ಕನ್ನಡ ’ದೃಶ್ಯ– 2’ ಚಿತ್ರಕ್ಕೆ ಕನ್ನಡ ಚಿತ್ರರಂಗದ ಲೆಜೆಂಡ್ ಎಂಟ್ರಿ, ರವಿಚಂದ್ರನ್ ಜೊತೆ ಇರುವ ಹಿರಿಯ ನಟ ಯಾರು ಗೊತ್ತೇ??

ಕನ್ನಡ ’ದೃಶ್ಯ– 2’ ಚಿತ್ರಕ್ಕೆ ಕನ್ನಡ ಚಿತ್ರರಂಗದ ಲೆಜೆಂಡ್ ಎಂಟ್ರಿ, ರವಿಚಂದ್ರನ್ ಜೊತೆ ಇರುವ ಹಿರಿಯ ನಟ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ 8 ವರ್ಷಗಳ ಹಿಂದೆ ಸಕ್ಕತ್ ಸುದ್ಧಿ ಮಾಡಿದ್ದ ದೃಶ್ಯ ಚಿತ್ರವನ್ನು ನೀವು ನೋಡಿದ್ದರೆ ಆ ಚಿತ್ರವನ್ನು ಮರೆಯಲು ಸಾಧ್ಯವೇ ಇಲ್ಲ. ಕ್ರೇಜಿಸ್ಟಾರ್ ರವಿಚಂದ್ರನ್, ರಾಜೇಂದ್ರ ಪೊನ್ನಪ್ಪನಾಗಿ ಕಾಣಿಸಿಕೊಂಡಿದ್ದರು. ನವ್ಯಾ ನಾಯರ್ ರವಿಚಂದ್ರನ್ ಅವರಿಗೆ ನಾಯಕಿಯಾಗಿ ಅಭಿನಯಿಸಿದ್ದರು. 2014ರಲ್ಲಿ ತೆರೆಕಂಡ ದೃಶ್ಯ ಚಿತ್ರ ಸೂಪರ್ ಸಕ್ಸೆಸ್ ಕಂಡಿತ್ತು.

’ದೃಶ್ಯ’ ಸಿನಿಮಾ ಮಲಯಾಳಂ ಚಿತ್ರದ ರಿಮೇಕ್ ಆಗಿತ್ತು. ’ದೃಶ್ಯಂ- 2’ ಚಿತ್ರ ಈಗಾಗಲೇ ಮಲಯಾಳಂ ನಲ್ಲಿ ತೆರೆಕಂಡು ಹಿಟ್ ಚಿತ್ರ ಎನಿಸಿಕೊಂಡಿದೆ. ದೃಶ್ಯಂ ಗಿಂತಲೂ ದೃಶ್ಯಂ -2 ಹೆಚ್ಚಿನ ರೆಸ್ಪಾನ್ಸ್ ಗಳಿಸಿದೆ. ಕನ್ನಡದಲ್ಲಿ ದೃಶ್ಯ – 2 ಕೂಡ ಚಿತ್ರೀಕರಣಕ್ಕೆ ಸಿದ್ಧವಾಗಿದೆ. ಪಿ. ವಾಸು ಅವರ ನಿರ್ದೇಶನದಲ್ಲಿ ಮೂಡಿರಬರಲಿರುವ ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ನವ್ಯಾ ನಾಯರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ದೃಶ್ಯ ಚಿತ್ರದಲ್ಲಿ ಅಭಿನಯಿಸಿದ್ದ ಇನ್ನಷ್ಟು ತಾರೆಯರು ಈ ಚಿತ್ರದಲ್ಲೂ ಮುಂದುವರೆಯಲ್ಲಿದ್ದಾರೆ.

‘ದೃಶ್ಯ – 2’ ನಲ್ಲಿ ಅಭಿನಯಿಸಲಿರುವ ಇನ್ನೊರ್ವ ಪ್ರಖ್ಯಾತ ನಟ ಯಾರು ಗೊತ್ತಾ? ಅವರೇ ಅನಂತ ನಾಗ್. ಹೌದು ಈ ಚಿತ್ರದಲ್ಲಿ ಹಿರಿಯ ನಟ, ಅನಂತ ನಾಗ್ ಕೂಡ ಮುಖ್ಯ ಪಾತ್ರಧಾರಿಯಾಗಿದ್ದಾರೆ. ಅನಂತ್ ನಾಗ್ ಅವರಿಗೆ ಚಿತ್ರವನ್ನು ವಿವರಿಸಿದ ಕೂಡಲೇ ಕೇಲವ ನಾಲ್ಕು ದಿನಗಳಲ್ಲಿ ಒಪ್ಪಿಗೆ ಸೂಚಿಸಿದರು. ಆ ತಕ್ಷಣ ಚಿತ್ರ ಮುಹೂರ್ತಕ್ಕೆ ಸಮಯ ನಿಗದಿಪಡಿಸಲಾಯಿತು ಎಂದು ನಿರ್ದೇಶಕ ಹೇಳಿದ್ದಾರೆ.

’ಪಿ. ವಾಸು ಅವರೊಂದಿಗೆ ಕೆಲಸ ಮಾಡುತ್ತಿರುವ ತನ್ನ 2ನೇ ಚಿತ್ರವಿದು. ಅವರೊಂದಿಗೆ ಕೆಲಸ ಮಾಡುವ ಖುಷಿಯಿದೆ. ಕಳೆದ ಒಂದುವರೆ ವರ್ಷದಿಂದ ನಾನು ಮನೆಯಲ್ಲಿಯೇ ಇದ್ದು ಈಗ ಕೆಲಸ ಮಾಡಲು ಶುರುವಾಗಿದ್ದು ಸಂತೋಷದ ವಿಷಯ. ಎಲ್ಲರೂ ಲಾಕ್ ಡೌನ್ ನಲ್ಲಿ ತೂಕ ಹೆಚ್ಚಿಸಿಕೊಂಡರೆ ನಾನು 4 ಕೆಜಿ ಇಳಿದಿದ್ದೇನೆ’ ಎಂದು ಮುಹೂರ್ತದ ವೇಳೆ ಅನಂತ ನಾಗ್ ಹೇಳಿದರು. ಪಿ ವಾಸು ಅವರ ’ಆಯುಷ್ಮಾನ್ ಭವ’ ಚಿತ್ರದಲ್ಲಿ ನಟಿಸಿದ್ದರು ಅನಂತ್ ನಾಗ್.

ಯಲಹಂಕ ಬಳಿಯ ವೈಟ್ ಹೌಸ್ ನಲ್ಲಿ ದೃಶ್ಯ -2 ಮುಹೂರ್ತ ನೆರವೇರಿಸಿ, ಚಿತ್ರೀಕರಣವೂ ಭರದಿಂದ ಸಾಗಿದೆ. ಮುಖ್ಯ ತಾರಾಗಣದ ಜೊತೆಗೆ ರವಿಚಂದ್ರನ್ ಅವರ ಪುತ್ರಿ ಪಾತ್ರದಲ್ಲಿ ಆರೋಹಿ ನಾರಾಯಣ್ ಅಭಿನಯಿಸುತ್ತಿದ್ದಾರೆ. ಪ್ರಭು ಶಿವಾಜಿ, ನೀತು ರೈ, ಪ್ರಮೋದ್ ಶೆಟ್ಟಿ, ಅಶೋಕ್, ಶಿವರಾಮ್, ಸಾಧುಕೋಕಿಲ, ಲಾಸ್ಯಾ ನಾಗರಾಜ್ ಮೊದಲಾದವರು ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.