ದಿವ್ಯ ಉರುಡುಗ ರವರು ಅರವಿಂದ್ ರವರ ರವರ ಪರವಾಗಿ ಇದ್ದರೇ?? ಕೊನೆಗೂ ಸತ್ಯ ಬಯಲು. ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ನಲ್ಲಿ ಒಂದು ಇಂಟರೆಸ್ಟಿಂಗ್ ವಿಷಯ ಎಂದ್ರೆ ಅದು ನಟ ಸುದೀಪ್ ಅವರ ಪಂಚಾಯ್ತಿ. ಇದಕ್ಕಾಗಿಯೇ ವಾರಾಂತ್ಯಕ್ಕೋಸ್ಕರ ಜನ ಕಾಯ್ತಿರ್ತಾರೆ. ವಾರ ಪೂರ್ತಿ ಬಿಗ್ ಬಾಸ್ ನಲ್ಲಿ ನಡೇದ ಯಾವುದೇ ಘಟನೆ, ತಮಾಷೆ, ಊಟದ ವಿಷಯ, ಟಾಸ್ಕ್, ಕ್ಯಾಪ್ಟೆನ್ಸಿ, ಯಾವುದೇ ಇರಲಿ ಸುದೀಪ್ ಅವರ ಪಂಚಾಯ್ತಿಯಲ್ಲಿ ಈ ಎಲ್ಲಾ ವಿಷಯಗಳೂ ಚರ್ಚೆಯಾಗುತ್ತವೆ. ಬಿಗ್ ಬಾಸ್ ಮನೆಯಲ್ಲಿ ಯಾರೇ ತಪ್ಪು ಮಾಡಿದ್ದರೂ, ಸ್ಪರ್ಧಿಗಳ ನಡುವೆ ಯಾವುದೇ ಗೊಂದಲಗಳಿದ್ದರೂ ಸುದೀಪ್ ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತಾರೆ. ತಪ್ಪಿದ್ದವರಿಗೆ ತಿದ್ದಿ ಬುದ್ಧಿ ಹೇಳುತ್ತಾರೆ.

ಈ ವಾರಾಂತ್ಯದ ಪಂಚಾಯ್ತಿಯಲ್ಲಿ ಸುದೀಪ್ ಸಾಕಷ್ಟು ವಿಚಾರಗಳನ್ನು ಚರ್ಚಿಸಿದ್ದರು. ಅದರಲ್ಲಿ ದಿವ್ಯಾ ಉರುಡುಗ ಅವರ ಕ್ಯಾಪ್ಟೆನ್ಸಿ, ಅವರು ತೆಗೆದುಕೊಂಡ ನಿರ್ಧಾರಗಳ ಬಗ್ಗೆಯೇ ಹೆಚ್ಚಾಗಿತ್ತು. ದಿವ್ಯಾ ಉರುಡುಗ ಅವರು ಕ್ಯಾಪ್ಟೆನ್ಸಿಗಾಗಿ ನೀಡಲಾಗಿದ್ದ ಕೀ ಹುಡುಕುವ ಟಾಸ್ಕ್ ನಲ್ಲಿ “ಕಾನ್ಫ್ಲಿಕ್ಟ್ ಆಫ್ ಇಂಟರೆಸ್ಟ್” ತೋರಿಸಿದ್ದರು ಎಂದು ಸುದೀಪ್ ದಿವ್ಯಾ ಅವರನ್ನು ತರಾಟೆಗೆ ತೆಗೆದುಕೊಂಡರು.

ದಿವ್ಯಾ ಉರುಡುಗ ಅವರು ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆದಾಗಿನಿಂದ ಎಲ್ಲಾ ಟಾಸ್ಕ್ ಗಳಲ್ಲಿಯೂ ಹೆಚ್ಚು ಕಮ್ಮಿ ಸರಿಯಾದ ತೀರ್ಮಾನವನ್ನು ನೀಡಿದ್ದಾರೆ ಎಂದು ಮನೆಯ ಸದಸ್ಯರು ಒಪ್ಪಿದ್ದರು. ಆದರೆ ಕ್ಯಾಪ್ಟೆನ್ಸಿ ಟಾಸ್ಕ್ ನಲ್ಲಿ ಸ್ಪರ್ಧಿಗಳಿಗೆ ಕೊಟ್ಟ ಬಾಕ್ಸ್ ಓಪನ್ ಆಗಲು ಬೇಕಿರುವ ಕೀ ಹುಡುಕಬೇಕು, ಅವರು ಹುಡುಕಿದ ಕೀಯಿಂದ ಅವರ ಬಾಕ್ಸ್ ಓಪನ್ ಆಗದೇ ಇದ್ದಲ್ಲಿ ಅದನ್ನು ಪುನಃ ಮತ್ತೆ ಹುಡುಕುವ ಜಾಗಕ್ಕೇ ಹಾಕಬೇಕು. ಯಾಕೆಂದರೆ ಇದು ಇನ್ನೊಬ್ಬರ ಬಾಕ್ಸ್ ತೆರೆಯಲು ಸಹಾಯವಾಗುವ ಕೀ ಆಗಿರಲೂ ಬಹುದು. ಹಾಗೆಯೇ ಏಕಕಾಲಕ್ಕೆ ಒಂದೇ ಕೀ ಮಾತ್ರ ತರಬಹುದಿತ್ತು.

ಅರವಿಂದ್ ಕೆ.ಪಿ ಬಾಕ್ಸ್ ತೆರೆಯಲು ತಂದ ಕೀಯಿಂದ ಬಾಕ್ಸ್ ತೆರೆಯಲು ಸಾಧ್ಯವಾಗದೇ ಇದ್ದಾಗ ಅವರು ಅದನ್ನು ಮತ್ತೆ ಕೀ ಹುಡುಕುವ ಬಾಕ್ಸ್ ಗೆ ಹಾಕಿರಲಿಲ್ಲ. ನಂತರ ಪ್ರಶಾಂತ್ ಅದನ್ನು ನೋಡಿ ಹೇಳಿದಾಗ ದಿವ್ಯಾ ಅದನ್ನು ಹಾಕಿದರು. ಆದರೆ ಇಲ್ಲಿ ಕೆಪಿ ಮಾಡಿದ ತಪ್ಪಿಗೆ ದಿವ್ಯಾ ಯಾವುದೇ ರೀತಿಯಲ್ಲಿ ಬೈ’ಯದೇ ಅಥವಾ ನಿಯಮ ಪಾಲನೆ ಮಾಡುವಂತೆ ಸೂಚಿಸದೇ ಸುಮ್ಮನಿದ್ದರು. ಆದರೆ ಶಮಂತ್ 2 ಕೀ ತಂದಿದ್ದಕ್ಕಾಗಿ ದಿವ್ಯಾ ಅವರದ್ದೇ ಶೈಲಿಯಲ್ಲಿ ವಾರ್ನಿಂಗ್ ಮಾಡಿದ್ದರು. ಇಲ್ಲಿ ಶಮಂತ್ ತಪ್ಪನ್ನು ಗುರುತಿಸಿದ್ದ ದಿವ್ಯಾ, ಅರವಿಂದ್ ತಪ್ಪನ್ನು ನೋಡಿಯೂ ನೋಡದಂತೆ ಇದ್ದರು ಎಂಬ ಕಾರಣಕ್ಕೆ “ಇಲ್ಲಿ ನಿಮ್ಮ ಕಾನ್ಫ್ಲಿಕ್ಟ್ ಆಫ್ ಇಂಟರೆಸ್ಟ್ ಕಾಣಿಸುತ್ತಿತ್ತು” ಎಂದು ಸುದೀಪ್ ದಿವ್ಯಾ ಉರುಡುಗ ಅವರ ತಪ್ಪನ್ನು ತೋರಿಸಿಕೊಟ್ಟರು. ಇದನ್ನು ದಿವ್ಯಾ ಕೂಡ ಒಪ್ಪಿ ಕ್ಷಮೆ ಕೇಳಿದರು.

Post Author: Ravi Yadav