ರಾಹುಲ್ ದ್ರಾವಿಡ್ ಭಾರತದ ಪೂರ್ಣಾವಧಿ ಕೋಚ್ ಆಗಬಾರದು – ವಸೀಂ ಜಾಫರೊ ಹೀಗೆ ಹೇಳಿದ್ದು ಏಕೆ ಗೊತ್ತೇ??
ರಾಹುಲ್ ದ್ರಾವಿಡ್ ಭಾರತದ ಪೂರ್ಣಾವಧಿ ಕೋಚ್ ಆಗಬಾರದು – ವಸೀಂ ಜಾಫರೊ ಹೀಗೆ ಹೇಳಿದ್ದು ಏಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಸದ್ಯ ಭಾರತ ಎರಡು ತಂಡಗಳಾಗಿ ಆಡುತ್ತಿರುವುದು ನಿಮಗೆಲ್ಲಾ ತಿಳಿದಿರುವ ವಿಷಯ. ಒಂದು ತಂಡ ಇಂಗ್ಲೆಂಡ್ ಪ್ರವಾಸದಲ್ಲಿದ್ದರೇ, ಮತ್ತೊಂದು ತಂಡ ಏಕದಿನ ಸರಣಿ ಆಡಲು ಶ್ರೀಲಂಕಾದಲ್ಲಿ ಬೀಡು ಬಿಟ್ಟಿದೆ. ಇಂಗ್ಲೇಂಡ್ ನಲ್ಲಿರುವ ತಂಡಕ್ಕೆ ರವಿಶಾಸ್ತ್ರಿ ಕೋಚ್ ಆಗಿದ್ದರೇ, ಶ್ರೀಲಂಕಾದಲ್ಲಿರುವ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗಿದ್ದಾರೆ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿಯವರ ಅವಧಿ ಅಂತ್ಯವಾಗುತ್ತಿರುವ ಕಾರಣ, ಆ ಸ್ಥಾನಕ್ಕೆ ರಾಹುಲ್ ದ್ರಾವಿಡ್ ರನ್ನ ಮುಖ್ಯ ಕೋಚ್ ಆಗಿ ನೇಮಿಸಬೇಕೆಂದು ಕೆಲವು ಬಹಿರಂಗ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಈ ಬಗ್ಗೆ ಪರ ವಿರೋಧ ಚರ್ಚೆಗಳು ಸಹ ವ್ಯಕ್ತವಾಗಿದ್ದವು.
ಆದರೇ ಈಗ ಭಾರತದ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಈ ಬಗ್ಗೆ ಮಾತನಾಡಿದ್ದು, ಯಾವುದೇ ಕಾರಣಕ್ಕೂ ರಾಹುಲ್ ದ್ರಾವಿಡ್ ಭಾರತ ಮುಖ್ಯ ತಂಡ ಕೋಚ್ ಆಗಬಾರದು. ಅವರು ಭಾರತ ಎ ಹಾಗೂ ಅಂಡರ್ 19 ತಂಡದ ಮುಖ್ಯ ಕೋಚ್ ಆಗಿ ಮಾತ್ರ ಮುಂದುವರೆಯಬೇಕು ಎಂದು ಹೇಳಿದ್ದಾರೆ. ಹಳೇ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎನ್ನುವ ಹಾಗೇ ಭಾರತದ ಬೆಂಚ್ ಸ್ಟ್ರೆಂತ್ ಉತ್ತಮಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಭಾರತ ತಂಡ ಇಂದು ಎರಡು ತಂಡಗಳಾಗಿ ಭಾಗವಹಿಸುತ್ತಿದೆ.
ಅದಲ್ಲದೇ ಆಸ್ಟ್ರೇಲಿಯಾ ವಿರುದ್ದ ಹಿರಿಯ ಆಟಗಾರರು ಗಾಯಗೊಂಡರೂ, ಸಹ ಹೊಸಬರು ಬಲಿಷ್ಠ ಆಸ್ಟ್ರೇಲಿಯಾವನ್ನ ಅದರದೇ ನೆಲದಲ್ಲಿ ಸೋಲಿಸಿದ್ದರು. ಇದಕ್ಕೆ ಮುಖ್ಯ ಕಾರಣ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ ಕಿರಿಯ ಆಟಗಾರರು. ಸದ್ಯ ಭಾರತ ಎ, ಅಂಡರ್ 19 ಹಾಗೂ ಎನ್.ಸಿ.ಎ ಮುಖ್ಯಸ್ಥರ ಹುದ್ದೆಯಲ್ಲಿರುವ ರಾಹುಲ್ ದ್ರಾವಿಡ್ ಅದೇ ಹುದ್ದೆಯಲ್ಲಿ ಮುಂದುವರೆಯಬೇಕು. ಆಗ ಮಾತ್ರ ಭಾರತ ವಿಶ್ವ ಕ್ರಿಕೇಟ್ ನಲ್ಲಿ ಅನಭಿಷಕ್ತ ದೊರೆಯಾಗಿ ಮೆರೆಯಬಹುದು ಎಂದು ತಿಳಿಸಿದರು. ವಸೀಂ ಜಾಫರ್ ರವರ ಈ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ರಾಹುಲ್ ದ್ರಾವಿಡ್ ಭಾರತ ಮುಖ್ಯ ತಂಡದ ಕೋಚ್ ಆಗಬೇಕೋ , ಬೇಡವೋ ಎಂಬುದನ್ನ ಕಮೆಂಟ್ ಮೂಲಕ ತಿಳಿಸಿ.