ಒಂದೇ ದಿನದಲ್ಲಿ ಹೀರೋ ಆದ ಪ್ರಶಾಂತ್ ಸಂಭರ್ಗಿ, ಸುದೀಪ್ ರವರ ಆ ಒಂದು ನಡೆಯಿಂದ ಪ್ರಶಾಂತ್ ವಿನ್ನರ್ ಆಗುತ್ತಾರೆ?? ನಡೆದ್ದದೇನು ಗೊತ್ತೇ??
ಒಂದೇ ದಿನದಲ್ಲಿ ಹೀರೋ ಆದ ಪ್ರಶಾಂತ್ ಸಂಭರ್ಗಿ, ಸುದೀಪ್ ರವರ ಆ ಒಂದು ನಡೆಯಿಂದ ಪ್ರಶಾಂತ್ ವಿನ್ನರ್ ಆಗುತ್ತಾರೆ?? ನಡೆದ್ದದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ವಾರ ಬಿಗ್ ಬಾಸ್ ನಲ್ಲಿ ಸಂಪೂರ್ಣ ಸೌಂಡ್ ಮಾಡುತ್ತಿದ್ದ ಪ್ರಶಾಂತ್ ಸಂಭರ್ಗಿ ರವರು, ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಬಾರಿ ಸದ್ದು ಮಾಡುತ್ತಿದ್ದರು. ಯಾಕೆಂದರೆ ಕೆಲವೊಂದು ವಿಚಾರಗಳಲ್ಲಿ ಪ್ರಶಾಂತ್ ಸಂಭರ್ಗಿ ರವರು ನಡೆದ ತಪ್ಪನ್ನು ಪ್ರಶ್ನಿಸಿದ್ದ ಕಾರಣ, ಪ್ರಶಾಂತ್ ಸಂಭರ್ಗಿ ರವರಿಗೆ ಎಂದಿದಂತೆ ಪ್ರೇಕ್ಷಕರ ಬೆಂಬಲ ನೀಡಿದ್ದರು. ನಮ್ಮ ಪ್ರೇಕ್ಷಕರು ಹೇಗೆ ಎಂದರೆ ಎಷ್ಟೇ ಅಭಿಮಾನಿಯಾಗಿದ್ದರೂ ಕೂಡ ಅಲ್ಲಿ ನಡೆದಿದ್ದು ತಪ್ಪು ಎಂದು ಕೂಡಲೇ ಸರಿಯಾಗಿ ಮಾತನಾಡಿದ ಸ್ಪರ್ದಿಯ ಪರವಾಗಿ ನಿಂತು ಬೆಂಬಲ ನೀಡುತ್ತಾರೆ.
ಅದೇ ಕಾರಣಕ್ಕಾಗಿ ಅರವಿಂದ್ ಅಭಿಮಾನಿಗಳು ಹಾಗೂ ದಿವ್ಯ ಉರುಡುಗ ರವರ ಅಭಿಮಾನಿಗಳು ಸೇರಿದಂತೆ ಇನ್ನಿತರ ಬಿಗ್ ಬಾಸ್ ನೋಡುವ ಪ್ರೇಕ್ಷಕರು ಪ್ರಶಾಂತ್ ಸಂಭರ್ಗಿ ರವರಿಗೆ ಈ ವಿಚಾರದಲ್ಲಿ ಬೆಂಬಲ ನೀಡಿದ್ದರು. ಯಾಕೆಂದರೆ ದಿವ್ಯ ಉರುಡುಗ ರವರು, ಕ್ಯಾಪ್ಟನ್ ಆಗಿ ತೆಗೆದುಕೊಂಡ ನಿರ್ಧಾರಗಳು ಅರವಿಂದ್ ವಿಚಾರದಲ್ಲಿ ಅಷ್ಟೊಂದು ಗಟ್ಟಿಯಾಗಿರಲಿಲ್ಲ ಎಂದು ಎಲ್ಲರಿಗೂ ತಿಳಿದಿತ್ತು. ಇದನ್ನು ಸುದೀಪ್ ಕೂಡ ಮೊದಲು ಹೊಗಳಿ ತದ ನಂತರ ದಿವ್ಯ ಉರುಡುಗ ರವರಿಗೆ ಅವರ ತಪ್ಪನ್ನು ತೋರಿಸಿ ಸರಿ ಮಾಡಿಕೊಳ್ಳುವಂತೆ ತಿಳಿಸಿದ್ದನ್ನು ನಾವು ಶನಿವಾರ ಎಪಿಸೋಡ್ ನಲ್ಲಿ ನೋಡಬಹುದಾಗಿದೆ.
ಇನ್ನು ಇದೇ ಸಮಯದಲ್ಲಿ ವಾರ ಪೂರ್ತಿ ಪ್ರೇಕ್ಷಕರ ಬಾರಿ ಬೆಂಬಲ ಪಡೆದಿದ್ದ, ಪ್ರಶಾಂತ್ ಸಂಭರ್ಗಿ ರವರು ಮನೆಯ ಮಂದಿಯ ಕಣ್ಣಲ್ಲಿ ಮಾತ್ರ ಅಕ್ಷರಸಹ ವಿಲ್ಲನ್ ಆಗಿದ್ದರು. ಅಷ್ಟೇ ಅಲ್ಲದೆ, ಪ್ರಶಾಂತ್ ಸಂಭರ್ಗಿ ರವರು ನಡೆದುಕೊಂಡ ರೀತಿಯಿಂದ ಅದೆಷ್ಟೋ ಜನ ತಪ್ಪು ಎಂದಿದ್ದರು. ಹಾಗೂ ಪ್ರಶಾಂತ್ ಸರಿ ಇಲ್ಲ ಎಂದಿದ್ದರು. ಆದರೆ ನಿನ್ನೆ ಶನಿವಾರದ ಎಪಿಸೋಡಿನಲ್ಲಿ ಸುದೀಪ್ ರವರು ಮನೆಯ ಮಂದಿಗೆಲ್ಲ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ, ಅರವಿಂದ್ ಹಾಗೂ ಪ್ರಶಾಂತ್ ನಡುವೆ ನಡೆದ ಕಹಿ ಘಟನೆಗೆ ಅರವಿಂದ್ ಇಗೋ ಕಾರಣ ಎಂಬುದನ್ನು ಬಹಿರಂಗ ಪಡಿಸಿದರು.
ಯಾಕೆಂದರೆ ಹೀಗೆ ದಿವ್ಯ ಉರುದುಗರವರನ್ನು ಉತ್ತಮ ಕ್ಯಾಪ್ಟನ್ ಎಂದು ಹೇಳುವುದಕ್ಕೆ ಪ್ರಶಾಂತ್ ರವರಿಗೆ ಒಂದು ಕಾರಣವಿತ್ತು. ತಾನು ನಡೆದುಕೊಂಡ ರೀತಿ ಸರಿ ಇಲ್ಲ ಎಂದು ತಿಳಿದು, ನನ್ನ ಪಾಯಿಂಟ್ ಸರಿಯಾಗಿದೆ ಆದರೆ ನಾನು ತಿಳಿಸಿದ ರೀತಿ ಸರಿ ಇಲ್ಲ, ಹಾಗೂ ಮನೆಯ ವಾತಾವರಣಕ್ಕೆ ನಾನೇ ಕಾರಣ ಎಂದು ಹೇಳಿ ಪ್ರಶಾಂತ್ ರವರು ದಿವ್ಯ ರವರ ಬಳಿ ಕ್ಷಮೆ ಕೇಳಿದ್ದರು. ಹಾಗೂ ಈ ಕಹಿ ಘಟನೆಗಳನ್ನು ಮರೆಯಲು ದಿವ್ಯ ಉರುಡುಗ ರವರ ಕ್ಯಾಪ್ಟನ್ಸಿ ಮುಗಿದ ತಕ್ಷಣವೇ ಉತ್ತಮ ಕಾಮೆಂಟ್ ಮಾಡಿದರು.
ಆದರೆ ಇದಕ್ಕೆ ಅರವಿಂದ್ ರವರು ತಕರಾರು ತೆಗೆದು, ಪ್ರಶಾಂತ್ ರವರನ್ನು ಸುಖ ಸುಮ್ಮನೆ ಕೆಣಕಿದರು. ಈ ವಿಷಯವನ್ನು ಸುದೀಪ್ ರವರು ನೇರವಾಗಿ ಅರವಿಂದ್ ರವರಿಗೆ ಹೇಳಿದಾಗ ಅರವಿಂದ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಿದರು. ಆದರೆ ಆಗಲು ಕೂಡ ಸುಮ್ಮನೆ ಸಾರೀ ಎಂದರೆ ವಿನಃ ಪ್ರಶಾಂತ್ ರವರಿಗೆ ಸಾರೀ ಎನ್ನಲಿಲ್ಲ. ಈ ಎಲ್ಲ ವಿಚಾರಗಳನ್ನು ಸೂಕ್ಶ್ಮವಾಗಿ ಗಮನಿಸುತ್ತಿದ್ದ ಪ್ರೇಕ್ಷಕರು, ಸುದೀಪ್ ರವರು ತಿಳಿಸಿದ ಪ್ರತಿಯೊಂದು ವಿಚಾರದಲ್ಲಿಯೂ ಪ್ರಶಾಂತ್ ಸರಿ ಇದ್ದಾರೆ ಎಂದು ಬಾರಿ ಬೆಂಬಲ ನೀಡುತ್ತಿದ್ದಾರೆ. ಈ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆಗಿ ಮಿಂಚುತ್ತಿದ್ದಾರೆ ಪ್ರಶಾಂತ್. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. ಅದೇ ಸಮಯದಲ್ಲಿ ಚಕ್ರವರ್ತಿ ರವರ ವಿಚಾರಗಳನ್ನು ಕೂಡ ತೆರೆದಿಟ್ಟರು. ಕೊನೆಯದಾಗಿ ಈ ವಾರ ಪ್ರಶಾಂತ್ ಹೇಳಿದ ಮಾತುಗಳೆಲ್ಲವೂ ಸರಿ ಎಂಬ ಹಂತಕ್ಕೆ ಬಂತು ನಿಂತಿತು.