ಒಟ್ಟಿಗೆ ಮೈದಾನದಲ್ಲಿ ಕ್ರಿಕೆಟ್ ಹಾಡಿ, ಇದೀಗ ಬದ್ದ ವೈರಿಗಳಾಗಿರುವ ಭಾರತೀಯ ಕ್ರಿಕೆಟ್ ಆಟಗಾರರು ಯಾರ್ಯಾರು ಗೊತ್ತೇ??

ಒಟ್ಟಿಗೆ ಮೈದಾನದಲ್ಲಿ ಕ್ರಿಕೆಟ್ ಹಾಡಿ, ಇದೀಗ ಬದ್ದ ವೈರಿಗಳಾಗಿರುವ ಭಾರತೀಯ ಕ್ರಿಕೆಟ್ ಆಟಗಾರರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ತಾವುಗಳು ಕ್ರಿಕೆಟ್ ಆಟವಾಡುವ ವರ್ಷಗಳಲ್ಲಿ ಆಟಗಾರರು ಸಾಕಷ್ಟು ಸಮಯವನ್ನು ಒಟ್ಟಿಗೆ ಕಳೆದ ನಂತರ ಉತ್ತಮ ಸ್ನೇಹಿತರಾಗುತ್ತಾರೆ, ಅದು ಮೈದಾನದಲ್ಲಿರಲಿ ಅಥವಾ ಮೈದಾನದಿಂದ ಹೊರಗಿರಲಿ. ಆದರೆ ಇಂದು, ನಾವು ಒಮ್ಮೆ ಸ್ನೇಹ ಸಂಬಂಧವನ್ನು ಹಂಚಿಕೊಂಡು ನಂತರ ಕೆಲವೇ ವರ್ಷಗಳಲ್ಲಿ ಸ್ನೇಹವನ್ನು ಬೇಡ ಎಂದು ಇದೀಗ ಬದ್ದ ವೈರ್ ಗಳಾಗಿರುವ ಆಟಗಾರರ ಬಗ್ಗೆ ಮಾತನಾಡುತ್ತೇವೆ.

ವಿನೋದ್ ಕಾಂಬ್ಲಿ-ಸಚಿನ್ ತೆಂಡೂಲ್ಕರ್: ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಲಿ ಅವರ ಸ್ನೇಹ ಶಾಲೆಯಿಂದ ಪ್ರಾರಂಭವಾಯಿತು. ಇಬ್ಬರೂ ಸಹೋದರ ಬಂಧವನ್ನು ಹಂಚಿಕೊಂಡರು. ಆದರೆ ಶಾಲಾ ಮಟ್ಟದ ಪಂದ್ಯಾವಳಿಯ ನಂತರ ಅವರ ಸ್ನೇಹದಲ್ಲಿ ಹುಳಿ ಕಾಣಿಸಿಕೊಂಡಿತು. ಇವರಿಬ್ಬರು ವರ್ಷಗಳಿಂದ ಪರಸ್ಪರ ಮಾತನಾಡಲಿಲ್ಲ. ಒಮ್ಮೆ ವಿನೋದ್ ಕಾಂಬ್ಲಿ ಅವರು ಸಚಿನ್ ಅವರಿಗೆ ಅಗತ್ಯವಿರುವಾಗ ಸಹಾಯ ಮಾಡಲಿಲ್ಲ ಎಂದು ಆರೋಪಿಸಿದ್ದರು.

ಮುರಳಿ ವಿಜಯ್-ದಿನೇಶ್ ಕಾರ್ತಿಕ್: ಟೀಮ್ ಇಂಡಿಯಾ ಪರ ದಿನೇಶ್ ಕಾರ್ತಿಕ್ ಮತ್ತು ಮುರಳಿ ವಿಜಯ್ ಒಟ್ಟಿಗೆ ಕ್ರಿಕೆಟ್ಆ ಡಿದ್ದರು. ಅವರು ಹಂಚಿಕೊಂಡ ಸ್ನೇಹವೂ ತುಂಬಾ ಆಳವಾಗಿತ್ತು. ಆದರೆ ಮುರಳಿ ವಿಜಯ್ ದಿನೇಶ್ ಕಾರ್ತಿಕ್ ಅವರ ಮೊದಲ ಹೆಂಡತಿಯನ್ನು ಮದುವೆಯಾದ ನಂತರ ಅವರ ಸಂಬಂಧ ಕೊನೆಗೊಂಡಿತು.

ವಿರಾಟ್ ಕೊಹ್ಲಿ-ಗೌತಮ್ ಗಂಭೀರ್: ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವಿನ ಪರಿಸ್ಥಿತಯ ಬಗ್ಗೆ ಎಲ್ಲರಿಗೂ ಚೆನ್ನಾಗಿ ತಿಳಿದಿದೆ. ಆರಂಭಿಕ ದಿನಗಳಲ್ಲಿ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದರು. ಆದರೆ, ಐಪಿಎಲ್ ಪಂದ್ಯದ ವೇಳೆ ನಡೆದ ಘಟನೆಯಿಂದಾಗಿ ಇವರಿಬ್ಬರು ಇಂದಿಗೂ ಕೂಡ ಪರಸ್ಪರ ಮಾತನಾಡುವುದಿಲ್ಲ ಹಾಗೂ ಗೌತಮ್ ಗಂಭೀರ್ ರವರು ಇಂದಿಗೂ ಕೂಡ ವಿರಾಟ್ ರವರ ನಾಯಕತ್ವವನ್ನು ಒಪ್ಪುವುದಿಲ್ಲ.

ಮಹೇಂದ್ರ ಸಿಂಗ್ ಧೋನಿ-ವೀರೇಂದ್ರ ಸೆಹ್ವಾಗ್: ಎಂ.ಎಸ್.ಧೋನಿ ಮತ್ತು ವೀರೇಂದ್ರ ಸೆಹ್ವಾಗ್ ಅವರು ಉತ್ತಮ ಸಂಬಂಧವನ್ನು ಹೊಂದಿದ್ದರು. ಆದರೆ ಇಬ್ಬರ ನಡುವೆ ಅನೇಕ ಜಗಳಗಳು ನಡೆದವು. ಧೋನಿ ಅವರನ್ನು ತಂಡದಿಂದ ಕೈಬಿಟ್ಟಿದ್ದಾರೆ ಎಂದು ವೀರೇಂದ್ರ ಸೆಹ್ವಾಗ್ ಯಾವಾಗಲೂ ಆರೋಪಿಸುತ್ತಾರೆ.

ಯುವರಾಜ್ ಸಿಂಗ್ – ಮಹೇಂದ್ರ ಸಿಂಗ್ ಧೋನಿ: ಯುವರಾಜ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಧೋನಿ ನಡುವಿನ ಸಂಬಂಧವು ಮೈದಾನದಿಂದ ಹೊರಗೆ ಅಕ್ಷರಸಹ ಸಹೋದರರಂತೆಯೇ ಇತ್ತು. ಆದಾಗ್ಯೂ, ಯುವರಾಜ್ ಸಿಂಗ್ ಕ್ಯಾನ್ಸರ್ ಅನ್ನು ಸೋಲಿಸಿ ಹಿಂದಿರುಗಿದಾಗ, ಅವರನ್ನು ನಿರಂತರವಾಗಿ ತಂಡದಿಂದ ಕೈಬಿಡಲಾಯಿತು. ಆ ಸಮಯದಲ್ಲಿ ತಂಡದ ನಾಯಕನಾಗಿದಿದ್ದು ಧೋನಿ.ಹಾಗಾಗಿ ಧೋನಿ ತನ್ನ ಮಗನ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾನೆ ಎಂದು ಯುವರಾಜ್ ತಂದೆ ಆರೋಪಿಸಿದ್ದಾರೆ.