ತೆಂಗು ಬೆಳೆಗಾರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಮೋದಿ ಸರ್ಕಾರ. ಏನು ಗೊತ್ತಾ??
ತೆಂಗು ಬೆಳೆಗಾರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಮೋದಿ ಸರ್ಕಾರ. ಏನು ಗೊತ್ತಾ??
ನಮಸ್ಕಾರ ಸ್ನೇಹಿತರೇ ತೆಂಗು ಬೆಳೆಯುವ ನಾಡಿದು, ಕಂಗು ಬೆಳೆಯುವ ನಾಡಿದು, ನಮ್ಮ ನಾಡಿದು ನಮ್ಮದು . ಈ ಕವಿತೆಯನ್ನ ನೀವು ನಿಮ್ಮ ಶಾಲಾದಿನಗಳಲ್ಲಿ ಈ ಪದ್ಯವನ್ನ ಓದಿರುತ್ತಿರಿ. ಹೌದು ಈಗ ತೆಂಗು ಬೆಳೆದ ನಾಡಿಗೆ ಸುವರ್ಣಯುಗ ಬರುವ ದಿನ ಮತ್ತೊಮ್ಮೆ ಹತ್ತಿರ ಬರುತ್ತಿದೆ. ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ತೆಂಗನ್ನ ಹೆಚ್ಚಾಗಿ ಬೆಳೆಯುತ್ತಾರೆ.
ಆದರೇ ಇತ್ತಿಚಿನ ದಿನಗಳಲ್ಲಿ ತೆಂಗು ಬೆಳೆಗಾರರು ತೀವ್ರ ಸಂಕಷ್ಟ ಅನುಮವಿಸಿದ್ದರು. ಅಂತರ್ಜಲ ಕುಸಿತ, ನುಸಿಪೀಡೆ ರೋಗ, ಇಳುವರಿ ಕುಸಿತ, ಮಾರುಕಟ್ಟೆ ಏರಿಳೀತ, ಹೀಗೆ ಸಾಲು ಸಾಲು ಸವಾಲುಗಳು ತೆಂಗು ಬೆಳೆಗಾರರಿಗೆ ಮೇಲಿಂದ ಮೇಲೆ ಹೊಡೆತ ಕೊಡುತ್ತಿದ್ದವು. ಈಗ ಇತ್ತಿಚೆಗಷ್ಟೇ ಕನ್ನಡತಿ ಶೋಭಾ ಕರಂದ್ಲಾಜೆ ಕೇಂದ್ರ ಕೃಷಿ ರಾಜ್ಯ ಸಚಿವರಾದ ನಂತರ ತೆಂಗು ಬೆಳೆಗಾರರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಸಚಿವರಾದ ತಕ್ಷಣವೇ ಶೋಭಾ ಕರಂದ್ಲಾಜೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನ ಭೇಟಿ ಮಾಡಿ ತೆಂಗು ಬೆಳೆಗಾರರ ಸಂಕಷ್ಟದ ಬಗ್ಗೆ ತಿಳಿಸಿದ್ದರು. ಈ ಬಗ್ಗೆ ಚಿಂತಿಸಿದ ಪ್ರಧಾನ ಮಂತ್ರಿಗಳು ಈಗ ಮೊದಲ ಭಾರಿಗೆ ತೆಂಗು ರಫ್ತಿಗೆ ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ತೆಂಗು ಬೆಳೆಗಾರರಿಗೆ ಉತ್ತೇಜನ ನೀಡುವ ದೃಷ್ಠಿಯಿಂದ ಹಾಗೂ ಉತ್ತಮ ಬೆಲೆ ಕೊಡಿಸುವ ದೃಷ್ಠಿಯಿಂದ ತೆಂಗು ರಫ್ತಿಗೆ ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಒಂದು ಅಂದಾಜಿನ ಪ್ರಕಾರ ದೇಶದಲ್ಲಿರುವ ಐದು ಲಕ್ಷಕ್ಕಿಂತ ಜಾಸ್ತಿ ಇರುವ ತೆಂಗು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ಅದಲ್ಲದೇ ಈ ಹಿಂದೆ ತೆಂಗು ಬೆಳೆಗಾರರ ಮಂಡಳಿ ಎಂದು ಸ್ಥಾಪಿಸಿ ಅದಕ್ಕೆ ಐ.ಎ.ಎಸ್ ಅಧಿಕಾರಿಗಳನ್ನ ನೇಮಿಸುತ್ತಿದ್ದರು. ಆದರೇ ಈಗ ಅದರ ಬದಲು ರೈತರನ್ನೇ ನೇಮಿಸಲು ಚಿಂತಿಸಿದೆ. ಆರು ಜನ ಸದಸ್ಯರಿದ್ದ ಮಂಡಳಿಗೆ ಇನ್ನು ಮುಂದೆ ಎಂಟು ಜನ ಸದಸ್ಯರು ಇರಲಿದ್ದಾರೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ದಕ್ಷಿಣ ಭಾರತೀಯರಿಗೆ ಹೆಚ್ಚು ಲಾಭವಾಗಲಿದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರದ ಈ ತೆಂಗು ರಫ್ತಿನ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.