾಗಿತ್ತು. ವಿಷ್ಣುವರ್ಧನ್ ರವರು ಎಲ್ಲೇ ಇದ್ದರೂ ಸಹ ಅವರ ಹಿಂದೆ ರೆಬಲ್ ಸ್ಟಾರ್ ಅಂಬರೀಶ್ ಅವರು ಅವರ ಹಿಂದೆ ಬೆಂಗಾವಲಾಗಿ ನಿಲ್ಲುತ್ತಿದ್ದರು.
ಅದಾದ ನಂತರ ಕನ್ನಡ ಚಿತ್ರರಂಗಕ್ಕೆ ಅಂತಹ ಸ್ನೇಹದ ಪರಿಚಯ ನೀಡಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಇವರಿಬ್ಬರು ಸಹ ಕನ್ನಡ ಚಿತ್ರರಂಗದಲ್ಲಿ ತಮ್ಮ ಸಿನಿ ಜರ್ನಿ ಯನ್ನು ಕಷ್ಟ ಹಾಗೂ ಪರಿಶ್ರಮದ ಮೂಲಕವೇ ಪ್ರಾರಂಭ ಮಾಡಿದ್ದರು. ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ತೂಗುದೀಪ್ ಶ್ರೀನಿವಾಸರವರ ಮಗನಾದರೂ ಕೂಡ ದರ್ಶನ್ ಅವರು ಚಿತ್ರರಂಗಕ್ಕೆ ತಂದೆ ಹೆಸರು ಹೇಳಿಕೊಳ್ಳದ ಮೂಲಕ ಬಂದಿದ್ದರು.
ಇನ್ನು ಕಿಚ್ಚ ಸುದೀಪ್ ರವರು ತಂದೆ ಕೋಟ್ಯಾಧೀಶ ಆದರೂ ಕೂಡ ತಮ್ಮ ಸ್ವಂತ ಪ್ರತಿಭೆಯ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದು ನೆಲೆ ನಿಂತು ಎಂದು ಇಬ್ಬರೂ ಕೂಡ ಕನ್ನಡ ಚಿತ್ರರಂಗದ ಟಾಪ್ ನಟರಾಗಿ ಕಾಣಿಸಿಕೊಂಡಿದ್ದಾರೆ. ಇದಕ್ಕಾಗಿಯೇ ಇವರಿಬ್ಬರು ಅತ್ಯಂತ ಖಾಸ ದೋಸ್ತ್ ಗಳಾಗಿ ಕನ್ನಡ ಚಿತ್ರರಂಗದಲ್ಲಿ ಪ್ರಚಲಿತವಾಗಿದ್ದರು. ಎಲ್ಲೇ ಕಾರ್ಯಕ್ರಮದಲ್ಲಿ ಆಗಲಿ ಸಿನಿಮಾ ಮುಹೂರ್ತ ಪೂಜೆಯಲ್ಲಾಗಲಿ ಕಿಚ್ಚ ದಚ್ಚು ಸದಾಕಾಲ ಒಟ್ಟಿಗೆ ಕಾಣಿಸಿ ಕೊಳ್ಳುತ್ತಿದ್ದರು. ಇವರಿಬ್ಬರ ಸ್ನೇಹ ಕಂಡು ಇಡೀ ಗಾಂಧಿನಗರವೇ ಹೊಟ್ಟೆಕಿಚ್ಚು ಪಡುವಷ್ಟು ಜನಪ್ರಿಯವಾಗಿತ್ತು.
ಆದರೆ ಇದೀಗ ಇವರಿಬ್ಬರ ನಡುವೆ ವೈಮನಸ್ಸಿನಿಂದಾಗಿ ಹಾಗೂ ಭಿನ್ನಾಭಿಪ್ರಾಯಗಳಿಂದಾಗಿ ಬಿರುಕು ಮೂಡಿದ್ದು ಇವರು ಒಬ್ಬರನ್ನೊಬ್ಬರು ಈಗ ಮುಖ ನೋಡಿ ಮಾತನಾಡುತ್ತಿಲ್ಲ. ಆದರೆ ಇಂದಿಗೂ ಕೂಡ ಇವರಿಬ್ಬರು ಒಂದಾಗುತ್ತಾರೆ ಎಂಬ ನಂಬಿಕೆಯಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಇವರಿಬ್ಬರ ಕಾಂಬಿನೇಷನ್ ನಲ್ಲಿ ಒಂದು ಸಿನಿಮಾ ಬರಲೆಂದು ಅಭಿಮಾನಿಗಳು ಅಂದಿನಿಂದ ಪ್ರಾರ್ಥಿಸಿಕೊಂಡು ಬರುತ್ತಿದ್ದಾರೆ. ಅದಕ್ಕೆ ಈಗ ಅವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬರಲು ಸಿದ್ಧವಾಗಿದೆ ಚಿತ್ರದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಾಗುತ್ತಿದೆ.
ಹೌದು ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಾಂಬಿನೇಷನ್ನಲ್ಲಿ ಎಲ್ಲ ಅಂದುಕೊಂಡಂತೆ ಆಗಿದ್ದರೆ ಈ ಹಿಂದೆಯೇ ಚಿತ್ರ ಬರಬೇಕಿತ್ತು. ಹೌದು ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಸೂಪರ್ ಹಿಟ್ ಚಿತ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿರ್ಮಾಪಕ ಆನಂದ ಅಪ್ಪುಗೋಳ ರವರು ಕಿಚ್ಚ ಹಾಗೂ ದಚ್ಚು ವನ್ನು ಇಟ್ಟುಕೊಂಡು ಬಾಲಿವುಡ್ ನ ಎವರ್ಗ್ರೀನ್ ಸೂಪರ್ ಹಿಟ್ ಚಿತ್ರ ಶೋಲೆಯನ್ನು ಕನ್ನಡದಲ್ಲಿ ರಿಮೇಕ್ ಮಾಡಲು ನಿರ್ಧರಿಸಿದ್ದರು.
ಶೋಲೆಯಲ್ಲಿ ಗೆಳೆತನದ ಸಂದೇಶವಿರುವ ಕಂಟೆಂಟ್ ಜಾಸ್ತಿ ಇರುವುದರಿಂದ ಕಿಚ್ಚ ಹಾಗೂ ದಚ್ಚುಗೆ ಸರಿಹೊಂದುತ್ತದೆ ಎಂಬುದು ಅವರ ಭಾವನೆಯಾಗಿತ್ತು. ಆದರೆ ಅದೇನೋ ಗೊತ್ತಿಲ್ಲ ಅವರಿಬ್ಬರಿಗೆ ಈ ಕತೆಯ ಕುರಿತಂತೆ ಅಷ್ಟೊಂದು ಒಲವಿಲ್ಲದ ಕಾರಣ ಆ ಚಿತ್ರದ ಯೋಜನೆ ತಯಾರಿಕೆ ಅರ್ಧದಲ್ಲೇ ನಿಂತಿತ್ತು. ಈ ವಿಷಯಗಳು ನಡೆದು ಹತ್ತಾರು ವರ್ಷಗಳು ಕಳೆದಿದ್ದರೂ ಸಹ ಇಂದಿಗೂ ಕೂಡ ಅಭಿಮಾನಿಗಳಿಗೆ ದಚ್ಚು ಹಾಗೂ ಕಿಚ್ಚ ಕಾಂಬಿನೇಷನ್ನಲ್ಲಿ ಒಂದು ಸಿನಿಮಾವನ್ನು ನೋಡಲು ಈಗಲೂ ಕೂಡ ಕೋಟ್ಯಾಂತರ ಮಂದಿ ಕಾತರರಾಗಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.